ಮೂಡಲಗಿ : ತಾಲೂಕಿನ ಕುಲಗೋಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುನೀಲ ವಂಟಗೋಡಿ ಹಾಗೂ ಉಪಾಧ್ಯಕ್ಷರಾಗಿ ವಿಶ್ವನಾಥ ಯಕ್ಸಂಬಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುರೇಶ ಬೀರಾದಾರ ಪಾಟೀಲ ಹೇಳಿದರು.
ಹಿಂದಿನ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈಗ ನಡೆದ ಚುನಾವಣಾ ಪ್ರಕ್ರೀಯೆಯಲ್ಲಿ ಉಳಿದ ೨ ವ?ದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಬಸನಗೌಡ ಪಾಟೀಲ ಮಾತನಾಡಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಅವಿರೋಧ ಆಯ್ಕೆ ನಡೆದಿದ್ದು ರೈತರ ಹಿತಾಸಕ್ತಿ, ಗ್ರಾಹಕರ ಕಾಳಜಿಗೆ ಗಮನ ಹರಿಸಿ ಜಿಲ್ಲೆಯಲ್ಲಿ ಉತ್ತಮ ಸಂಘ ಎಂದು ಗುರುತಿಸುವಂತೆ ಸಂಘ ಬೆಳೆಸಬೇಕು ಎಂದು ಶುಭಹಾರೈಸಿದರು. ಕಾರ್ಯಕ್ರಮ ಉದ್ದೇಶಿಸಿ ಅಶೋಕ ನಾಯಿಕ ಹಾಗೂ ಸುಭಾಸ ವಂಟಗೋಡಿ ಮಾತನಾಡಿದರು. ಆಯ್ಕೆ ನಂತರ ಗ್ರಾಮದ ಮುಖಂಡರು ಸಂಘ ಸಂಸ್ಥೆಯವರು ವಿಜೇತರನ್ನು ಸನ್ಮಾನಿಸಿದರು.
ಸಂದರ್ಭದಲ್ಲಿ ಮುರಗೇಪ್ಪ ಯಕ್ಸಂಬಿ, ಶ್ರೀಪತಿ ಗಣಿ, ಮಾರುತಿ ಬಾಗಿಮನಿ, ಅಶೋಕ ಚನ್ನಾಳ, ಬಸು ಯಕ್ಸಂಬಿ, ರಾಜು ಕೊಪ್ಪದ, ವೆಂಕಟೇಶ ಚನ್ನಾಳ, ದತ್ತು ಕುಲಕರ್ಣಿ, ರವಿ ಕೊಪ್ಪದ, ಈರಪ್ಪ ಯಡಹಳ್ಳಿ, ಕಿ?ಪ್ಪ ಯರಗಟ್ಟಿ, ಗೋಪಾಲ ತಿಪ್ಪಿಮನಿ, ಜಗದೀಶ್ ಬೆಳಗಲಿ, ರಾಮನಗೌಡ ಸಸಾಲಟ್ಟಿ, ಪ್ರಕಾಶ ಹಿರೇಮೇತ್ರಿ, ಬಸು ಬಿಲಕುಂಬಿ, ಆನಂದ ಪಾತ್ರೋಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.