ತಾಳಿಕೋಟೆ,ಜು,೨೨ : ಪಟ್ಟಣದ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರೋತ್ಸವ ಅಂಗವಾಗಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಶ್ರೀಗ್ರಾಮದೇವಿ(ದ್ಯಾಮವ್ವದೇವಿ) ದೇವಸ್ಥಾನಕ್ಕೆ ಬೆಟ್ಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಮಯದಲ್ಲಿ ಶ್ರೀ ದ್ಯಾಮವ್ವದೇವಿ ದೇವಸ್ಥಾನದ ಅರ್ಚಕರಾದ ವೇ.ವಿಶ್ವನಾಥ ಆಚಾರ್ಯ ಶರ್ಮಾ ಅವರು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರನ್ನು ಸನ್ಮಾನಿಸಿ ಗೌರವಿಸಿ ಶ್ರೀದೇವಿಯು ಸಕಲ ಇಷ್ಟಾರ್ಥಗಳನ್ನು ಇಡೇರಿಸಲಿ ಎಂದು ಆಶಿರ್ವದಿಸಿದರು.
ಈ ಸಮಯದಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಸುರೇಶ ನಾಡಗೌಡ(ಬಿಂಜಲಭಾವಿ), ಪ್ರಭುಗೌಡ ಮದರಕಲ್ಲ, ಶರಣುಧನಿ ದೇಶಮುಖ, ಸಿದ್ದನಗೌಡ ಪಾಟೀಲ(ನಾವದಗಿ), ಸಂಗನಗೌಡ ಅಸ್ಕಿ, ಮತ್ತು ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.