LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

"ಕಲಾವಿದ ಆನಂದ ಬಡಿಗೇರ ಅವರು ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿರುವುದು"

ಬೈಲಹೊಂಗಲ: ಒಂದೆಡೆ ಆಕಳ ಮೇಲೆ ಕುಳಿತ ಗಣೇಶ... ಮತ್ತೊಂದೆಡೆ ಗುರು ರಾಘವೇಂದ್ರರ ವೇಷದಲ್ಲಿರುವ ವಿನಾಯಕ... ಇನ್ನೊಂದೆಡೆ ಶ್ರೀನಿವಾಸನ ಅವತಾರದಲ್ಲಿ ನಿಂತಿರುವ ಲಂಭೋದರ... ಮತ್ತೊಂದು ಕಡೆ ಅಶ್ವಾರೂಢನಾಗಿ ಕಂಗೊಳಿಸುತ್ತಿರುವ ವಕ್ರತುಂಡ... ಹೀಗೆ ವಿವಿಧ ರೂಪ, ಭಂಗಿ ಹಾಗೂ ಕಲ್ಪನೆಗಳಲ್ಲಿ ಮೂಡಿಬಂದಿರುವ ಗಣೇಶ ಮೂರ್ತಿಗಳು ಈ ಬಾರಿ ಬೈಲಹೊಂಗಲದಲ್ಲಿ ಭಕ್ತರ ಗಮನ ಸೆಳೆಯುತ್ತಿವೆ.
 ಬೈಲಹೊಂಗಲದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸಲು ಸಿದ್ಧವಾಗಿರುವ ವೈವಿಧ್ಯಮಯ ಗಣೇಶ ಮೂರ್ತಿಗಳು ಹಬ್ಬದ ಕಳೆ ಹೆಚ್ಚಿಸಿವೆ.
ನಗರದ ಕಲಾವಿದ ಆನಂದ ಬಡಿಗೇರ ಅವರ ಕಲಾಕುಂಚದಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಗಣೇಶ ಮೂರ್ತಿಗಳು ಕಲಾಭಿಮಾನಿಗಳು ಹಾಗೂ ಭಕ್ತರನ್ನು ಆಕರ್ಷಿಸುತ್ತಿವೆ.
 ಪ್ರತಿ ವರ್ಷದಂತೆ ಈ ವರ್ಷವೂ ಆನಂದ ಬಡಿಗೇರ ಕುಟುಂಬವು ಸುಮಾರು 350ಕ್ಕೂ ಹೆಚ್ಚು ವಿಭಿನ್ನ ಮಾದರಿಯ ಗಣೇಶ ಮೂರ್ತಿಗಳನ್ನು ತಯಾರಿಸಿದೆ.
ವಿಠ್ಠಲ, ಸತ್ಯನಾರಾಯಣ, ಆಕಳ ಮೇಲೆ ಕುಳಿತ ಗಣಪತಿ, ಬಾಲ ಗಣಪತಿ, ಮಾರ್ಬಲ್ ಶೈಲಿಯ ಗಣೇಶ, ಪರಿಸರ ಸ್ನೇಹಿ ಗಣೇಶ, ನವಿಲಿನ ಮೇಲೆ ಕುಳಿತ ಗಣಪತಿ, ಅಶ್ವಾರೂಢ ಗಣೇಶ, ಗುರು ರಾಘವೇಂದ್ರರ ವೇಷದ ಗಣಪತಿ, ಸರಸ್ವತಿ, ರಾಮ-ಕೃಷ್ಣ ಹಾಗೂ ಶಿವನ ಅವತಾರದಲ್ಲಿರುವ ಗಣೇಶ ಸೇರಿದಂತೆ ಹಲವು ಬಗೆಯ ಮೂರ್ತಿಗಳು ನೋಡುಗರ ಮನಸೂರೆಗೊಳ್ಳುತ್ತಿವೆ.
ವಿಶೇಷವೆಂದರೆ, ಪರಿಸರ ಕಾಳಜಿಯೊಂದಿಗೆ ಸಂಪೂರ್ಣ ಜೇಡಿ ಮಣ್ಣಿನಿಂದಲೇ ಈ ಮೂರ್ತಿಗಳನ್ನು ತಯಾರಿಸಲಾಗಿದ್ದು, ಬಣ್ಣಗಳಲ್ಲಿಯೂ ಪರಿಸರ ಸ್ನೇಹಿ ವಿಧಾನಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ವಿವಿಧ ಬಣ್ಣ ಹಾಗೂ ವಿನ್ಯಾಸಗಳ ಗಣೇಶ-ಗೌರಿ ಮೂರ್ತಿಗಳ ನಡುವೆ ಜೇಡಿ ಮಣ್ಣಿನ ಈ ಪರಿಸರ ಸ್ನೇಹಿ ಮೂರ್ತಿಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.
ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ತಮಗೆ ಇಷ್ಟವಾದ ಮೂರ್ತಿಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಸುಮಾರು ₹1,000ರಿಂದ ₹2,000ರವರೆಗೆ ವಿವಿಧ ಗಾತ್ರ ಹಾಗೂ ವಿನ್ಯಾಸಗಳ ಗಣೇಶ ಮೂರ್ತಿಗಳು ಲಭ್ಯವಿವೆ. ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಲಾವಿದರು ಈಗ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
 ಬಣ್ಣಗಾರಿಕೆ, ಅಲಂಕಾರ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಿ ಮೂರ್ತಿಗಳನ್ನು ಭಕ್ತರ ಮನೆಗಳಿಗೆ ಕಳುಹಿಸಲು ಸಿದ್ಧಪಡಿಸಲಾಗುತ್ತಿದೆ.
ಆನಂದ ಬಡಿಗೇರಅವರು ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಅವರಿಗೆ ಕುಟುಂಬದ ಸದಸ್ಯರು ಸಾಥ ನೀಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಕಲಾವಿದ ಆನಂದ ಬಡಿಗೇರ ಅವರು ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿರುವುದು"ಬಡಾಲ ಅಂಕಲಗಿಯಲ್ಲಿ ಕುಂಭೋತ್ಸವ, ಆರತಿ ಪೂಜೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿನೂತನ ಅಧ್ಯಕ್ಷರಾಗಿ ಶ್ರೀಶೈಲ ಗೌಡ ಪಾಟೀಲ್ ಆಯ್ಕೆಸ್ವ ಉದ್ಯೋಗ ಪ್ರೇರಣಾ ಕಾರ್ಯಕ್ರಮ ಸಮಾರೋಪಕುರುಗೋಡಿನಲ್ಲಿ ‘ನನ್ನ ಮೈತ್ರಿ ಋತು ಶಾಲಾ ಹಲೋ ಮೈತ್ರಿ ಕ್ಯಾಂಪ್': ಋತುಚಕ್ರ ನೈರ್ಮಲ್ಯ ಕುರಿತು ಜಾಗೃತಿಆರೋಗ್ಯ ಕಾರ್ಯಕ್ರಮಗಳಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಿ: ಡಾ. ಶೋಭಾ ಸೂಚನೆಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ: ಸೆಪ್ಟೆಂಬರ್ 30 ಕೊನೆಯ ದಿನಸೆ. 25ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಲಾ ಸಂಗಮ ಕನ್ನಡ ಪುಸ್ತಕ ಮಾರಾಟ ಮೇಳ’: ಮಳಿಗೆಗಳಿಗಾಗಿ ಅರ್ಜಿ ಆಹ್ವಾನಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಬಳಸಿ: ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಕರೆಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ: ಡಾ. ಬಸರೆಡ್ಡಿ ಕರೆ