LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರೂ ೬೩,೩೦,೭೧೩.೧೧  ಲಾಭ: ನೀಲಕಂಠ ಕಪ್ಪಲಗುದ್ದಿ


ಘಟಪ್ರಭಾ : ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಶತಮಾನ ಪೂರೈಸಿದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ೧೧೩ ನೇ ವಾರ್ಷಿಕ ಸರ್ವ ಸಾಧಾರಣ ಸಭೆ ದಿನಾಂಕ ೧೨-೦೯-೨೦೨೬ ರಂದು  ಜರುಗಿತು. 
 ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರಾದ. ನೀಲಕಂಠ ಬಸಪ್ಪ ಕಪ್ಪಲಗುದ್ದಿ   ಮಾತನಾಡಿ ಕಳೆದ ೧೧೩ ವರ್ಷಗಳಿಂದ  ಸಹಕಾರ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾದಿಸುತ್ತ ಬಂದಿರುವ  ನಮ್ಮ ಸಂಘದ  ಸನ್ ೨೦೨೫-೨೬ ನೇ ಸಾಲಿನ ವಾರ್ಷಿಕ ವರದಿಯಲ್ಲಿ ಒಟ್ಟು ಸದಸ್ಯರ ಸಂಖ್ಯೆಯು ದಿನಾಂಕ ೩೧-೦೩-೨೦೨೬ ಕ್ಕೆ ೨,೮೯೯ ಸಾಮಾನ್ಯ ಸದಸ್ಯರು ಇರುತ್ತಾರೆ. ಅದರಂತೆ ಶೇರು ಬಂಡವಾಳ ಸನ್ ೨೦೨೫-೨೬ ನೇ ಸಾಲಿನ ಒಟ್ಟು ಶೇರು ಬಂಡವಾಳವು ೨,೭೦,೦೯,೩೭೫/- ರೂಗಳು ಇರುತ್ತದೆ. ಹಾಗೇ ಒಟ್ಟು ನಿಧಿಗಳು  ರೂ. ೬,೦೩,೭೨,೩೫೭.೮೪ ಇದೆ. ಮತ್ತು ಗುಂತಾವಣೆಗಳು ಸನ್ ೨೦೨೫-೨೬ ನೇ  ಸಾಲಿನಲ್ಲಿ ಸಂಘವು ಬಿ.ಡಿ.ಸಿ.ಸಿ. ಬ್ಯಾಂಕನಲ್ಲಿ ಆರ್.ಎಫ್.ಡಿ. ಸಹಿತ  ರೂ ೮,೦೭,೯೭,೭೫೨.೧೬  ಇರುತ್ತದೆ.  ಅದರಂತೆ   ವರದಿ ವರ್ಷದಲ್ಲಿ ದಿನಾಂಕ ೩೧-೦೩-೨೦೨೬ ಕ್ಕೆ ಸಂಘವು  ರೂ ೬೩,೩೦,೭೧೩.೧೧ ಲಾಭವಾಗಿದೆ ಎಂದು ತಿಳಿಸಲು ಸಂತೋಷವೆನಿಸುತ್ತದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ನಮ್ಮ ಸಂಘದಿಂದ ಒಟು  ೧,೪೪೩ ಸದಸ್ಯರುಗಳಿಗೆ ಒಟ್ಟು ರೂ ೧೫,೬೯,೨೮,೦೦೦/- ರೂಗಳ  ಬೆಳೆಸಾಲವನ್ನು ಹಾಗೂ  ೦೭  ಸದಸ್ಯರುಗಳಿಗೆ ಒಟ್ಟು ೪೪,೭೮,೦೦೦/- ಟ್ಯಾಕ್ಟರ ಸಾಲವನ್ನು ಬಿ.ಡಿ.ಸಿ.ಸಿ. ಬ್ಯಾಂಕಿನಿಂದ ವಿತರಿಸಿದೆ. ಎಂದೂ ತಿಳಿಸಲು ಸಂತೋಷವಾಗುತ್ತದೆ. ಮತ್ತು ಸಂಘದ ಸದಸ್ಯರ ೧೦ ,೧೨ ನೇ ತರಗತಿಯಲ್ಲಿ ಹೆಚ್ಚಿಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಧನವನ್ನು ನೀಡಿತಿದ್ದೇವೆ,ಸಂಘದ ಸದಸ್ಯರ ಕಲ್ಯಾಣ ಕಾರ್ಯಕ್ರಮಳಿಗೆ ಉಚಿತ ಕುರ್ಚಿಗಳು ಬಾಂಡೆಗಳನ್ನು ಬಾಡಿಗೆ ರಹಿತವಾಗಿ ನಿಡುತ್ತಿದ್ದೇವೆ, ಸದಸ್ಯರಿಗೆ ಮರಣಾ ನಂತರ ಅವರ ಕುಟುಂಬಕ್ಕೆ ತಕ್ಷಣ ರುಪಾಯಿ ೧೦,೦೦೦/- ನಿಡುತ್ತಿದ್ದೇವೆ ಎಂದು ತಿಳಿಸಿದರು, 
          ಈ ಸಂದರ್ಬದಲ್ಲಿ ಉಪಾಧ್ಯಕ್ಷರಾದ ಭೀಮಪ್ಪ ಹಣಮಂತ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬಾಳಪ್ಪ ಬೆಳಕೂಡ, ಮಲ್ಲಪ್ಪ ಪರಪ್ಪ ಕಡಾಡಿ, ಆನಂದ ಭೀಮಪ್ಪ ಹೆಬ್ಬಾಳ, ಶಂಕರ ನಿಂಗಪ್ಪ ಗೋರೋಶಿ,  ಬಸಪ್ಪ ಭೀಮಪ್ಪ ಭೀ|| ಪಾಟೀಲ, ಧರೀಶ ಲಕ್ಷ್ಮಣ ಖಾನಗೌಡ್ರ,  ಶ್ರೀಮತಿ  ಮಹಾದೇವಿ ಶಂಕರ ಖಾನಾಪೂರ, ಶ್ರೀಮತಿ ಕೆಂಪವ್ವ ಕಲ್ಲಪ್ಪ ಗೋರೋಶಿ, ಮಲ್ಲಪ್ಪ ನಿಂಗಪ್ಪ ಪೂಜೇರಿ, ಧರ್ಮಣ್ಣ ಸಿದ್ದಪ್ಪ ನಂದಿ, ಹಿರಿಯ ಬ್ಯಾಂಕ ನಿರೀಕ್ಷಕರು ಕಲ್ಲೋಳಿ ಇವರು ಉಪಸ್ಥಿತರಿದ್ದರು. ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ  ಮಲ್ಲಪ್ಪ ನಾಗಪ್ಪ ಹೆಬ್ಬಾಳ  ವಾರ್ಷೀಕ ವರದಿಯನ್ನು ಮಂಡಿಸಿದರು  ಮತ್ತು  ಅಕೌಟಂಟರಾದ ಮಾನಿಂಗ ಬಾಳಪ್ಪ ಮೇತ್ರಿ  ವಂದನಾರ್ಪನೆ ಕಾರ್ಯಕ್ರಮ ನಿರುಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್ರನ್ನ ಅಜರಾಮರ: ಮಲ್ಲಿಕಾರ್ಜುನ ಅರಬಿ೧೦೦ ಮೀಟರ್ ಓಟದಲ್ಲಿ ದ್ವಿತೀಯ: ಜಿಲ್ಲಾ ಮಟ್ಟಕ್ಕೆ ಚೇತನ ನ್ಯಾಮಗೌಡಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸ್ವಚ್ಛತೆಯೇ ಸೇವೆ-2026' ಅಭಿಯಾನ ಆರಂಭ: ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆವಿ.ಶ್ರೀ.ಕೃ. ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜತಾಳಿಕೋಟೆ ತಾಲೂಕು ಕೂಡ ಶೀಘ್ರ ಬರಪೀಡಿತ ಪಟ್ಟಿಗೆ : ಶಾಸಕ ನಾಡಗೌಡತೇರದಾಳ ಹಾಗೂ ರಬಕವಿ /ಬನಹಟ್ಟಿ ತಾಲೂಕುಗಳು ಬರಗಾಲ ಪಟ್ಟಿಗೆ, ಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ.ರೋಗಿಗಳಿಗೆ ಹಾಲುಹಣ್ಣು ವಿತರಿಸಿ ಬಿಜೆಪಿ ಕಾರ್ಯಕರ್ತರಿಂದ ’ಸೇವಾ ಸಂಕಲ್ಪ