LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಯರಗಟ್ಟಿ ಸರ್ಕಾರಿ ಕನ್ನಡ ಮಾದರಿ ಶಾಲೆಗೆ ಬಾಷ್ ಕಂಪನಿಯಿಂದ ?೧ ಕೋಟಿ ಅನುದಾನ

ಸುಸಜ್ಜಿತ ಬೋಧನಾ ಕೊಠಡಿ ಹಾಗೂ ಹೈಟೆಕ್ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿಪೂಜೆ

 

 

ಯರಗಟ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ಬಾಷ್ ಕಂಪನಿ ಅಧಿಕಾರಿ ಸುದರ್ಶನ ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಶಾಲೆಯಲ್ಲಿ ಬಾಷ್ ಕಂಪನಿಯ ವತಿಯಿಂದ ?೧ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಬೋಧನಾ ಕೊಠಡಿ ಹಾಗೂ ಹೈಟೆಕ್ ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರವು ಶಾಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಖಾಸಗಿ ಕಂಪನಿಗಳು ಸಹ ಸಾಮಾಜಿಕ ಜವಾಬ್ದಾರಿಯಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಈಗಾಗಲೇ ಬಾಷ್ ಕಂಪನಿಯ ವತಿಯಿಂದ ಶಾಲೆಗೆ ಸ್ಮಾರ್ಟ್ ಕ್ಲಾಸ್‌ಗಳು, ಶುದ್ಧ ಕುಡಿಯುವ ನೀರಿನ ಘಟಕ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಹಾಗೂ ಸಭಾಂಗಣ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಾಷ್ ಕೊಡುಗೆ ಅಪಾರ: ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ಲಕ್ಕಪ್ಪ ಜಗದಾರ ಮಾತನಾಡಿ, ಬಾಷ್ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯಡಿ ಕರ್ನಾಟಕದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.

ಈಗಾಗಲೇ ಶಾಲೆಯ ಗೋಡೆಗಳ ಮೇಲೆ ನಾಡು-ನುಡಿ, ಕಲೆ-ಸಂಸ್ಕೃತಿ, ಐತಿಹಾಸಿಕ ಮಹನೀಯರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಪಂಚತಂತ್ರ ಕಥೆಗಳನ್ನು ಬಿಂಬಿಸುವ ಆಕರ್ಷಕ ಭಿತ್ತಿಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಶಾಲೆಯ ವಾತಾವರಣ ಮಕ್ಕಳನ್ನು ಆಕರ್ಷಿಸುವಂತಾಗಿದೆ. ಅಲ್ಲದೆ, ಸುಸಜ್ಜಿತ ಗಣಕಯಂತ್ರ ಕೊಠಡಿ, ವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಸಭಾಂಗಣ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.ಶಿಕ್ಷಣಕ್ಕೆ ನೀಡುವ ಕೊಡುಗೆ ಮಕ್ಕಳ ಭವಿಷ್ಯಕ್ಕೆ ಹೂಡಿಕೆ : ಸರ್ಕಾರಿ ಬಾಲಕಿಯರ ವಸತಿ ನಿಲಯದ ನಿಲಯಪಾಲಕಿ ಆಶಾ ಪರೀಟ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಬಾಷ್ ಕಂಪನಿ ನೀಡುತ್ತಿರುವ ಪ್ರತಿಯೊಂದು ಕೊಡುಗೆಯೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾಡುವ ಅಮೂಲ್ಯ ಹೂಡಿಕೆಯಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳು ಇತರ ಕಂಪನಿಗಳಿಗೂ ಮಾದರಿಯಾಗಬೇಕು ಎಂದರು.ಇನ್ನಷ್ಟು ಸರ್ಕಾರಿ ಶಾಲೆಗಳು ಆಧುನಿಕ ಸೌಲಭ್ಯಗಳನ್ನು ಪಡೆದು ಗುಣಮಟ್ಟದ ಶಿಕ್ಷಣದ ಕೇಂದ್ರಗಳಾಗಿ ಬೆಳೆಯಬೇಕು. ಕನ್ನಡ ಶಾಲೆಗಳು ಉಳಿದು ಬೆಳೆಯಬೇಕು. ಕನ್ನಡದ ಮಕ್ಕಳು ಸಾಧನೆಯ ಶಿಖರವೇರಬೇಕು. ಕನ್ನಡ ಶಾಲೆಗಳಿಗೆ ಹೊಸ ಚೈತನ್ಯ ನೀಡುತ್ತಿರುವ ಬಾಷ್ ಕಂಪನಿಯ ಶಿಕ್ಷಣ ಸೇವೆ ಅಭಿನಂದನಾರ್ಹ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಾಷ್ ಕಂಪನಿ ಅಧಿಕಾರಿ ಯಶವಂತ ಪಾಟೀಲ, ಶಾಲೆಯ ಮುಖ್ಯಶಿಕ್ಷಕ ಎ.ಎ. ಮಕ್ತುಮನವರ, ಎಸ್‌ಡಿಎಂಸಿ ಸದಸ್ಯರಾದ ಫಿರೋಜ್ ಖಾದ್ರಿ, ದುಂಡಯ್ಯ ಹಿರೇಮಠ, ಶಕುಂತಲಾ ಹಡಪದ, ಪ್ರೇಮಾ ಹೂಲಿಕಟ್ಟಿ, ಲಕ್ಷ್ಮಣ ಹಣಬರ, ನಿಂಗಪ್ಪ ಗಂಗರಡ್ಡಿ, ಮೌನೇಶ ಹಳ್ಳಂಡಿ, ವಿಜಯ ಬಡಿಗೇರ, ಹಿರಿಯರಾದ ವಿಠ್ಠಲ ದೇವರಡ್ಡಿ, ಶಿವಾನಂದ ಕರಿಗೋನ್ನವರ, ದಿಲೀಪ ಜಮಾದಾರ, ಡಾ. ವಿಶ್ವನಾಥ ತಾಂವಶಿ, ಮೋಹನ ಹಾದಿಮನಿ, ರಾಜು ವಾಲಿ, ಯರಗಟ್ಟಿಯ ಸಂಪನ್ಮೂಲ ವ್ಯಕ್ತಿ ವಸಂತ ಬಡಿಗೇರ, ಶಿಕ್ಷಕರಾದ ಮನೋಹರ ಚೀಲದ, ಶಿವಾನಂದ ಮಿಕಲಿ, ರಮೇಶ ಹುಣಸಿಕಟ್ಟಿ, ಬಿ.ಎಂ. ಸರದಾರ, ರಾಮಕೃಷ್ಣ ಬಳಿಗಾರ ಮತ್ತು ಶಾಲಾ ಶಿಕ್ಷಕಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಲ್ಲಮ್ಮ ದೇವಸ್ಥಾನದ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುತ್ತೇನೆಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ತಂಡಕ್ಕೆ ನಾಲ್ಕನೇ ಸ್ಥಾನ*ಕುಡಿಯುವ ನೀರನ್ನು ಕೃಷಿಗೆ ಬಳಸಬೇಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.ಕಬ್ಬು ಬೆಳೆಗಾರರ ಹೋರಾಟ- ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಸಂಕೇಶ್ವರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ: ಬಡವರ ಹಸಿವು ನೀಗಿಸಲು ಚಾಲನೆಕಿತ್ತೂರು ಉತ್ಸವ ವಿಚಾರ ಸಂಕಿರಣದಲ್ಲಿ ರಾಜ್ಯಮಟ್ಟದ ಇತಿಹಾಸ ತಜ್ಞರಿಂದ ಉಪನ್ಯಾಸ: ಡಾಕ್ಟರ್ ಸಂತೋಷ್ ಹಾನಗಲ್ಲ.ರಾಜ್ಯಮಟ್ಟಕ್ಕೆ ಭೂಮಿಕಾ ಮಡ್ಡಿ, ಸ್ಪೂರ್ತಿ ಹರನಾಳ ಆಯ್ಕೆಪಗಡೆಯಾಟಕ್ಕೆ ಕ್ರಿಕೆಟ್-ಹಾಕಿಯಂತೆ ಹೆಚ್ಚಿನ ಪ್ರಚಾರ ಸಿಗಲಿ: ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಟ್ಟಿಕಾಲೇಜು ವಿಭಾಗ : ಶೆಟಲ್ ಬ್ಯಾಡ್ಮಿಂಟನ್ ರಾಜ್ಯ ಮಟ್ಟಕ್ಕೆ ಆಯ್ಕೆ ಯರಗಟ್ಟಿ ಸರ್ಕಾರಿ ಕನ್ನಡ ಮಾದರಿ ಶಾಲೆಗೆ ಬಾಷ್ ಕಂಪನಿಯಿಂದ ?೧ ಕೋಟಿ ಅನುದಾನ