ಬೀಳಗಿ- ಪ್ರತಿ ಟನ್ ಕಬ್ಬಿಗೆ 5500 ರೂ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,ಬೀಳಗಿ ವ್ಯಾಪಾರಸ್ಥರ ಸಂಘದ ನೇತ್ರತ್ವದಲ್ಲಿ ಶನಿವಾರ ಕರೆ ನೀಡಿದ್ದ ಬೀಳಗಿ ಬಂದ್ ಸಂಪೂರ್ಣ ಯಶಸ್ವಿ ಕಂಡಿದೆ.
ಬೀಳಗಿ ಕ್ರಾಸ್ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಮುಂಜಾನೆ 7.೦೦ ಗಂಟೆಗೆ ಜಮಾವಣೆಗೊಂಡ ರೈತರು ಹೆದ್ದಾರಿ ಮಧ್ಯದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಹುಬ್ಬಳ್ಳಿ ವಿಜಯಪುರ ಬಾಗಲಕೋಟೆ ಮತ್ತು ಬೀಳಗಿ ಪಟ್ಟಣದ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿ ಹೋರಾಟ ಆರಂಭಿಸಿದ ರೈತರು ಮುಂಜಾನೆಯಿಂದಲೇ ಬೀಳಗಿ ಪಟ್ಟಣದ ಮುಖ್ಯ ಮಾರುಕಟ್ಟೆ ರಸ್ತೆಯಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಟ್ರ್ಯಾಕ್ಟರ್ ಮೂಲಕ ಸಂಚರಿಸಿ ವ್ಯಾಪಾರಸ್ಥರು,ಕಾಯಿಪಲ್ಲೆ ಮಾರಾಟಗಾರರಿಗೆ ಅಂಗಡಿ ತೆರೆಯದಂತೆ ಮನವಿ ಮಾಡಿ ಸಾಯಂಕಾಲವರಿಗೂ ಬೀಳಗಿ ಬಂದ್ ಮಾಡಿದರು.
ಸ್ಥಳಕ್ಕೆ ಎಸ್ಪಿ ಸಿದ್ದಾರ್ಥ್ ಗೋಯಲ್ ಬೇಟಿ - ಬೀಳಗಿ ಹೆದ್ದಾರಿ ಮೂಲಕ ಆರಂಭಗೊಂಡ ಪ್ರತಿಭಟನೆಯ ವಿಷಯ ತಿಳಿದು ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಕೆಲ ಕಾಲ ಬೀಳಗಿ ಸಿಪಿಐ ಹಣಮಂತ ಸಣಮನಿ ಅವರೊಂದಿಗೆ ಚರ್ಚಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುವಂತೆ ಸೂಚಿಸಿದರು.
ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ - ಹಲವಾರು ದಿನಗಳಿಂದ ಕಬ್ಬು ಬೆಳೆದ ರೈತರು ದರ ನಿಗದಿಗೆ ಒತ್ತಾಯಿಸಿ ಪ್ರತಿಭಟಿಸಿದರು ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಅದಕ್ಕಾಗಿ ರೈತ ಮುಖಂಡರಾದ ಚುನ್ನಪ್ಪಣ್ಣ ಹಾಗೂ ಶಶಿಕಾಂತ ಗುರೂಜಿ ಅವರ ಹೋರಾಟ ಬಲಗೊಳಿಸಿ ಪ್ರತಿ ಟನ್ ಕಬ್ಬಿಗೆ 5500 ರೂ ನಿಗದಿ ಮಾಡುವವರಿಗೂ ಹೋರಾಟ ನಿಲ್ಲುವುದಿಲ್ಲ, ಅನಿರ್ದಿಷ್ಟಾವಧಿ ಹೋರಾಟ ಇದಾಗಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.