ಬಾಗಲಕೋಟೆ, ಸೆ. ೧೧: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ), ಬಾಗಲಕೋಟೆ ಜಿಲ್ಲಾ ಘಟಕದ ಎರಡನೇ ತ್ರೈಮಾಸಿಕ ಸಭೆ ಸೆ. ೯ರಂದು ಬಾಗಲಕೋಟೆಯಲ್ಲಿ ನಡೆಯಿತು.
ಸಭೆಯಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಹಮ್ಮಿಕೊಳ್ಳಬೇಕಾದ ವಿವಿಧ ಜನಜಾಗೃತಿ ಕಾರ್ಯಕ್ರಮಗಳ ಅನು?ನ ಹಾಗೂ ಅವುಗಳ ಫಲಿತಾಂಶಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ವಿಶೇ?ವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನಾಚರಣೆ, ವಿಶ್ವ ತಂಬಾಕು ವಿರೋಧಿ ದಿನಾಚರಣೆ ಹಾಗೂ ಮಧ್ಯವರ್ಜನ ಶಿಬಿರಗಳ ಆಯೋಜನೆ ಮತ್ತು ಪರಿಣಾಮಕಾರಿ ಅನು?ನದ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ವೇದಿಕೆಯ ನೂತನ ಅಧ್ಯಕ್ಷರಾಗಿ ಮುಧೋಳ ತಾಲೂಕಿನ ಶ್ರೀಶೈಲ ಗೌಡ ಲಕ್ಷ್ಮಣಗೌಡ ಪಾಟೀಲ್ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ರಾಜಶ್ರೀ ಅಜಿತ್ ಕುಮಾರ್ ವಂದಕುದುರೆ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಕಾಂತ್ ಸಂದಿಮನಿ, ಉಪಾಧ್ಯಕ್ಷರಾದ ವೆಂಕಪ್ಪ ಮುಳ್ಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಚಂದ್ರಶೇಖರ್ ಜೆ., ಬಾಗಲಕೋಟೆ ಜಿಲ್ಲಾ ನಿರ್ದೇಶಕರಾದ ಚೆನ್ನಕೇಶವ, ಆರು ತಾಲೂಕುಗಳ ಕ್ಷೇತ್ರ ಯೋಜನಾಧಿಕಾರಿಗಳು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು, ದುಶ್ಚಟಗಳಿಂದ ಮುಕ್ತ ಸಮಾಜ ನಿರ್ಮಿಸುವುದು ಹಾಗೂ ಮಾದಕ ವಸ್ತುಗಳ ದು?ರಿಣಾಮಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನ? ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.