ಯರಗಟ್ಟಿ,ಜು,೨೨ : ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದೆ.
ತಾಲೂಕಿನ ಕೆ. ಶಿವಾಪೂರ ಗ್ರಾಮದಲ್ಲಿ ೨೦೨೫-೨೬ ನೇ ಸಾಲಿನ ’ಪ್ರಗತಿ ಕಾಲೋನಿ’ ಯೋಜನೆಯಡಿ ೫೦.೦೦ ಲಕ್ಷ ಅನುದಾನದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೀಡಿದ ಶಾಸಕ ವಿಶ್ವಾಸ ವೈದ್ಯ ಮಾತನಾಡಿದ ಅವರು?ಗ್ರಾಮದ ಭರಮಪ್ಪ ಭಜಂತ್ರಿ ಅವರ ಮನೆಯಿಂದ ಪರಪ್ಪ ಭಜಂತ್ರಿ ಅವರ ಮನೆಯವರೆಗಿನ ಈ ಸಿ.ಸಿ. ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ಹಾಗೂ ಕಾಲೋನಿಯ ಜನರ ಸುಗಮ ಸಂಚಾರಕ್ಕೆ ಇದ್ದ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ಮತ್ತು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ತವನಪ್ಪ ಟೋಪಣ್ಣವರ, ಶಿಂಗಯ್ಯ ಮಠಪತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ಬಸವರಾಜ ಅಯ್ಯನಗೌಡರ, ಪಿಡಿಓ ಸಂಕಪ್ಪ ಪುಡಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬನವರ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಸತೀಶ ಜಾರಕಿಹೊಳಿ ಆಪ್ತಸಹಾಯಕರಾದ ಅರವಿಂದ ಕಾರ್ಚಿ, ಪ್ರಕಾಶ ವಾಲಿ, ಪರಕಾಶ ಸೂಣದೋಳಿ, ಸಿದ್ದಲಿಂಗಯ್ಯ ಕುಂದರಗಿ, ಈಶ್ವರ ಕೌಜಲಗಿ, ಶಿವನಪ್ಪ ದಾಸಯ್ಯನವರ, ಸುರೇಶ ಪೊಲೀಸ್, ಗುಡುಸಾಬ ಮುಗಟಖಾನ, ಮಹಾದೇವ ಕುಂದರಗಿ, ಶಿವನಗೌಡ ಗೌಡರ, ಬಂಗಾರೆಪ್ಪ ಹರಳಿ, ವಿಠ್ಠಲ ಬಂಟನೂರ, ಮಲಿಕಸಾಬ ಬಾಗವಾನ, ಹಿರಿಯರು, ಸ್ಥಳೀಯ ಮುಖಂಡರು, ಪಕ್ಷದ ಮುಖಂಡರು ಹಾಗೂ ಶಿವಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.