LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬೈಲೂರ ನಿಷ್ಕಲ ಮಂಟಪದಲ್ಲಿ ಮಕ್ಕಳಿಗೆ ಶರಣ ಸಂಸ್ಕೃತಿ ಶಿಬಿರ

ಬೈಲೂರ: ನಾವು ಅನೇಕ ದೊಡ್ಡ ಕಾರ್ಯಕ್ರಮ, ಸಭೆಗಳನ್ನು ಮಾಡುತ್ತೇವೆ ಆದರೆ ಶರಣ ಸಂಸ್ಕೃತಿ ಶಿಬಿರ ಮಕ್ಕಳಿಗಾಗಿ ಆಯೋಜಿಸಿರುವುದು ಮುಂದಿನ ಜನಾಂಗಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ವೈಜ್ಞಾನಿಕ, ವೈಚಾರಿಕತೆಯ ಮನೋಭಾವಗಳ ಜೊತೆಗೆ ಏಕದೇವೋಪಾಸಣೆಯ ಕುರಿತು ಅರಿವು ಮೂಡಿ ಲಿಂಗಾಯತ ಧರ್ಮ ಉಳಿಸಿಕೊಂಡು ಬರಲು ಸಾಧ್ಯವಿದೆ ಎಂದ ಕೆ.ಎಲ್.ಇ ಸಂಸ್ಥೆಯ ಜೆ.ಎನ್.ಎಮ್.ಸಿ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಅವಿನಾಶ ಕವಿ ಹೇಳಿದರು.


ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ನಿಷ್ಕಲ ಮಂಟಪ ಚೆನ್ನಬಸವಣ್ಣನವರ ಸಭಾಭವನದಲ್ಲಿ ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಯೋಜಿಸಿದ ಶರಣ ಸಂಸ್ಕ್ರತಿ ಶಿಬಿರ ಕಾರ್ಯಕ್ರಮದಲ್ಲಿ ಶಿವಯೋಗದಲ್ಲಿ ವೈಜ್ಞಾನಿಕತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿ ಲಿಂಗಾಯತ ಧರ್ಮದಲ್ಲಿ ಮುಖ್ಯವಾಗಿ ಮೂರು ಸಿದ್ಧಾಂತ, ತತ್ವಗಳು (ಅಷ್ಟಾವರಣ, ಪಂಚಾಚಾರ, ಷಟಸ್ಥಲ) ಇವೆ. ಅವು ಬಸವಣ್ಣನವರು, ಹಾಗೂ ಸಮಕಾಲೀನ ಶರಣರು ತಮ್ಮ ದೈನಂದಿನ ಜೀವನದ ಕುರಿತು ದಾಖಲಿಸುವ ಮೂಲಕ ಜಗತ್ತಿನ ಯಾವ ಸಾಹಿತ್ಯಕ್ಕೂ ಸರಿಸಾಟಿಯಾಗಿದೆ ಅತ್ಯಂತ ಉನ್ನತ ಸ್ಥಾನದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ನಿಲ್ಲುತ್ತದೆ ಎಂದರು.


ವಿಶ್ವ ಅರೋಗ್ಯ ಸಂಸ್ಥೆಯು ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ & ಆಧ್ಯಾತ್ಮಿಕ ಸಮತೋಲನ ಸ್ಥಿತಿ ಎಂದು ತಿಳಿಸಿದ್ದಾರೆ ಅದು ನಮ್ಮ ಚೆನ್ನಬಸವಣ್ಣನವರ ಕರಣಹಸಿಗೆ ಎಂಬ ವಚನ ಗ್ರಂಥದಲ್ಲಿ ಇದೆ ಜೊತೆಗೆ ಮನುಷ್ಯ ತನ್ನ ಆಹಾರ, ನಿದ್ರೆ, ಮಾತು, ಮಿತವಾಗಿರಬೇಕು ಎಂದು ವಚನಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.


ಇಷ್ಟಲಿಂಗ ಕೇವಲ ಲಿಂಗಾಯತ ಧರ್ಮದ ಲಾಂಛನವಾಗಿ,  ಪೂಜೆ ಮಾಡುವುದಷ್ಟೇ ಅಲ್ಲದೇ ಇದು ಸಾಮಾಜಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಆಧ್ಯಾತ್ಮಿಕ, ತತ್ವಜ್ಞಾನಗಳ ಕುರಿತು ಸಮಗ್ರವಾಗಿ ಮಾರ್ಗದರ್ಶಿಯಾಗಿ ಇಷ್ಟಲಿಂಗವೂ ವೈಜ್ಞಾನಿಕ ಪರಭಾಷೆಯ ಅಂಶಗಳನ್ನು ಹೊಂದಿದೆ ಎಂದರು. ಮಕ್ಕಳಿಗೆ ಇಷ್ಟಲಿಂಗ ಸಂಸ್ಕಾರ ಅತ್ಯಾವಶ್ಯಕವಾಗಿದೆ ಎಂದರು.


ಇರಂಹ ಶಿಬಿರಗಳು ಶುದ್ಧೀಕರಣದ ಕೇಂದ್ರಗಳು, ನಮ್ಮ ಮನಸ್ಸು, ಭಾವನೆಗಳನ್ನು ನಿತ್ಯ ಚೈತನ್ಯವಾಗಿರಿಸಲು ಇತಂಹ ಇಷ್ಟಲಿಂಗದ ಕುರಿತು ಶಿಬಿರಗಳಾಗಬೇಕು. ಬಸವಣ್ಣನವರು ಧಾರ್ಮಿಕ ಸಾಮಾಜಿಕ ರಾಜಕೀಯ ಆರ್ಥಿಕ ತತ್ವಗಳ ಆಧ್ಯಾತ್ಮಿಕ ವಿಜ್ಞಾನಿ ಎಂದರು.


ಈ ಸಂದರ್ಭದಲ್ಲಿ ಬಸವ ಧರ್ಮಪೀಠದ ಬಸವ ದೇವರು, ಶಿಕ್ಷಕ ಮಹಾಂತೇಶ ತೋರಣಗಟ್ಟಿ, ಬಸವರಾಜ ಲದ್ದಿಮಠ, ರುದ್ರಪ್ಪ ಇಟಗಿ, ರವಿ ಪಾಟೀಲ, ಶಕ್ರಣ್ಣಾ ಪತ್ತಾರ,  ಸಂಗಮೇಶ ಹಿರೇಮಠ, ನಾಗೇಶ ಬೆಣ್ಣಿ, ಶಿವಾನಂದ ಮೆಟ್ಯಾಲ, ಫಕ್ಕೀರಗೌಡ ಹಾದಿಮನಿ, ರವಿ ಮಡಿವಾಳರ, ಚನ್ನಪಗೌಡ ಪಾಟೀಲ, ಸಂಜು ಕೋಟಗಿ, ಗದಿಗೇಪ್ಪ ರುಮೋಜಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್