Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ನ.22 ರಂದು ರಾಮದುರ್ಗದಲ್ಲಿ ತಾಲೂಕಾ ಗಾಣಿಗ ಸಂಘ ಉದ್ಘಾಟನೆ, ಪ್ರತಿಭಾ ಪುರಸ್ಕಾರ

೨೦ಆರ್‌ಎಂಡಿ.೧
ರಾಮದುರ್ಗ: ತಾಲೂಕಾ ಗಾಣಿಗ ಸಂಘ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ನ.೨೨ ರಂದು ಬೆಳ್ಳಿಗೆ ೧೦.೩೦ ಗಂಟೆಗೆ ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರಣ ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಾಲೂಕಾ ಗಾಣಿಗ ಸಂಘದ ಅಧ್ಯಕ್ಷ ಬಾಬುರಾವ ರಾಜನಾಳ ವಿನಂತಿಸಿದರು.
ಸ್ಥಳೀಯ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೂರಿನ ಶ್ರೀ ಡಾ| ಪ್ರಭುಮಹಾಂತ ಸ್ವಾಮೀಜಿ, ಬಟಕುರ್ಕಿಯ ಶ್ರೀ ಬಸವಲಿಂಗ ಸ್ವಾಮೀಜಿ, ಚಿಪ್ಪಲಕಟ್ಟಿ ಕಲ್ಮೇಶ್ವರ ಸ್ವಾಮೀಜಿದಿವ್ಯ ಸಾನಿಧ್ಯ ವಹಿಸುವರು.
ಈ ಕಾರ್ಯಕ್ರಮವನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದು, ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉಪಸ್ಥಿತಿ ವಹಿಸುವರು. ತಾಲೂಕಾ ಗಾಣಿಗ ಸಂಘದ ಅಧ್ಯಕ್ಷ ಬಾಬುರಾವ ರಾಜನಾಳ ಅಧ್ಯಕ್ಷತೆ ವಹಿಸುವರು. ಸಂಸದ ಜಗದೀಶ ಶೆಟ್ಟರ, ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡರ, ಚಿತ್ರದುರ್ಗ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಜ್ಯೋತಿ ಪ್ರಜ್ವಲನೆ ಮಾಡುವರು.
ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಉಟಗಿ, ಮಾಜಿ ಜಿ.ಪಂ ಉಪಾಧ್ಯಕ್ಷ ಪರಪ್ಪ ಜಂಗವಾಡ, ಅಖಿಲ ಭಾರತ ಗಾಣಿಗ ಸಮಾಜ ಅಧ್ಯಕ್ಷ ಸುರೇಶ ಸಜ್ಜನ, ಕಾರ್ಯಾಧ್ಯಕ್ಷ ಅಶೋಕ ನವಲಗುಂದ, ಉಪಾಧ್ಯಕ್ಷ ಅಶೋಕ ಶಿರೂರ, ಪ್ರಧಾನ ಕಾರ್ಯದರ್ಶಿ ವೈ.ವೈ. ಗಣಿ, ಗಾಣಿಗ ನೌಕರ ಸಂಘದ ರಾಜ್ಯಾಧ್ಯಕ್ಷ ಕೆ.ಎಂ. ಗೆದಗೇರಿ, ಸಂಘಟನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೋಭಾ ಗಾಣಿಗೇರ, ಬಾಗಲಕೋಟ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕಾ ಮಂಡಲ ಅಧ್ಯಕ್ಷ ಡಾ| ಕೆ.ವಿ. ಪಾಟೀಲ, ಅಶೋಕ ಗಾಣಗೇರ, ಪ್ರವೀಣ ಗಾಣಗೇರ ಸೇರಿದಂತೆ ವಿಶೇಷ ಹಾಗೂ ಸಾಧಕರ ಸನ್ಮಾನಿತರು, ಸಂಘದ ಪದಾಧಿಕಾರಿಗಳು, ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಈ ಕಾರ್ಯಕ್ರಮದ ಅಂಗವಾಗಿ ಪಟ್ಟಣ ತಾ.ಪಂ ಆವರಣದಿಂದ ಬೆಳಿಗ್ಗೆ ೯ ಗಂಟೆಗೆ ಕುಂಭಮೇಳ ಜರುಗಲಿದ್ದು, ಜುನಿಪೇಠ ಸೇರಿದಂತೆ ಪ್ರಮುಖ ರಸ್ತೆಯ ಮೂಲಕ ವಿದ್ಯಾಚೇತನ ಆವರಣದ ವೇದಿಕೆಗೆ ತೆರಳುವದು ಎಂದು ತಿಳಿಸಿದರು.
ಪತ್ರಿಕಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡ ಪರಪ್ಪ ಜಂಗವಾಡ, ಸಂಘಟನೆ ಕಾರ್ಯಾಧ್ಯಕ್ಷ ಬಸವರಾಜ ಕೋಣನ್ನವರ, ಗಾಣಿಗ ನೌ. ಸಂ ಅಧ್ಯಕ್ಷ ಮಲ್ಲಿಕಾರ್ಜುನ ಗಾಣಿಗೇರ, ಚಿದಾನಂದ ಹರ್ತಿ, ಮಲ್ಲಿಕಾರ್ಜುನ ಪಟ್ಟೆದ, ನ್ಯಾಯವಾದಿ ಎಫ್.ಎಂ. ಗಾಣಗೇರ, ಬಿ.ಎಚ್. ಗಾಣಿಗೇರ, ಅಪ್ಪು ಶಿರಿಯನ್ನವರ, ಶಿವಾನಂದ ಮುಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರಿಲಿಯಂಟ್ ಶಾಲೆಯ ಶೈಕ್ಷಣಿಕ ಪ್ರಗತಿ ಕಂಡು ಸಚಿವರ ಮೆಚ್ಚುಗೆ   ಕುಲಗೋಡ ಪಿ.ಕೆ.ಪಿ.ಎಸ್  ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಸಿಬ್ಬಂದಿ ಕೊರತೆ..! ಸಾರ್ವಜನಿಕರ ಕೆಲಸಗಳಿಗೆ ಹಿನ್ನಡೆ..!ನೇಬಗೇರಿಯಲ್ಲಿ ತಂಗಡಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿನ.22 ರಂದು ರಾಮದುರ್ಗದಲ್ಲಿ ತಾಲೂಕಾ ಗಾಣಿಗ ಸಂಘ ಉದ್ಘಾಟನೆ, ಪ್ರತಿಭಾ ಪುರಸ್ಕಾರಕಾಗವಾಡ ಚನ್ನಮ್ಮ ಸರ್ಕಲ್‌ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸರಳ ಆಚರಣೆ*ಇಟಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಗ್ರಾಮಸ್ಥರ ಆಗ್ರಹ* ಶರಣ ಸಂಸ್ಕೃತಿಯ ಸಾಕಾರ ಮೂರ್ತಿ ಗಂಗಾಧರ ಕೋಟಗಿ ಅವರಿಗೆ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವಕೋಳೂರು ಕ್ಷೇತ್ರದ ಸಮಗ್ರ  ಅಭಿವೃದ್ಧಿಗಾಗಿ  ಜಿಪಂ ಚುನಾವಣೆಗೆ ಸ್ಪರ್ಧೆ :  ದೊಡ್ಡ ಕೇಶವ ರೆಡ್ಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದ ಈ.ತುಕಾರಾಮ್