LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಬೆಳಗಾವಿ ಕನ್ನಡತನದ ನಿಲುವು: ಸಚಿವ ಸತೀಶ್ ಜಾರಕಿಹೊಳಿಗೆ ಕನ್ನಡ ಪರ ಸಂಘಟನೆಗಳಿಂದ ಸನ್ಮಾನ

ಘಟಪ್ರಭಾ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಮಹತ್ವದ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿದ ಹಿನ್ನೆಲೆಯಲ್ಲಿ, ಗೋಕಾಕದ ಹಿಲ್ ಗಾರ್ಡನ್ ಕಚೇರಿಗೆ ಭೇಟಿ ನೀಡಿದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ರವಿವಾರ ದಂದು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿಲುವಿಗೆ ಬದ್ಧವಾಗಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಹಾಗೂ ಕನ್ನಡ ನಾಡು-ನುಡಿಯ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆಗಳ ಕುರಿತು ಚರ್ಚಿಸಲಾಯಿತು.
ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದು, ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ ಕೆಂಪಣ್ಣ ಚೌಕಶಿ. ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಮುರಕುಂಬಿ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಶಿವರೆಡ್ಡಿ ಹುಚ್ಚರೆಡ್ಡಿ. ಕನ್ನಡ ಸೇನೆ ಗೋಕಾಕ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ ಮುಲ್ಲಾ, ಕರವೇ ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಸುರೇಶ ಚಿಗಡೊಳ್ಳಿ, ಕರವೇ ಮೂಡಲಗಿ ತಾಲೂಕು ಉಸ್ತುವಾರಿ ಅಧ್ಯಕ್ಷರಾದ ರಾಘವೇಂದ್ರ ಕುಡ್ಡೆಮ್ಮಿ. ಯಲ್ಲಪ್ಪ ಅಟ್ಟಿಮಿಟ್ಟಿ, ಶಶಿಧರ ಚೌಕಶಿ, ಕರವೇ ತಾಲೂಕ ಅಧ್ಯಕ್ಷ ಶೆಟ್ಯಪ್ಪ  ಗಾಡಿವಡ್ಡರ, ರೆಹಮಾನ್ ಮುಖಾಶಿ. ರವಿ ನಾವಿ, ರಾಜು ವಗ್ಗನವರ, ಲಕ್ಷ್ಮಣ ಮೆಳ್ಳಿಗೇರಿ, ಕರವೇ ಮಹಿಳಾ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಿ ಗಾಡಿವಡ್ಡರ, ಸಚಿನ ಪಾಟೀಲ, ಮಾಳಪ್ಪ ಪೂಜೇರಿ ಹಾಗೂ ಅನೇಕ ಸಂಘಟನೆ ಕಾರ್ಯಕರ್ತರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಕೊಡುಗೆ: ಎರಡು ಚಿರತೆ, ಒಂದು ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ!ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲಹುನಗುಂದದಲ್ಲಿ ಯಶಸ್ವಿಯಾಗಿ ಜರುಗಿದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯುವಶಕ್ತಿಗೆ ಸರ್ಕಾರದ ಬಲ: ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ; ಕ್ರೀಡೆ, ಸಂಸ್ಕೃತಿ, ಸಾಮಾಜಿಕ ಸೇವೆ ಸೇರಿ ವಿವಿಧ ಚಟುವಟಿಕೆಗಳಿಗೆ ಅವಕಾಶಪರಿಸರ, ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ : ಪಾಟೀಲರಾಯಬಾಗ: ಸರ್ಕಾರಿ ನಿವೃತ್ತ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಗ್ರಾಮ ಆಡಳಿತಾಧಿಕಾರಿ ಹುದ್ದೆ ನೇಮಕಾತಿ ಪರೀಕ್ಷೆ ಸುಸೂತ್ರಬೆನಕಟ್ಟಿ ಗ್ರಾಮದಲ್ಲಿ ಬಿಜೆಪಿಗೆ ಯುವಶಕ್ತಿಯ ಬಲ : ೩೫ ಕ್ಕೂ ಹೆಚ್ಚು ಕಾಂಗ್ರೆಸ್ ಬಿಜೆಪಿ ಸೇರ್ಪಡೆ ಬೆಳಗಾವಿ ಕನ್ನಡತನದ ನಿಲುವು: ಸಚಿವ ಸತೀಶ್ ಜಾರಕಿಹೊಳಿಗೆ ಕನ್ನಡ ಪರ ಸಂಘಟನೆಗಳಿಂದ ಸನ್ಮಾನಕರಿಸಿದ್ದೇಶ್ವರ ದೇವಸ್ಥಾನಕ್ಕೆ ಸಮುದಾಯ ಭವನ ಮಂಜೂರಾತಿಗೆ ಮನವಿ