ಬಳ್ಳಾರಿ,ಸೆ.12: ಯುವಸಮುದಾಯವು ಯಾವುದೇ ರೀತಿಯ ಮಾದಕ ವ್ಯಸನಗಳಿಗೆ ಬಲಿಯಾಗದೆ, ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಸದೃಢ ದೇಶವನ್ನು ಕಟ್ಟಲು ಸಾಧ್ಯ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಆದ ಡಾ. ವೀರೇಂದ್ರ ಕುಮಾರ್ ಅವರು ಹೇಳಿದರು.
ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ (ಮೈ ಭಾರತ್) ಕೇಂದ್ರ ಬಳ್ಳಾರಿ, ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) ರಾಷ್ಟಿçÃಯ ಸೇವಾ ಯೋಜನೆ ಘಟಕ, ನಾಟಕ ವಿಭಾಗ ಹಾಗೂ ಸಿರುಗುಪ್ಪದ ನೇತ್ರ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ನಶಾ ಮುಕ್ತ ಯುವ ವಿಕಸಿತ ಭಾರತ’ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಒತ್ತಡ, ಖಿನ್ನತೆ ಅಥವಾ ತಪ್ಪು ಹವ್ಯಾಸಗಳಿಂದಾಗಿ ಮಾದಕ ವಸ್ತುಗಳ ದಾಸರಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದು ವ್ಯಕ್ತಿಯ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ಇಡೀ ಕುಟುಂಬ ಮತ್ತು ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುತ್ತದೆ ಎಂದು ತಿಳಿಸಿದರು.
ಯುವಜನರು ಇಂತಹ ದುಶ್ಚಟಗಳಿಂದ ದೂರವಿದ್ದು, ತಮ್ಮಲ್ಲಿರುವ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ಉದ್ಯಮಿ ಹಾಗೂ ವಾಗ್ಮಿ ಎಂ. ಚಂದ್ರಶೇಖರ ಗೌಡ ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯು ಜೀವನದ ಅತ್ಯಂತ ಅಮೂಲ್ಯವಾದ ಘಟ್ಟ. ಇಂದಿನ ಯುವಶಕ್ತಿಯೇ ನಾಳಿನ ಭಾರತದ ಭವಿಷ್ಯ. ಯುವ ಭಾರತದ ಕನಸು ನನಸಾಗಬೇಕಾದರೆ ಉತ್ತಮ ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಶೈಲಿ ಅನಿವಾರ್ಯ. ಎಂತಹದ್ದೇ ಸವಾಲುಗಳು ಎದುರಾದರೂ ಧೃತಿಗೆಡದೆ, ಸಕಾರಾತ್ಮಕ ಯೋಚನೆಗಳೊಂದಿಗೆ ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕು. ಶ್ರಮ ಮತ್ತು ಆರೋಗ್ಯವಂತ ಸಮಾಜದ ಚಿಂತನೆಯೇ ನವ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
15 ರಿಂದ 29 ವರ್ಷದೊಳಗಿನ ಯುವಜನರಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತರಿಗೆ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಜೇತರನ್ನು ಶೀಘ್ರದಲ್ಲೇ ರಾಜ್ಯ ಮಟ್ಟದ ಸ್ಪರ್ಧೆಗೆ ಮೈ ಭಾರತ್ ವತಿಯಿಂದ ಕಳುಹಿಸಿಕೊಡಲಾಗುವುದು ಎಂದು ಮೇರಾ ಯುವ ಭಾರತದ ಜಿಲ್ಲಾ ಯುವ ಅಧಿಕಾರಿ ರಮೇಶ್ ಮಡ್ಡೆಪ್ಪ ತೊಳಿನವರ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ. ಪೂಜಾರ್, ಹಿರಿಯ ಜಾನಪದ ಕಲಾವಿದ ಯಲ್ಲನಗೌಡ ಶಂಕರಬAಡೆ, ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ, ಎನ್‌ಎಸ್‌ಎಸ್ ಸಂಯೋಜಕ ಕೆ. ಬಸಪ್ಪ, ಉಪನ್ಯಾಸಕರಾದ ಡಾ. ಶಶಿಕಾಂತ್ ಬಿಲ್ಲವ್, ಬಸವರಾಜ, ಆರ್.ಪಿ. ಮಂಜುನಾಥ್, ಬಿ.ಜಿ. ದಿನ್ನೆ ಹಾಗೂ ಕಾರ್ಯದರ್ಶಿ ವಿರೇಶ ದಳವಾಯಿ ಭಾಗವಹಿಸಿದ್ದರು.
*ವಿವಿಧ ಸ್ಪರ್ಧೆಗಳ ವಿಜೇತರ ವಿವರ:*
ಸಮೂಹ ಗೀತೆ: ಪ್ರಥಮ-ಸ್ನೇಹಲತಾ ಮತ್ತು ತಂಡ, ದ್ವಿತೀಯ-ಸೌಮ್ಯ ಮತ್ತು ತಂಡ, ತೃತೀಯ-ತರುಣ್ ಮತ್ತು ತಂಡ.
ಸಮೂಹ ನೃತ್ಯ: ಪ್ರಥಮ- ಮಂಜುನಾಥ್ ಮತ್ತು ತಂಡ.
ಮೂಕಾಭಿನಯ: ಪ್ರಥಮ- ಸುಲೋಚನಾ ಮತ್ತು ತಂಡ, ದ್ವಿತೀಯ- ದೇವರಾಜ್ ಮತ್ತು ತಂಡ, ತೃತೀಯ- ಗಣೇಶ್ ಮತ್ತು ತಂಡ.
ಚಿತ್ರಕಲೆ: ಪ್ರಥಮ-ಲಾವಣ್ಯ ಗೌಡ, ದ್ವಿತೀಯ-ಸಾನಿಯಾ ಫರ್ಜಾನಾ, ತೃತೀಯ- ನಂದಿನಿ.
ಭಾಷಣ ಸ್ಪರ್ಧೆ: ಪ್ರಥಮ-ನಂದಿನಿ .ಕೆ., ದ್ವಿತೀಯ- ಡಿ. ಯರ್ರಿಸ್ವಾಮಿ, ತೃತೀಯ-ಅಕ್ಷತಾ.
ರೀಲ್ಸ್ ಸ್ಪರ್ಧೆ: ಪ್ರಥಮ-ಎಂ. ಆಕಾಶ್, ದ್ವಿತೀಯ-ಪವನ ಕುಮಾರ, ತೃತೀಯ- ರೌಶನ್ ಝಮೀರ್.
ಘೋಷವಾಕ್ಯ ಬರಹ: ಪ್ರಥಮ-ಜಿ. ವಿಜಯ್ ಕುಮಾರ್, ದ್ವಿತೀಯ- ಸೃಷ್ಟಿ ಶಾಲಿನಿ,
ತೃತೀಯ-ಶಾರದಾ.
ಸ್ಲಾö್ಯಮ್ ಕವನ ವಾಚನ: ಪ್ರಥಮ- ಗಣೇಶ್, ದ್ವಿತೀಯ- ಶ್ರೀದೇವಿ, ತೃತೀಯ-ಕೆ.ದುರ್ಗಮ್ಮ.