LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಬ್ಬು ಬೆಳೆಗಾರರ ಹೋರಾಟ- ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹ

 

ಸಂಕೇಶ್ವರ:ಒಂದು ತಿಂಗಳ ಹಿಂದೆಯೆ ಹುಬ್ಬಳ್ಳಿಗೆ ಹೋಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ  ಪ್ರಹ್ಲಾದ ಜೋಶಿ ಅವರಿಗೆ ಮನವಿ ನೀಡಿದ್ದರೂ ಸಹಿತ ಅದನ್ನು ನಿರ್ಲಕ್ಷಿಸಿ ಈಗ ಮತ್ತೆ ಸಮಯಾವಕಾಶ ಬೇಡುತ್ತಿರುವುದು ದುರದೃಷ್ಠ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆ ಈಗ ಸ್ವಂತ ಇದರಲ್ಲಿ ಮಧ್ಯಸ್ಥಿಕೆ ವಹಿಸಿ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚೂನಪ್ಪಾ ಪೂಜಾರಿ ಆಗ್ರಹಿಸಿದ್ದಾರೆ.
ಅವರು ಇಂದು ರಾಷ್ಟ್ರೀಯ ಹೆದ್ದಾರಿಯ ಹತ್ತರಗಿ ಟೋಲ ನಾಕಾ ಬಳಿ ನಡೆದ ಬೃಹತ್ ರೈತ ಸಮೂಹವನ್ನು  ಉದ್ದೇಶಿಸಿ ಮಾತನಾಡಿದರು. ಪ್ರತಿ ಟನ್ ಕಬ್ಬು ಬೆಳೆಗೆ 5500 ರೂಪಾಯಿ ದರ ನೀಡಬೇಕೆಂದು ಆಗ್ರಹಿಸಿ ಇಂದು ಮುಂಜಾನೆಯಿಂದಲೇ ರೈತರು ಹತ್ತರಗಿ ಟೋಲ ನಾಕಾ ಬಳಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸುತಿದ್ದಾರೆ.
ರೈತರು ಕೃಷಿಗಾಗಿ ಬಳಸುವ ಬೀಜ, ಗೊಬ್ಬರ, ಕೀಟನಾಶಗಳು, ಕೃಷಿ ಕಾಮರ್ಿಕರ ಕೂಲಿ ಇವೆಲ್ಲವೂ ಕಳೆದ 10 ವರ್ಷದಲ್ಲಿ ಮೂರು ಪಟ್ಟು ಆಗಿವೆ. ಆದರೆ ಸಕ್ಕರೆ ದರ ಮಾತ್ರ ಹಿಂದಿನಂತೆಯೆ ಇದೆ. ಪೆಟ್ರೋಲ, ಡಿಸೈಲ ದರ ಏರಿಸುವಾಗ ಗ್ರಾಹಕರನ್ನು ಕೇಳದ ಕೇಂದ್ರ ಸಕರ್ಾರವು ಈಗ ಸಕ್ಕರೆ ದರವನ್ನು ಹೆಚ್ಚಿಸುವಾಗ ಮಾತ್ರ ರೈತರ ಜೊತೆಗೆ ಮಾತುಕತೆ ನಡೆಸುತ್ತದೆ. ಕಾಖರ್ಾನೆಗಳು ಪ್ರಾರಂಭವಾಗುವ ಈ ಸಮಯದಲ್ಲಿ ಈ ವಿಷಯದ ಬಗೆಗೆ ಶೀಘ್ರ ನಿರ್ಣಯ ತೆಗೆದುಕೊಳ್ಳದೇ ಸಮಯನ್ನು ವ್ಯಯ  ಮಾಡುತ್ತಿರುವುದು ದುದರ್ೈವದ ಸಂಗತಿ. ಕಾರಣ ಖುದ್ದು ಪ್ರಧಾನಿಗಳೆ ಈ ವಿಷಯದ ಬಗೆಗೆ ಆಸಕ್ತಿ ವಹಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇದಲ್ಲದೆ ಕಾಖರ್ಾನೆಗಳು ಉತ್ಪಾದಿಸುವ ಇಥಿನೆಲ್ಲನ್ನು ಖರೀಧಿಸಬೇಕು. ವಿದ್ಯುತಗೆ ಸರಿಯಾದ ದರ ನೀಡಬೇಕು. ಸ್ವಾಮಿನಾಥನ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಸಿರು ಸೇನೆಯ ಅಧ್ಯಕ್ಷ ಶಶಿಕಾಂತ ಗುರುಜಿ ಅವರು , ಇಂದು ಹತ್ತರಗಿ ಟೋಲ್ ನಾಕಾದ ಬಳಿ ಆರಂಭವಾಗಿರುವ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ರೈತರ ಬೇಡಿಕೆ  ಈಡೇರುವತನಕ ಮುಂದುವರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮಲ್ಲಪ್ಪಾ ಅಂಗಡಿ,ಸಂಜೀವ ಹಾವನ್ನವರ,ಮಲ್ಲಪ್ಪಾ ಬೈಲನ್ನವರ, ಸಿದ್ದಪ್ಪಾ ನಾಯಿಕ, ಮಲ್ಲಪ್ಪಾ ತೊದಲೆ, ಶ್ರೀಶೈಲ ಅಂಗಡಿ, ಪ್ರೇಮಾ ಚೌಗಲಾ, ಬಾಬುರಾವ್ ಹಾಲಗಡಗಿ ಮುಂತಾದವರು ಉಪಸ್ಥಿತರಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಲ್ಲಮ್ಮ ದೇವಸ್ಥಾನದ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುತ್ತೇನೆಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ತಂಡಕ್ಕೆ ನಾಲ್ಕನೇ ಸ್ಥಾನ*ಕುಡಿಯುವ ನೀರನ್ನು ಕೃಷಿಗೆ ಬಳಸಬೇಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಕಬ್ಬು ಬೆಳೆಗಾರರ ಹೋರಾಟ- ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಸಂಕೇಶ್ವರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಬಡವರ ಹಸಿವು ನೀಗಿಸಲು ಚಾಲನೆಕಿತ್ತೂರು ಉತ್ಸವ ವಿಚಾರ ಸಂಕಿರಣದಲ್ಲಿ ರಾಜ್ಯಮಟ್ಟದ ಇತಿಹಾಸ ತಜ್ಞರಿಂದ ಉಪನ್ಯಾಸ: ಡಾಕ್ಟರ್ ಸಂತೋಷ್ ಹಾನಗಲ್ಲ.ರಾಜ್ಯಮಟ್ಟಕ್ಕೆ ಭೂಮಿಕಾ ಮಡ್ಡಿ, ಸ್ಪೂರ್ತಿ ಹರನಾಳ ಆಯ್ಕೆಪಗಡೆಯಾಟಕ್ಕೆ ಕ್ರಿಕೆಟ್-ಹಾಕಿಯಂತೆ ಹೆಚ್ಚಿನ ಪ್ರಚಾರ ಸಿಗಲಿ: ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಟ್ಟಿಕಾಲೇಜು ವಿಭಾಗ : ಶೆಟಲ್ ಬ್ಯಾಡ್ಮಿಂಟನ್ ರಾಜ್ಯ ಮಟ್ಟಕ್ಕೆ ಆಯ್ಕೆ ಯರಗಟ್ಟಿ ಸರ್ಕಾರಿ ಕನ್ನಡ ಮಾದರಿ ಶಾಲೆಗೆ ಬಾಷ್ ಕಂಪನಿಯಿಂದ ?೧ ಕೋಟಿ ಅನುದಾನ