Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಕಟಕೋಳ ಸಿದ್ದರಾಯಜ್ಜನವರ ಮಠದಲ್ಲಿ ವೈಭವದ ಜಾತ್ರಾ ಮಹೋತ್ಸವ: ಭಕ್ತ ಸಾಗರ, ಭಂಡಾರದ ನಮನ


ರಾಮದುರ್ಗ: ತಾಲೂಕಿನ ಕಟಕೋಳ ಜೀವಾಪೂರ ರಸ್ತೆಯಲ್ಲಿರುವ ಶ್ರೀ ಸಿದ್ದರಾಯಜ್ಜನವರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಿದ್ದರಾಯಜ್ಜನವರ ಹಾಗೂ ಯಲ್ಲಪ್ಪಜ್ಜನವರ ಗದ್ದುಗೆಗಳ ದರ್ಶನ ಪಡೆದು, ಭಂಡಾರ ಹಾರಿಸುವ ಮೂಲಕ ಸಾವಿರಾರು ಭಕ್ತರು ತಮ್ಮ ಅಪಾರ ಭಕ್ತಿ, ಶ್ರದ್ಧೆ ಹಾಗೂ ಭಾವೈಕ್ಯತೆಯನ್ನು ಮೆರೆದರು.
ಮುಂಜಾನೆ ಸಿದ್ದರಾಯಜ್ಜನವರ ಹಾಗೂ ಯಲ್ಲಪ್ಪಜ್ಜನವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಅಭಿನವ ಶ್ರೀ ಸಿದ್ದರಾಯಜ್ಜನವರು ವಿಶೇಷ ಪೂಜೆ ಸಲ್ಲಿಸಿ, ಭಕ್ತಿಪೂರ್ವಕವಾಗಿ ಭಂಡಾರ ಅರ್ಪಿಸುವ ಕಾರ್ಯಕ್ರಮ ನಡೆಯಿತು. ಭಕ್ತರು ನಿರಂತರವಾಗಿ ಭಂಡಾರ ಹಾರಿಸುತ್ತ ದೇವರ ದರ್ಶನ ಪಡೆದು ಪುನೀತರಾದರು.
ನೂರಾರು ವಾಲಗ, ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳ ಮಂಗಳನಾದದೊಂದಿಗೆ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಭಕ್ತರು ಭಂಡಾರ ಹಾರಿಸುತ್ತ, ತಮ್ಮ ಇಷ್ಟದೈವಗಳ ಮೇಲಿನ ಅಚಲ ನಂಬಿಕೆ ಹಾಗೂ ಭಕ್ತಿಯನ್ನು ವ್ಯಕ್ತಪಡಿಸಿದರು.
ಉತ್ಸವದ ವಿಶೇಷ ಆಕರ್ಷಣೆಯಾಗಿ ಅಭಿನವ ಶ್ರೀ ಸಿದ್ದರಾಯಜ್ಜನವರು  ವಾಲಗ ಆಡುವುದು, ಸುಡುವ ಹುಗ್ಗಿಯಲ್ಲಿ ಕೈಯಾಡಿಸಿ ಭಕ್ತರಿಗೆ ಪ್ರಸಾದ ನೀಡಿವುದು. ಹಾಗೂ ಸಾವಿರಾರೂ ಭಕ್ತರು ತಮ್ಮ ತಮ್ಮ ಭಕ್ತಿಗನುಸಾರ ಭಂಡಾರ ಹಾರಿಸುವುದು. ಈ ವಿಶಿಷ್ಟ ಧಾರ್ಮಿಕ ಆಚರಣೆಯನ್ನು ಕಣ್ತುಂಬಿಕೊಂಡ ಭಕ್ತರು ಭಕ್ತಿಪರವಶರಾದರು. 
ಭಂಡಾರ ಹಾರಿಸುವುದು, ವಾದ್ಯಗಳ ಮೆರವಣಿಗೆ, ದೇವರ ಜಯಘೋಷ ಹಾಗೂ ಮಹಾಪ್ರಸಾದದ ಮೂಲಕ ಇಡೀ ಪರಿಸರವು ಭಕ್ತಿಮಯವಾಗಿತ್ತು. ಭಕ್ತರ ಅಪಾರ ಸಮಾಗಮದೊಂದಿಗೆ ಧಾರ್ಮಿಕ ಕಾರ್ಯಕ್ರಮವು ಶ್ರದ್ಧೆ, ಸಂಭ್ರಮ ಮತ್ತು ಸೌಹಾರ್ದತೆಯಿಂದ ಜರುಗಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಧಕರಿಗೆ ಗೌರವ ನೀಡುವುದು ನಾಡಿನ ಸೇವೆ ಮುಂದುವರಿಸಲು ಪ್ರೇರಣೆಅಂಗಡಿ-ಮುಂಗಟ್ಟು ಬಂದ್ ಮಾಡಿ ವ್ಯಾಪಾರಿಗಳ ಬೆಂಬಲ; ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳೂ ರೈತರ ಹೋರಾಟಕ್ಕೆ ಸಾಥ್ಕಬ್ಬು ರೈತರ ಹೋರಾಟ - ಬೀಳಗಿ ಸಂಪೂರ್ಣ ಬಂದ್ಹುನಗುಂದದಲ್ಲಿ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿ-೫೦ ಬಂದ್!ಮಹಾನ್ ರಾಜಕೀಯ ಮುತ್ಸದ್ದಿ, ಶಿಕ್ಷಣ ಸಾಧಕ, ಮಾಜಿ ಸಚಿವ  ಶಿವಾನಂದ ಕೌಜಲಗಿ ಅವರ ಅಭಿಮಾನಿಗಳ  ದುಃಖದ ಮಡಿಲಲ್ಲಿ ಅಂತಿಮ  ಸಂಸ್ಕಾರ.ರೈತರ ಬದುಕಿನಲ್ಲಿ ಆಟವಾಡುತ್ತಿರುವ ಕೇಂದ್ರ ಸರ್ಕಾರ: ಪ್ರವೀಣ ಪಾಟೀಲಕೃಷ್ಣಾ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಸಂಸ್ಥೆ ಬೆಳೆಸಿ: ರೈತರಲ್ಲಿ ಅಧ್ಯಕ್ಷ ಪರಪ್ಪ ಸವದಿ ಮನವಿಕಬ್ಬಿಗೆ 5,500 ಬೆಲೆ ನಿಗದಿಗೆ ಆಗ್ರಹಿಸಿ ಅಥಣಿಯಲ್ಲಿ ರೈತರ ಪ್ರತಿಭಟನೆ/ ವಿವಿಧ ವೃತ್ತಗಳಲ್ಲಿ ರಸ್ತೆ ತಡೆದು ಆಕ್ರೋಶ; ಸೋಮವಾರದಿಂದ ಗುರ್ಲಾಪೂರದಲ್ಲಿ ಜೈಲ್ ಭರೋ ಚಳವಳಿ: ಶಶಿಕಾಂತ ಗುರುಜಿ ಎಚ್ಚರಿಕೆ""ಗುರ್ಲಾಪುರ ಬಂದ್  ಯಶಸ್ವಿ ""ಕಟಕೋಳ ಸಿದ್ದರಾಯಜ್ಜನವರ ಮಠದಲ್ಲಿ ವೈಭವದ ಜಾತ್ರಾ ಮಹೋತ್ಸವ: ಭಕ್ತ ಸಾಗರ, ಭಂಡಾರದ ನಮನ