Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ರೈತರ ಬದುಕಿನಲ್ಲಿ ಆಟವಾಡುತ್ತಿರುವ ಕೇಂದ್ರ ಸರ್ಕಾರ: ಪ್ರವೀಣ ಪಾಟೀಲ

ಕಬ್ಬಿಗೆ ?೫,೫೦೦ ಬೆಲೆ ನಿಗದಿಗೆ ಆಗ್ರಹಿಸಿ ರನ್ನ ಬೆಳಗಲಿಯಲ್ಲಿ ರೈತರ ರಸ್ತೆ ತಡೆ ಹೋರಾಟ

 

 

ರನ್ನ ಬೆಳಗಲಿ: ಅ.೩೧., ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನಿರ್ದೇಶನದ ಮೇರೆಗೆ ಪಟ್ಟಣದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯನ್ನು ತಡೆದು ರನ್ನ ಬೆಳಗಲಿಯ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರವೀಣ ಪಾಟೀಲ, ಕೇಂದ್ರ ಸರ್ಕಾರ ರೈತರ ಬದುಕಿನಲ್ಲಿ ಆಟವಾಡುತ್ತಿರುವುದು ಖಂಡನೀಯ. ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಯುತ್ತಿದೆ. ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿಯೂ ರೈತರ ಹೋರಾಟದ ಕಿಚ್ಚು ವ್ಯಾಪಿಸಿದೆ. ಈಗಲಾದರೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು, ಪ್ರತಿ ಟನ್ ಕಬ್ಬಿಗೆ ?೫,೫೦೦ ಬೆಲೆ ನಿಗದಿಪಡಿಸಬೇಕು. ಇದರಿಂದ ಕಬ್ಬು ಕಟಾವು ಕಾರ್ಯಕ್ಕೆ ಅನುಕೂಲ ಕಲ್ಪಿಸಿ ರೈತರ ಸಂಕ?ಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಸಂಗಪ್ಪ ಅಮಾತಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಬ್ಬು ಬೆಳೆಗಾರರ ಕ?ಕಾರ್ಪಣ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಸಮಿತಿ ರಚಿಸಿ, ರೈತರಿಗೆ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಮೂಲಕ ಕಬ್ಬು ಬೆಳೆಗಾರರನ್ನು ರಕ್ಷಿಸಬೇಕು. ರೈತರು ಕಬ್ಬು ಬೆಳೆಯುವುದನ್ನೇ ನಿಲ್ಲಿಸಿದರೆ ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳು ಕೂಡ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.ರೈತ ಯುವ ಮುಖಂಡರಾದ ಮಹಾದೇವ ನೇಸೂರ ಹಾಗೂ ಸಿದ್ದಾರ್ಥ ದೊಡಟ್ಟಿ ಅವರು ರೈತರ ಹೋರಾಟದ ಅಗತ್ಯತೆ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶಿವು ಮಾಳಿ, ಪಂಡಿತ ಪೂಜಾರಿ, ಮಂಜು ಕಂಕನವಾಡಿ, ಲಕ್ಷ್ಮಣ ಹಂಚಿನಾಳ, ರಾಹುಲ್ ಧರೆಪ್ಪನವರ, ರಾಮನಗೌಡ ಪಾಟೀಲ, ಮುತ್ತಪ್ಪ ಹೊಸಪೇಟೆ, ಕೆಂಚಪ್ಪ ಪೂಜಾರಿ, ಕರೆಪ್ಪ ಕುಂಬಾಳಿ, ಧರೆಪ್ಪ ಪೂಜೇರಿ, ಪರಮಾನಂದ ನಾಗರಾಳ, ಮಹಾಲಿಂಗಪ್ಪ ಉಸಳಿ, ಬಸಪ್ಪ ಮಿರ್ಜಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಧಕರಿಗೆ ಗೌರವ ನೀಡುವುದು ನಾಡಿನ ಸೇವೆ ಮುಂದುವರಿಸಲು ಪ್ರೇರಣೆಅಂಗಡಿ-ಮುಂಗಟ್ಟು ಬಂದ್ ಮಾಡಿ ವ್ಯಾಪಾರಿಗಳ ಬೆಂಬಲ; ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳೂ ರೈತರ ಹೋರಾಟಕ್ಕೆ ಸಾಥ್ಕಬ್ಬು ರೈತರ ಹೋರಾಟ - ಬೀಳಗಿ ಸಂಪೂರ್ಣ ಬಂದ್ಹುನಗುಂದದಲ್ಲಿ ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿ-೫೦ ಬಂದ್!ಮಹಾನ್ ರಾಜಕೀಯ ಮುತ್ಸದ್ದಿ, ಶಿಕ್ಷಣ ಸಾಧಕ, ಮಾಜಿ ಸಚಿವ  ಶಿವಾನಂದ ಕೌಜಲಗಿ ಅವರ ಅಭಿಮಾನಿಗಳ  ದುಃಖದ ಮಡಿಲಲ್ಲಿ ಅಂತಿಮ  ಸಂಸ್ಕಾರ.ರೈತರ ಬದುಕಿನಲ್ಲಿ ಆಟವಾಡುತ್ತಿರುವ ಕೇಂದ್ರ ಸರ್ಕಾರ: ಪ್ರವೀಣ ಪಾಟೀಲಕೃಷ್ಣಾ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಸಂಸ್ಥೆ ಬೆಳೆಸಿ: ರೈತರಲ್ಲಿ ಅಧ್ಯಕ್ಷ ಪರಪ್ಪ ಸವದಿ ಮನವಿಕಬ್ಬಿಗೆ 5,500 ಬೆಲೆ ನಿಗದಿಗೆ ಆಗ್ರಹಿಸಿ ಅಥಣಿಯಲ್ಲಿ ರೈತರ ಪ್ರತಿಭಟನೆ/ ವಿವಿಧ ವೃತ್ತಗಳಲ್ಲಿ ರಸ್ತೆ ತಡೆದು ಆಕ್ರೋಶ; ಸೋಮವಾರದಿಂದ ಗುರ್ಲಾಪೂರದಲ್ಲಿ ಜೈಲ್ ಭರೋ ಚಳವಳಿ: ಶಶಿಕಾಂತ ಗುರುಜಿ ಎಚ್ಚರಿಕೆ""ಗುರ್ಲಾಪುರ ಬಂದ್  ಯಶಸ್ವಿ ""ಕಟಕೋಳ ಸಿದ್ದರಾಯಜ್ಜನವರ ಮಠದಲ್ಲಿ ವೈಭವದ ಜಾತ್ರಾ ಮಹೋತ್ಸವ: ಭಕ್ತ ಸಾಗರ, ಭಂಡಾರದ ನಮನ