LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕರಾವಳಿಯ ಪ್ರೇಮಕಥೆಯ ಮಾರ್ನಮಿ  ಟೀಸರ್  ರಗಡ್‌ ಲುಕ್‌ನಲ್ಲಿ ರಿತ್ವಿಕ್ ಮಠದ್


     ಗಿಣಿರಾಮ, ನಿನಗಾಗಿ ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್ ರಗಡ್‌ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ತುಂಬಾ ಸಮಯ ತೆಗೆದುಕೊಂಡು ಕಿರುತೆರೆಯಿಂದ ಈಗ ರಿತ್ವಿಕ್‌ ಬೆಳ್ಳಿತೆರೆಗೆ ಒಂದೊಳ್ಳೆ ಕಥೆ ಹಾಗೂ ತಂಡ ಕಟ್ಟಿಕೊಂಡು ಎಂಟ್ರಿ ಕೊಟ್ಟಿದ್ದಾರೆ, ಅವರು ನಟಿಸುತ್ತಿರುವ  ಚಿತ್ರ 'ಮಾರ್ನಮಿ'ಯ ಟೀಸರ್‌ ರಿಲೀಸ್‌ ಆಗಿದೆ.       ರಿತ್ವಿಕ್ ಮಠದ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಅವರ ಇಂಟ್ರಡಕ್ಷನ್‌ ಟೀಸರ್‌ ಅನಾವರಣ ಮಾಡಿದೆ. ಗುಣಾದ್ಯಾ ಪ್ರೊಡಕ್ಷನ್ಸ್ ಯೂಟ್ಯೂಬ್‌ ಚಾನೆಲ್ ನಲ್ಲಿ ರಿಲೀಸ್‌ ಆಗಿರುವ ಟೀಸರ್‌ ಕ್ಯೂರಿಯಾಸಿಟಿ ಹೆಚ್ಚಿಸುವಂತಿದ್ದು, ಕಥೆಯ ಗುಟ್ಟನ್ನ ನಿರ್ದೇಶಕರರು ಬಿಟ್ಟುಕೊಟ್ಟಿಲ್ಲ. ಚರಣ್‌ ರಾಜ್‌ ಹಿನ್ನೆಲೆ ಸಂಗೀತ ಟೀಸರ್‌ ಹೈಲೆಟ್ಸ್.‌

      ಬೆಂಗಳೂರಿನಲ್ಲಿ ಟೀಸರ್‌ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟ ರಿಷಿ,  ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ ಮತ್ತು ಕೆಪಿ ಅರವಿಂದ್ ಸ್ನೇಹಿತ ರಿತ್ವಿಕ್ ಗೆ ಶುಭ ಕೋರಲು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

      ನಿರ್ಮಾಪಕ ನಿಶಾಂತ್‌ ಮಾತನಾಡಿ "ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಶೀಘ್ರದಲ್ಲೇ ಟ್ರೇಲರ್‌ ಬರಲಿದೆ. ಒಳ್ಳೆ ಸ್ಟಾರ್‌ ಕಾಸ್ಟ್‌ ಜೊತೆ‌ ಅದ್ಭುತ ಟೆಕ್ನಿಷಿಯನ್ ಟೀಂ ಸಿಕ್ಕಿದೆ. ನನಗೆ ನನ್ನ ಪತ್ನಿ ಸಾಥ್‌ ಕೊಟ್ಟರು. ಹೀಗೆ ಜರ್ನಿ ಶುರುವಾಯ್ತು. ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಮ್ಯೂಸಿಕ್‌ ವರ್ಕ್‌ ನಡೆಯುತ್ತಿದೆ. ಸೆಪ್ಟಂಬರ್‌ ನಲ್ಲಿ ಸಿನಿಮಾ ತೆರೆಗೆ ತರುವ ಆಲೋಚನೆಯಲ್ಲಿ ಇದ್ದೇನೆ" ಎಂದರು.

     ನಿರ್ದೇಶಕ ರಿಶಿತ್ ಶೆಟ್ಟಿ "ಮಾರ್ನಮಿಯ ಮೊದಲೆರಡು ಟೀಸರ್‌ ಗೆ ಒಳ್ಳೆ ರೆಸ್ಪಾನ್ಸ್‌ ಸಿಕ್ಕಿದೆ. ಈಗ ರಿಲೀಸ್‌ ಆಗಿರುವ ಟೀಸರ್‌ ಗೂ ಅದೇ ರೀತಿ ಸಪೋರ್ಟ್‌ ಇರಲಿ. ಎಲ್ಲರೂ ಸಿನಿಮಾ ಇಷ್ಟಪಡುತ್ತಾರೆ ಎಂದುಕೊಂಡಿದ್ದೇನೆ. ನನ್ನ ಸ್ನೇಹಿತ ಸುಧಿ ಬರೆದ ಕಥೆ ಇದು. ಆ ಕಥೆ ರಿತ್ವಿಕ್ ಗೆ ಹೇಳಿದೆ ಅಲ್ಲಿಂದ ಜರ್ನಿ ಶುರುವಾಯ್ತು. ನಿಶಾಂತ್‌ ಸರ್‌ ಸಿಕ್ಕಿದರು. ಈಗ ಇದು ಇಲ್ಲಿಗೆ ಬಂದು ನಿಂತಿದೆ" ಎಂದು ಸಂತಸ ವ್ಯಕ್ತಪಡಿಸಿದರು.

     ನಾಯಕ ರಿತ್ವಿಕ್ ಮಠದ್ "ಇವತ್ತು ಈ ಜರ್ನಿ ನೋಡಿದಾಗ ಹೆಮ್ಮೆ ಅನಿಸುತ್ತದೆ. ಈ ಪಯಣವನ್ನು ಇಷ್ಟು ಅದ್ಭುತವಾಗಿ ಮುಗಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಇದು ಸಾಧ್ಯವಾಗಿದ್ದು ನಿಶಾಂತ್‌ ಸರ್‌ ಹಾಗೂ ಶಿಲ್ಪಾ ಮೇಡಂ ಅವರಿಂದ. ಈ ರೀತಿಯ ನಿರ್ಮಾಪಕರು ಇಂಡಸ್ಟ್ರೀಗೆ ಹಾಗೂ ಹೊಸಬರಿಗೆ ಬೇಕು. ಹೊಸಬರಿಗೆ ದುಡ್ಡು ಹಾಕಿ ಅದ್ಭುತ ಪ್ರೊಡಕ್ಟ್‌ ತೆಗೆಯುವುದು ಸುಲಭವಲ್ಲ. ನನಗೆ ಸಿಕ್ಕಿರುವ ಅದ್ಭುತವಾದ ಬರ್ತಡೇ ಗಿಫ್ಟ್.‌ ನಿರ್ದೇಶಕ ಶೆಟ್ರು ನನಗೆ ತಮ್ಮನ ರೀತಿ, ಅವರು ನಿರ್ದೇಶಕರಾಗಿರುವುದು ಹಾಗೂ ಅದರಲ್ಲಿ ನಾನು ನಟಿಸುತ್ತಿರುವುದು ತುಂಬಾ ಖುಷಿಯ ವಿಷಯ" ಎಂದು ಹೇಳಿದರು.

     ನಾಯಕಿ ಚೈತ್ರಾ ಆಚಾರ್ "ರಿಶಿತ್ ಶೆಟ್ಟಿ ಸರ್‌ ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ. ಹೇಳಿದಂತೆಯೇ ಚಿತ್ರೀಕರಿಸಿದ್ದಾರೆ,  ಇಡೀ ಪ್ರೊಡಕ್ಷನ್‌ ನನಗೆ ತುಂಬಾ ಸಪೋರ್ಟ್‌ ಆಗಿ ನಿಂತಿದೆ. ಈ ಚಿತ್ರದಲ್ಲಿ ನಾನೇ ನಟಿಸಬೇಕು ಅಂತ ಬರೆದಿತ್ತು ಅನಿಸುತ್ತೆ ಹೀಗಾಗಿ ಈ ಚಿತ್ರ ನನಗೆ ಸಿಕ್ಕಿದೆ. ನಾನು ಈ ಸಿನಿಮಾಗೆ ಬಂದಮೇಲೆ ಮಂಗಳೂರಿನಲ್ಲಿ ಎಂತೆಂಥ ಕಲಾವಿದರು ಇದ್ದಾರೆ ಅನ್ನೋದು ಗೊತ್ತಾಯ್ತು. ಶಿವ ಸರ್‌ ಕೆಲಸ ಇಲ್ಲಿ ವಿಭಿನ್ನವಾಗಿದೆ. ರಿತ್ವಿಕ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ" ಎಂದರು.

     ಕೆಲ ಸಿನಿಮಾಗಳಲ್ಲಿ ಸಹ ನಿರ್ದೇಶಕ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ಈ ಚಿತ್ರಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ.

     'ಮಾರ್ನಮಿ' ತಾರಾಬಳಗದಲ್ಲಿ  ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರಾ ಶೆಟ್ಟಿ ಸೇರಿದಂತ ಮುಂತಾದವರಿದ್ದಾರೆ. ಸಲಗ, ಭೀಮ ಖ್ಯಾತಿಯ ಶಿವಸೇನ ಛಾಯಾಗ್ರಹಣ,  ಚರಣ್ ರಾಜ್ ಸಂಗೀತ ಸಂಯೋಜನೆ, ವರ್ಷಾ ಆಚಾರ್ ಕಾಸ್ಟುಮ್ ಡಿಸೈನ್ ಮಾಡಿದ್ದಾರೆ,  'ಮಾರ್ನಮಿ' ಸಿನಿಮಾವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್