LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಿತ್ತೂರು ಉತ್ಸವ ವಿಚಾರ ಸಂಕಿರಣದಲ್ಲಿ ರಾಜ್ಯಮಟ್ಟದ ಇತಿಹಾಸ ತಜ್ಞರಿಂದ ಉಪನ್ಯಾಸ: ಡಾಕ್ಟರ್ ಸಂತೋಷ್ ಹಾನಗಲ್ಲ.


ಚ ಕಿತ್ತೂರು : ಚೆನ್ನಮ್ಮನ ಕಿತ್ತೂರು ಉತ್ಸವದ ವಿಚಾರ ಸಂಕಿರಣದಲ್ಲಿ ರಾಜ್ಯಮಟ್ಟದ ಇತಿಹಾಸ ತಜ್ಞರಿಂದ ಕಿತ್ತೂರಿನ ಐತಿಹಾಸಿಕ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಸಂಶೋಧಕ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ ತಿಳಿಸಿದರು.
ಕಿತ್ತೂರಿನ ಆಡಳಿತ ಸೌಧದಲ್ಲಿ ನಡೆದ ವಿಚಾರ ಸಂಕಿರಣ ಉಪ ಸಮೀತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇದೇ ದಿನಾಂಕ 24 ರಂದು ನಡೆಯುವ ಈ ಗೋಷ್ಠಿಯನ್ನು ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಲಿದ್ದಾರೆ ಹಾಗು ಅದರಲ್ಲಿ ರಾಜ್ಯ ಮಟ್ಟದ ಪ್ರಸಿದ್ಧ ಇತಿಹಾಸ ತಜ್ಞರು ಹಾಗೂ ಸ್ಥಳೀಯ ವಿದ್ವಾಂಸರು ಕಿತ್ತೂರು ಸಂಸ್ಥಾನದ ಇತಿಹಾಸದ ಮೇಲೆ ಬೆಳಕು ಚೆಲ್ಲಲಿದ್ದಾರೆ ಎಂದರು.
ಡಾ. ಕೆ  ವಾಸುದೇವ, ಧರ್ಮೇಂದ್ರ ಕುಮಾರ ಅರೆಗಟ್ಟಿ,ಪ್ರಕಾಶ ಗಿರಿಮಲ್ಲಣ್ಣವರ,ಡಾ.ಸಂಗಮೇಶ ಕಲ್ಯಾಣಿ, ಡಾ. ರಾಜಶೇಖರ ಬಿರಾದಾರ,ಕಿತ್ತೂರಿನ ಬಸವರಾಜ ಕುಪ್ಪಸಗೌಡರ,ಮಹೇಶ ಚೆನ್ನಂಗಿ ಹಾಗು ಇನ್ನೂ ಕೆಲವು ಇತಿಹಾಸ ತಜ್ಞರು ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಚಾರ ಸಂಕಿರಣಕ್ಕೆ ಇತಿಹಾಸ ಆಸಕ್ತರನ್ನು ಹಾಗೂ ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ರಾಣಿ ಚೆನ್ನಮ್ಮನ ಆದರ್ಶ ಹಾಗೂ ಹೋರಾಟಗಳನ್ನು ಯುವಜನಾಂಗಕ್ಕೆ ತಲುಪಿಸಬಹುದು. ಇದಕ್ಕೆ ಸಾರ್ವಜನಿಕರ ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಭೆಯಲ್ಲಿ ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ತುಬಾಕಿ, ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನವರ, ತಾಲೂಕು ಪಂಚಾಯತಿ ಅಧಿಕಾರಿ ಸಂಜೀವ ಜುನ್ನೂರ,ಪ ಪಂಚಾಯತಿ ಮುಖ್ಯಾಧಿಕಾರಿ ಹಿರೇಮಠ, ಡಾ. ಚಂದ್ರಶೇಖರ ಹಲಸಗಿ ಹಾಗೂ ಕಿತ್ತೂರು ಸುತ್ತಮುತ್ತಲಿನ ಉಪ ಸಮಿತಿ ಸಭೆಯ ಹಲವಾರು ಸದಸ್ಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಲ್ಲಮ್ಮ ದೇವಸ್ಥಾನದ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುತ್ತೇನೆಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ತಂಡಕ್ಕೆ ನಾಲ್ಕನೇ ಸ್ಥಾನ*ಕುಡಿಯುವ ನೀರನ್ನು ಕೃಷಿಗೆ ಬಳಸಬೇಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಕಬ್ಬು ಬೆಳೆಗಾರರ ಹೋರಾಟ- ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಸಂಕೇಶ್ವರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಬಡವರ ಹಸಿವು ನೀಗಿಸಲು ಚಾಲನೆಕಿತ್ತೂರು ಉತ್ಸವ ವಿಚಾರ ಸಂಕಿರಣದಲ್ಲಿ ರಾಜ್ಯಮಟ್ಟದ ಇತಿಹಾಸ ತಜ್ಞರಿಂದ ಉಪನ್ಯಾಸ: ಡಾಕ್ಟರ್ ಸಂತೋಷ್ ಹಾನಗಲ್ಲ.ರಾಜ್ಯಮಟ್ಟಕ್ಕೆ ಭೂಮಿಕಾ ಮಡ್ಡಿ, ಸ್ಪೂರ್ತಿ ಹರನಾಳ ಆಯ್ಕೆಪಗಡೆಯಾಟಕ್ಕೆ ಕ್ರಿಕೆಟ್-ಹಾಕಿಯಂತೆ ಹೆಚ್ಚಿನ ಪ್ರಚಾರ ಸಿಗಲಿ: ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಟ್ಟಿಕಾಲೇಜು ವಿಭಾಗ : ಶೆಟಲ್ ಬ್ಯಾಡ್ಮಿಂಟನ್ ರಾಜ್ಯ ಮಟ್ಟಕ್ಕೆ ಆಯ್ಕೆ ಯರಗಟ್ಟಿ ಸರ್ಕಾರಿ ಕನ್ನಡ ಮಾದರಿ ಶಾಲೆಗೆ ಬಾಷ್ ಕಂಪನಿಯಿಂದ ?೧ ಕೋಟಿ ಅನುದಾನ