ಬೆಳಗಾವಿ. ಪ್ರತಿಷ್ಠಿತ ಹಿಂಡಾಲ್ಕೋ ಕಂಪನಿಯ ಸಮುದಾಯ ಕೇಂದ್ರದಲ್ಲಿ ಶ್ರೀ ಬಸವನ ಬಳಗ ವತಿಯಿಂದ ಶ್ರೀ ವರದಶಂಕರ ಪೂಜೆ ಮಹಾಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾರಂಜಿಮಠದ ಶ್ರೀ ಮ ನಿ ಪ್ರ ಗುರುಸಿದ್ದ ಮಹಾಸ್ವಾಮಿಗಳು ಮತ್ತು ಕಾಕತಿ ಶಿವಪೂಜಿ ಮಠದ ಶ್ರೀ ರಾಚಯ್ಯ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿಂಡಾಲ್ಕೋ ಘಟಕದ ಮುಖ್ಯಸ್ಥರಾದ ಕೌಶಿಕಿಶರಣ ಮಿಶ್ರಾ ಆಗಮಿಸಿದ್ದರು. ಆಶೀರ್ವಚನ ನೀಡಿದ ಶ್ರೀಗಳು ಯಾವುದನ್ನು ಸೇವಿಸಿದರೆ ಭಾವ,ಮನಸ್ಸು ಪ್ರಸನ್ನವಾಗುತ್ತದೆಯೋ ಅದಕ್ಕೆ ಪ್ರಸಾದ ಮತ್ತು ಆ ಪ್ರಸಾದವನ್ನು ಸಾಮೂಹಿಕವಾಗಿ ಐಕ್ಯತೆ ಭಾವದಿಂದ ಸೇವಿಸುತ್ತೇವೆಯೋ ಅದಕ್ಕೆ ಮಹಾಪ್ರಸಾದ ಎನ್ನುತ್ತಾರೆ ಎಂದು ನುಡಿದರು.ಅತಿಥಿಗಳು ಅಥಿತಿಯ ನುಡಿಗಳನ್ನಾಡುತ ಇಂತಹ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾದ ಕಾರ್ಯಕ್ರಮಗಳಿಗೆ ಕಂಪನಿಯು ಸದಾ ಪ್ರೋತ್ಸಾಹಿಸುತ್ತಾ ಬಂದಿದೆ. ಮುಂದೆ ಕೂಡ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುವುದು ಎಂದರು. ಸರ್ವ ಶರಣ ಅಶೋಕ್ ಈಟಿ ಸ್ವಾಗತಿಸಿದರು, ರಾಜು ಮಂಜರಿಗಿ ವಂದಿಸಿದರು, ಬಸವರಾಜ ತಳವಾರ ಕಾರ್ಯಕ್ರಮ ನಿರೂಪಿಸಿದರು.