Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನಸೊಂದು ಶುರುವಾಗಿದೆ  ಟ್ರೇಲರ್ ರಿಲೀಸ್ ಮಾರ್ಚ್ 7ಕ್ಕೆ ತೆರೆಗೆ



     ಸಹಾರಾ ಸಿನಿಮಾ ಮೂಲಕ ಚಂದವನಕ್ಕೆ ಹೆಜ್ಜೆ ಇಟ್ಟಿದ್ದ ನಿರ್ದೇಶಕ ಮಂಜೇಶ್ ಈಗ 'ಕನಸೊಂದು ಶುರುವಾಗಿದೆ' ಚಿತ್ರದ ಮೂಲಕ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ರೆಡಿಯಾಗಿದ್ದಾರೆ. ಮಾರ್ಚ್ 7ರಂದು ತೆರೆಗೆ ಬರುತಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

     ನಟರಾದ ಡಾರ್ಲಿಂಗ್ ಕೃಷ್ಣ, ಲೂಸ್ ಮಾದಯೋಗಿ, ಸಾಹಸ ನಿರ್ದೇಶಕರ ಥ್ರಿಲರ್ ಮಂಜು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ತಂಡಕ್ಕೆ ಸಾಥ್ ಕೊಟ್ಟರು.

     ಡಾರ್ಲಿಂಗ್ ಕೃಷ್ಣ ಮಾತನಾಡಿ "ಟೈಟಲ್ ತುಂಬಾ ಇಷ್ಟವಾಯ್ತು. 'ಕ' ಡಿಸೈನ್ ಮಾಡಿರುವ ರೀತಿ ತುಂಬಾ ಚೆನ್ನಾಗಿದೆ. ಮಂಜೇಶ್ ಅವರಿಗೆ ಒಳ್ಳೆಯದಾಗಲಿ. ಇದು ಅವರ ಎರಡನೇ ಚಿತ್ರ ಇನ್ನೂ ಹೆಚ್ಚು ಒಳ್ಳೆ ಸಿನಿಮಾ ಮಾಡಲಿ . ನಿರ್ಮಾಪಕರಿಗೂ  ಕೂಡ ಒಳ್ಳೆದಾಗಲಿ. ಸಂತು ಲೀಡ್ ಆಕ್ಟಿಂಗ್ ಮಾಡಿದ್ದಾರೆ. ಇದು ದೊಡ್ಡ ಜವಾಬ್ದಾರಿ. ಸಿನಿಮಾ ನಿಲ್ಲಿಸುವುದು ಕಷ್ಟದ ಕೆಲಸ. ಪ್ರೇಕ್ಷಕರು  ಚಿತ್ರಮಂದಿರಗಳಲ್ಲಿಯೇ ಕನಸೊಂದು ಶುರುವಾಗಿದೆ ಸಿನಿಮಾವನ್ನು ನೋಡಿ ಹಾರೈಸಿ" ಎಂದು ತಿಳಿಸಿದರು.

     ನಟ ಲೂಸ್ ಮಾದಯೋಗಿ "ಇಡೀ ಚಿತ್ರತಂಡಕ್ಕೆ ಒಳ್ಳೆದಾಗ್ಲಿ. ಚಿಕ್ಕ ಸಿನಿಮಾ ದೊಡ್ಡ ಸಿನಿಮಾ ಮ್ಯಾಟರ್ ಅಲ್ಲ. ಜನ ನೋಡಬೇಕು. ಚಿಕ್ಕದೋ? ದೊಡ್ಡದೋ? ಅವರು ಡಿಸೈಡ್ ಮಾಡ್ತಾರೆ. ಇವತ್ತಿನ ಪರಿಸ್ಥಿತಿಗೆ ಸಿನಿಮಾ ಮಾಡೋದುವುದು ಸುಲಭ. ಆದರೆ ಅದನ್ನು ತಲುಪಿಸುವುದು ಕಷ್ಟ. ಅದೊಂದು ಫೋಕಸ್ ಆಗಿ ಮಾಡಿ. ಜನರಿಗೆ ರೀಚ್ ಆದರೆ ಸಾಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     ನಿರ್ದೇಶಕರಾದ ಮಂಜೇಶ್ ಭಾಗವತ್  "ಚಿಕ್ಕ ಕಥೆಯಿಂದ ಶುರುವಾದ ಜರ್ನಿ ಇದು. ಅಂದುಕೊಂಡ ಬಜೆಟ್ ಗಿಂತ ಸ್ವಲ್ಪ ಜಾಸ್ತಿ ಬಜೆಟ್ ಆಯ್ತು. ನಿರ್ಮಾಪಕರು ಕೂಡ ಸಾಥ್ ಕೊಟ್ಟರು. ಕನಸೊಂದು ಶುರುವಾಗಿದೆ ಎಂದರೆ ಅಪ್ಪು ಸರ್ ನೆನಪು ಬರ್ತಾರೆ. ಅವರ ಸಿನಿಮಾದ ಹಾಡಿನಲ್ಲಿ ಬರುವ ಲೈನ್ ಇಟ್ಕೊಂಡು ಟೈಟಲ್ ಇಟ್ಟಿದ್ದೇವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವೀ. ನೈಜ ಘಟನೆ ಇಟ್ಕೊಂಡು ಸಿನಿಮಾ ಮಾಡಲಾಗಿದೆ" ಎಂದು ಹೇಳಿದರು.

     ಕೆಕೆಆರ್ ಮೀಡಿಯಾ ಬ್ಯಾನರ್ ನಡಿ ಲಕ್ಷ್ಮೀ ಕಾಂತ್ ರೆಡ್ಡಿ ನಿರ್ಮಿಸಿರುವ 'ಕನಸೊಂದು ಶುರುವಾಗಿದೆ' ಚಿತ್ರದ ಮೂಲಕ ಸಂತೋಷ್ ಬಿಲ್ಲವ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.  ಅವರಿಗೆ ಜೋಡಿಯಾಗಿ ನಟಿ ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ , ರಶ್ಮಿ, ರಾಜು ಕಾಲ್ಕುಣಿ, ಕೃಷ್ಣಮೂರ್ತಿ ಕನಕಪುರ, ನಾಗರತ್ನ ಭಟ್

ತಾರಾಬಳಗದಲ್ಲಿದ್ದಾರೆ. ಚಿತ್ರವನ್ನು ಬೆಂಗಳೂರು, ಕುಂದಾಪುರ  ಕುಣಿಗಲ್ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

     ಲೋಕೇಂದ್ರ ಸೂರ್ಯ

ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ, ದೀಪಕ್ ಸಿಎಸ್ ಗೌಡ ಸಂಕಲನವಿದಂ. ಶಶಾಂಕ್, ಸಿಂಪಲ್ ಸುನಿ ಮತ್ತು ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್ ಹಾಗೂ ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಮಾಚ್ 7ಕ್ಕೆ ಧೀರಜ್ ರಾಜ್ಯಾದ್ಯಂತ ಕನಸೊಂದು ಶುರುವಾಗಿದೆ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ