ತಾಳಿಕೋಟೆ : ಪಟ್ಟಣದ ಡೋಣಿ ಶ್ರೀ ಹನುಮಾನ್ ಮಂದಿರದ(ಶ್ರೀ ರಂಗರಾವ್ ಮಹಾರಾಜರ ಮಠದ ಹತ್ತಿರ)ಹತ್ತಿರವಿರುವ ಕೋಟೆಗೋಡೆಯ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೋತ್ಸವವು ಪ್ರತೀ ವರ್ಷದಂತೆ ಈ ಸಲ ಶುಕ್ರವಾರರಂದು ವಿಜೃಂಭಣೆಯಿಂದ ಜರುಗಿತು.
ದಿ. ವೇ|| ಪುರುಷೋತ್ತಮಾಚಾರ್ಯ ಗ್ರಾಂ ಪುರೋಹಿತ ಅವರ ಸಹೋದರರಾದ ಶ್ರೀಧರ ಗ್ರಾಂ ಪುರೋಹಿತ ಹಾಗೂ ಶಿಷ್ಯಂದಿರಿಂದ ನೇತೃತ್ವದಲ್ಲಿ ನೇರವೇರಿದ ಈ ಜಾತ್ರೋತ್ಸವದ ಅಂಗವಾಗಿ ಬೆಳಿಗ್ಗೆ ೮ ಘಂಟೆಗೆ ಶ್ರೀದೇವಿಗೆ ಮಹಾಭಿಷೇಕ, ಪುಷ್ಪಾರ್ಚನೆ, ಅಲಂಕಾರ ಮಹಾಮಂಗಳಾರತಿ ಜರುಗಿತಲ್ಲದೇ ೮ ಘಂಟೆಯಿಂದ ಸುಮಂಗಲೆಯ ಕುಂಭ ಮೇಳದೊಂದಿಗೆ ಫಲ್ಲಕ್ಕಿ ಉತ್ಸವ ಹಾಗೂ ಶ್ರೀ ಲಕ್ಷ್ಮೀದೇವಿಯ ಭಾವಚಿತ್ರದದೊಂದಿಗೆ ಗಂಗಸ್ಥಳ ನೆರವೇರಿ ನಂತರ ಮೇರವಣಿಗೆಯು ಪ್ರಮುಖ ಬೀದಿಗಳಲ್ಲಿ ಹಾಯ್ದು ಪುನಃ ಮಂದಿರ ತಲುಪಿತು. ನಂತರ ಹೋಮ ಹವನ ಕಾರ್ಯಕ್ರಮಗಳು ಮಂದಿರದ ಆವರಣದಲ್ಲಿ ಜರುಗಿದವು ಮದ್ಯಾಹ್ನ ೧ ಘಂಟೆಯಿಂದ ೩ ಘಂಟೆಯವರೆಗೆ ತೀರ್ಥ ಪ್ರಸಾದ ಜರುಗಿತು.
ಸಾಯಂಕಾಲ ೬ ಘಂಟೆಗೆ ಶ್ರೀ ಮಹಾಲಕ್ಷ್ಮೀ ಹಾಗೂ ಗಾಯತ್ರಿ ಭಜನಾ ಮಂಡಳಿಯವರಿಂದ ಶ್ರೀ ಕೃಷ್ಣ ಧ್ಯಾನ, ಮಂತ್ರಜಪ ಹಾಗೂ ಲಕ್ಷ್ಮೀ ಸೋಬಾನ ಹಾಡುಗಳು ಜರುಗಿದವಲ್ಲದೇ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಜರುಗಿತು.