ಬಳ್ಳಾರಿ. ನ. 20 : ತಾಲ್ಲೂಕಿನ ಕೋಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕೊರ್ಲಗುಂದಿ ದೊಡ್ಡ ಕೇಶವ ರೆಡ್ಡಿ ಆಸಕ್ತಿಯನ್ನು ತೋರಿದ್ದಾರೆ.
ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೋಳೂರು ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶ ಹೊಂದಿದ್ದು, ಜನರೊಂದಿಗೆ ಗುರುತಿಸಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿರುವುದಾಗಿ ಪಿ ಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡ ಕೇಶವರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಶ್ರೀಧರಗದ್ದೆ ಗ್ರಾಮದ ತಾಲೂರು ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಕೇಶವ ರೆಡ್ಡಿ ಎಂಟರ್‌ಪ್ರೈಸಸ್ ಸ್ಟೀಲ್ ಮತ್ತು ಸಿಮೆಂಟ್ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸುವ ಅಗತ್ಯವಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಕೋಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಮಳಿಗೆಯ ಕುರಿತು ಮಾತನಾಡಿದ ಅವರು, ಸ್ಥಳೀಯ ಗ್ರಾಹಕರಿಗೆ ಗುಣಮಟ್ಟದ ಸ್ಟೀಲ್ ಮತ್ತು ಸಿಮೆಂಟ್ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿ ಮಳಿಗೆಯನ್ನು ಆರಂಭಿಸಲಾಗಿದೆ, ತಾಳೂರು ಕೊರ್ಲಗುಂದಿ ಹಂದಿಹಾಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರಿಗೆ ಬಳ್ಳಾರಿಗೆ ಹೋಗಿ ಬರುವ ಸಾಗಾಟ ವೆಚ್ಚ ತಗ್ಗಲಿದ್ದು ಇದರಿಂದ ಅವರಿಗೆ ಸಮಯ ಮತ್ತು ಹಣ ಉಳಿತಾಯವಾಗಲಿದೆ, ಅದಕ್ಕಿಂತ ಮುಖ್ಯವಾಗಿ ಈ ಮಾರಾಟ ಮಳಿಗೆಯಲ್ಲಿ ಹೋಲ್ ಸೇಲ್ ದರದಲ್ಲಿ ಕಬ್ಬಿಣ ಮತ್ತು ಸಿಮೆಂಟ್ ಮಾರಾಟ ಮಾಡಲಾಗುವುದು ಸುತ್ತಮುತ್ತಲಿನ ಸಾರ್ವಜನಿಕರು ಈ ಮಳಿಗೆಯ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಂಪ್ಲಿ ಶಾಸಕರ ಪುತ್ರ ಗೋಕುಲ್, ಕಗ್ಗಲ್ ವೀರೇಶಪ್ಪ, ಗಂಗೀರಡ್ಡಿ, ರಾಘವ ರೆಡ್ಡಿ ಪ್ರದೀಪ್ ರೆಡ್ಡಿ ಸೇರಿದಂತೆ ಹಲವಾರು ಜನ ಅವರ ಸ್ನೇಹಿತರು ಸಹಪಾಠಿಗಳು ಬಂದು ಬಾಂಧವರು ಸ್ಥಳೀಯ ಗಣ್ಯರು, ವ್ಯಾಪಾರಸ್ಥರು, , ಹಿತೈಷಿಗಳು ಹಾಗೂ ಸಾರ್ವಜನಿಕರು ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.