ಬೆಂಗಳೂರು: ಸೆ12:, ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರ ಸಂತೆ ಸಂಸ್ಥೆಯಿಂದ ಹಮ್ಮಿಕೊಂಡ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ 600 ಮೀಟರ್ ಓಟವನ್ನು 5 ನಿಮಿಷ 44 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಅಭಿನಂದನೆಗೊಳಗಾದ ಬಳ್ಳಾರಿ ಜಿಲ್ಲೆ ಕಂಪ್ಲಿ ನಿವಾಸಿ ಮೋಹನ್ ಕುಮಾರ್ ದಾನಪ್ಪ ಮತ್ತು ಸೌಮ್ಯ ಶ್ರೀ ಮೋಹನ್ ಕುಮಾರ್ ದಂಪತಿ ಪುತ್ರ ತನವ್ ಮೋಹನ್ ಕುಮಾರ್ ರಿಗೆ "ವರ್ಷದ ಕನ್ನಡಿಗ" ಪ್ರಶಸ್ತಿಯನ್ನು ಕನ್ನಡ ಚಲನಚಿತ್ರದ ನಾಯಕ ನಟಿ ಶ್ವೇತಾ ಶ್ರೀವಾತ್ಸವ್, ಚಿತ್ರ ಸಂತೆ ಸಂಸ್ಥೆಯ ಗಿರೀಶ್ ಗೌಡ, ಕಾಮನ್ ಮ್ಯಾನ್ ಚಿತ್ರದ ನಟ ನಟಿಯರು ಸೇರಿ ನೀಡಿದರು!