ಗುರ್ಲಾಪೂರ(30):- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರ್ನಾಟಕ ಬಂದ್ ಕರೆ ನೀಡಿದ್ದರಿಂದ ಗುರ್ಲಾಪೂರ ಗ್ರಾಮ ಸ್ವಯಂ ಪ್ರೇರಿತವಾಗಿ ಸಂಪೂರ್ಣ ಬಂದ್ ಮಾಡಲಾಯಿತು. ಊರಿನ ಎಲ್ಲ ಪ್ರಮುಖ ರಸ್ತೆಗಳು, ಅಂಗಡಿ ಮುಗ್ಗಟ್ಟುಗಳು, ಶಾಲಾ ಕಾಲೇಜುಗಳು ಸಂಪೂರ್ಣ ಬಂದ್ ಮಾಡಿ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ರೈತರ ಹೋರಾಟ ಕೇಂದ್ರ ವಾದ ಗುರ್ಲಾಪುರ ಕ್ರಾಸ್ ನಲ್ಲಿರುವ ಹೋರಾಟದ ವೇದಿಕೆಯಲ್ಲಿ ಪ್ರಮುಖ ನಾಯಕರಿಲ್ಲದೆ ಕೆಲವು ಜನರು ಮಾತ್ರ ಭಾಗವಹಿಸಿ ಹೋರಾಟ ಮುಂದುವರಿಸಿದ್ದಾರೆ.
ಹೋರಾಟದಲ್ಲಿ ನೆರೆದಿದ್ದ ರೈತ ಸಮೂಹಕ್ಕೆ ದಿನನಿತ್ಯದಂತೆ ಊಟದ ವ್ಯವಸ್ಥೆ ಒದಗಿಸಲಾಯಿತು. ಹೋರಾಟದಲ್ಲಿ ರೈತರು ಎತ್ತಿನ ಬಂಡೆ ಸಮೇತ ಎತ್ತುಗಳೊಂದಿಗೆ ಹೋರಾಟದ ವೇದಿಕೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಬೃಹತ್ ರೈತ ಹೋರಾಟಕ್ಕೆ ಸುತ್ತ ಮುತ್ತಲು ಊರಿಂದ ಹಣ್ಣು ಹಂಪಲು, ಹಾಲು, ರೊಟ್ಟಿ ಹರಿದು ಬಂತು. ಹೋರಾಟದಲ್ಲಿ ಸದಾಶಿವ ಕಳವಟಗಿ ಸ್ವಾಮಿಗಳು, ಮಹಾನಿಂಗ ಶಿವಾಪೂರ, ಸಿದ್ದು ಗಡ್ಡೆಕಾರ, ಚೆನ್ನಪ್ಪ ಮುಗಳಖೋಡ, ಸುರೇಶ ಪಾಟೀಲ್, ಮಹಾದೇವ್ ಕುಲಗೂಡ, ಶಿವಾನಂದ ಹಳ್ಳೂರ್, ಆನಂದ ನೇಮಗೌಡರ ಹಾಗೂ ಅನೇಕ ರೈತರು ಪಾಲ್ಗೊಂಡಿದ್ದರು.