ಕಾಗವಾಡ: ಪಟ್ಟಣದ ಚನ್ನಮ್ಮ ಸರ್ಕಲ್ ನಲ್ಲಿ ಇಂದು ಮುಸ್ಲಿಂ ಸಮಾಜದ ಬಾಂಧವರಿಂದ ಟಿಪ್ಪು ಸುಲ್ತಾನ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು .
ಟಿಪ್ಪು ಸುಲ್ತಾನ್ ಭಾವಚಿತ್ರ ಮತ್ತು ಭುವನೇಶ್ವರಿದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು.
ಈ ವೇಳೆ ಯುವ ಮುಖಂಡರಾದ ಜ್ಯೋತಿ ಕುಮಾರ ಪಾಟೀಲ ಮಾತನಾಡಿ, ಹಜರತ್ ಟಿಪ್ಪು ಸುಲ್ತಾನ್ ಅವರ ದೇಶ ಪ್ರೇಮವನ್ನು ಕೊಂಡಾಡುತ್ತಾ ಬ್ರಿಟಿಷ್ ರೊಂದಿಗೆ ಕೆಚ್ಚೆದೆಯಿಂದ ಹೋರಾಡಿ ಸ್ವತಂತ್ರ ಸಂಗ್ರಾಮಕ್ಕೆ ನಾಂದಿ ಹಾಡಿದವರಲ್ಲಿ ಟಿಪ್ಪು ಸುಲ್ತಾನ್ ಪ್ರಮುಖರಾಗಿದ್ದಾರೆ ಎಂದರು.
ಈ ಸಮಯದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಕಾಸಿಂ ಮುಲ್ಲಾ,ಅಸ್ಲಾಂ ಜಮಾದಾರ್,ಕಾಕಾ ಪಾಟೀಲ್, ಚಿದಾನಂದ ಅವಟಿ,ರಮೇಶ್ ಚೌಗಲೆ,ಕರವೇ ಅಧ್ಯಕ್ಷರು, ಸಿದ್ದು ಒಡಿಯರ, ಸಚೀನ ಗಾವಡೆ, ಬಾಬಾಸಾಬ್ ಕೊತ್ತಲಗೆ , ಮೌಲನಾ ಮಿರಸಾಬ್,ಅಲ್ಲಾಬಕ್ಷ ಮುಲ್ಲಾ,ಬಂಡು ಸಯ್ಯದ,ನನ್ನು ಜಮಾದಾರ, ಖಜಾಸಭಾ ಮುಲ್ಲಾ, ಮುಸ್ತಫಾ ಜಮಾದಾರ, ಅರ್ಬಜ್ ಮಲಿಕ, ಸಮಾಜ ಭಾಂದವರು ಉಪಸ್ಥಿತರಿದ್ದರು.