LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ಸಮರ್ಪಣಾ ಭಾವದಿಂದ ಶಿಕ್ಷಕ ವೃತ್ತಿಯನ್ನು ನಿರ್ವಹಿಸಬೇಕು : ಎಸ್.ಆರ್.ಬೆಳಗಲಿ

ಮೂಡಲಗಿ : ಇಂದಿನ ಸ್ಪರ್ಧಾತ್ಮಕ ಮತ್ತು ಒತ್ತಡಭರಿತ ಯುಗದಲ್ಲಿ ಶಿಕ್ಷಕರು, ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಕಾಯಾ-ವಾಚಾ-ಮನಸಾ ಸಮರ್ಪಣಾ ಭಾವದಿಂದ ಆತ್ಮತೃಪ್ತಿಗಾಗಿ ವೃತ್ತಿಯನ್ನು ನಿರ್ವಹಿಸಬೇಕು ಎಂದು ಶಿಕ್ಷಕರು, ಅಧ್ಯಾತ್ಮ ಪ್ರವಚನಕಾರರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಎಸ್.ಆರ್.ಬೆಳಗಲಿ ಹೇಳಿದರು. 

ತಾಲೂಕಿನ ಜೋಕಾನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೋಗಿಸಿದ್ದೇಶ್ವರ ತೋಟ, ಶಾಲೆಯಲ್ಲಿ ಆಯೋಜಿಸಲಾದ ವಾರದ ಅತಿಥಿ ಕಾರ್ಯಕ್ರಮದ ಅಂಗವಾಗಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರ ವ್ಯಕ್ತಿತ್ವ, ನಡವಳಿಕೆ ಮತ್ತು ಮೌಲ್ಯಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ಕೂಡ ಗುರುವಿನ ಮೇಲೆ ವಿಶ್ವಾಸ, ಗೌರವ ಮತ್ತು ಭಕ್ತಿಯನ್ನು ಬೆಳೆಸಿಕೊಂಡು ನಿರಂತರ ಅಭ್ಯಾಸ, ಶಿಸ್ತು, ಸಮಯಪಾಲನೆ ಮತ್ತು ಸಕಾರಾತ್ಮಕ ಚಿಂತನೆಯಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸುತ್ತ, ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನದ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು.  

ಕಾರ್ಯಗಾರದಲ್ಲಿ ಶಿಕ್ಷಕರಾದ ಈರಣ್ಣ ನಿಡುಗುಂದಿ, ಜಯಶ್ರೀ ಪೂಜಾರಿ, ಚೈತ್ರ ಗಿರೆನ್ನವರ, ನಿರ್ಮಲಾ ಯಡ್ರಾವಿ ಹಾಗೂ ಸವಿತಾ ಮಾದರ ಉಪಸ್ಥಿತರಿದ್ದರು. ಶಿಕ್ಷಕರ ವೃತ್ತಿಪರ ಕೌಶಲ್ಯ, ಮಾನವೀಯ ಮೌಲ್ಯಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳ ಕುರಿತು ನಡೆದ ಚರ್ಚೆಗಳು ಕಾರ್ಯಗಾರಕ್ಕೆ ವಿಶೇಷ ಮೆರುಗು ನೀಡಿದವು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುಣಾತ್ಮ ಶಿಕ್ಷಣ, ಒಳ್ಳೆಯ ಸಂಸ್ಕಾರ ನೀಡುವುದು ಶಿಕ್ಷಕರ ಆಧ್ಯ ಕರ್ತವ್ಯ: ಶಾಸಕ ಂiಶವಂತರಾಯಗೌಡ ಪಾಟೀಲಬರ ಪೀಡಿತ ತಾಲೂಕು ಘೋಷಣೆ ಶೇ.೨೦೦ ಖಚಿತ-ಶಾಸಕ ನಾಡಗೌಡಮುದ್ದೇಬಿಹಾಳ ಹಾಗೂ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಎ.ಎಸ್. ಪಾಟೀಲ್ ನಡಹಳ್ಳಿ ಆಗ್ರಹಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ; ರೈತರ ಹೆಸರಿನಲ್ಲಿ ರಾಜಕೀಯ ಮಾಡುವವರ ಬಗ್ಗೆ ಕಿವಿಗೊಡಬೇಡಿಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ನ್ಯಾಯಾಧೀಶ ಎನ್.ವಿ.ವಿಜಯಸೆ.೧೩ರಂದು ತಾಳಿಕೋಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯಹಿರೇಬಾಗೇವಾಡಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ*ಗೃಹಲಕ್ಷ್ಮಿ ಹಣದಿಂದ ರಥ ನಿರ್ಮಾಣಕ್ಕೆ ಗ್ರಾಮಸ್ಥರ ಕೊಡುಗೆ*; *ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ*ಸತೀಶ ಅಭಿಮಾನಿಗಳಿಂದ ಪ್ರತಿಭಟನೆಪೌಷ್ಠಿಕ ಆಹಾರ ಸೇವನೆಯಿಂದ ರಕ್ತಹೀನತೆ, ಅಪೌಷ್ಠಿಕತೆ ತಡೆ ಸಾಧ್ಯ: ನ್ಯಾ. ಮಹಾಂತೇಶ ದರಗದ