ಹುನಗುಂದ,ಅ,೦೫ : ಪಟ್ಟಣದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುವ ಶ್ರೀ ವಿಜಯ ಮಹಾಂತೇಶ ಪ್ರೌಢ ಶಾಲೆ ಮತ್ತು ಶ್ರೀ ವಿಜಯ ಮಹಾಂತೇಶ ಪಪೂ ಕಾಲೇಜ ಸೇಎರಿದಂತೆ ಎರಡು ಕೇಂದ್ರಗಳಲ್ಲಿ ರವಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರ ನಡೆಸುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ ಪರೀಕ್ಷೆ ನಡೆದವು. ಬೆಳಿಗ್ಗೆ ೧೦-೩೦ರಿಂದ ೧೨-೩೦ರವರೆಗೆ ನಡೆದ ಪರೀಕ್ಷೆಗೆ ಪ್ರವೇಶ ಪತ್ರ, ಆಧಾರ ಕಾರ್ಡ ಮತ್ತು ಪೆನ್ನು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸಾಮಾನ್ಯ ಪರೀಕ್ಷೆಯಲ್ಲಿ ಪ್ರತ್ಯೇಕವಾಗಿ ೭೨೦ ಮತ್ತೊಂದು ಕೇಂದ್ರದಲ್ಲಿ ೬೦೦ ಹೀಗೆ ೧೩೨೦ ಜನ ಪರೀಕ್ಷೆ ಬರೆದರು. ಎರಡು ಕೇಂದ್ರದಲ್ಲಿ ೫೫ ಬ್ಲಾಕ್‌ಗಳಲ್ಲಿ ೫೫ ಜನ ಸುರ್‌ವೈಸರ್, ಇಬ್ಬರು ಚೀಪ್‌ಗಳು, ೪ಜನ ನೆಟ್‌ಜಾಮರ್, ಸ್ಕ್ಯಾನರ್, ಡ್ರೆಸ್ ಕೋಡ ಚಕಪ್ ಮತ್ತು ಪೊಲಿಸ್ ಸಿಬ್ಬಂದಿ ಕಾರ್‍ಯನಿರ್ವಹಿಸಿದರು. ಎರಡು ಕೇಂದ್ರಗಳಿಗೆ ಪೊಲಿಸ್ ಉಪಾಧೀಕ್ಷಕ ಸಂತೋಷ ಬನ್ನಟ್ಟಿ, ವೃತ್ತ ನಿರೀಕ್ಷಕ ಶರಣಬಸಪ್ಪ ಆಜೂರ, ಪಿಎಸ್‌ಐ ಸಿದ್ಧಾರೂಢ ಆಲದಕಟ್ಟಿ ಮತ್ತು ಅಪರಾಧ ವಿಭಾಗದ ಶ್ರೀ ಸಿಮಾನೆ ಹಾಗೂ ಪೊಲಿಸ್ ಸಿಬ್ಬಂದಿ ಕಾರ್‍ಯನಿರ್ವಹಿದರು. ಇದೆ ರೀತಿ ಮದ್ಯಾಹ್ನ ೨-೩೦ರಿಂದ ೪-೩೦ರವರೆಗೆ ಕನ್ನಡ, ಇಂಗ್ಲೀಷ್ ಮತ್ತು ಕಂಪ್ಯೂಟ್‌ರ್ ಪರೀಕ್ಷೆ ನಡೆದವು. ಕೇಂದ್ರಗಳ ಸುತ್ತಲೂ ೧೦೦ಮೀಟರ್ ವರೆಗೆ ನೆಟ್ ಜಾಮರ ಅಳವಡಿಕೆ ಮತ್ತು ಪೊಲಿಸ್ ಸಿಬ್ಬಂದಿ ಬಂದೋಬಸ್ತ ಕಾರ್‍ಯ ನಿರ್ವಹಿಸಿತ್ತು.