LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಆಟೋ ಮೀಟರ್ ದರ ಏರಿಕೆಗೆ ಚಾಲಕ ಸಂಘಟನೆಗಳಿಂದ ಮನವಿ

ಬೆಂಗಳೂರು,

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ ಕಂಡಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಗ್ರಹಿಸಿ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುನ್ನ ಒಂದು ಲೀಟರ್ ಆಟೋ ಎಲ್ಪಿಜಿ ದರ 56 ರೂ. ಇತ್ತು. ಬಳಿಕ ಅದು ಕಳೆದ ಒಂದು ವಾರದ ಹಿಂದೆ 90 ರೂ.ಗಳಿಗೆ ಏರಿತ್ತು. ಆದರೆ ಸದ್ಯ ಬೆಂಗಳೂರಲ್ಲಿ ಒಂದು ಲೀಟರ್ ಆಟೋ ಎಲ್ಪಿಜಿ ದರವೀಗ 95 ರೂಪಾಯಿಗಳಿಗೆ ತಲುಪಿದೆ. ಹೀಗಾಗಿ ಮೀಟರ್​​ ದರ ಏರಿಕೆ ಅನಿವಾರ್ಯ ಎಂಬುದು ಆಟೋ ಚಾಲಕರ ಅಭಿಪ್ರಾಯ.

ಎಷ್ಟು ದರ ಹೆಚ್ಚಳಕ್ಕೆ ಮನವಿ?

ಆಟೋ ಮೀಟರ್ ಕನಿಷ್ಠ ದರವನ್ನು 50 ರೂ. ಹಾಗೂ ಆ ನಂತರದ ರೇಟ್​​ ಕಿಲೋ ಮೀಟರ್​​ಗೆ 25 ರೂ.ಗೆ ಹೆಚ್ಚಿಸಲು ಆಟೋ ಚಾಲಕ ಸಂಘಟನೆಗಳು ಬೇಡಿಕೆ ಇಟ್ಟಿವೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್​​ಗೆ 18 ರೂ. ನಿಗದಿಪಡಿಸಲಾಗಿದೆ. ಮೊದಲೇ ಆಟೋ ಎಲ್ಪಿಜಿ ಅಗತ್ಯಕ್ಕೆ ತಕ್ಕಂತೆ ಸಿಗ್ತಿಲ್ಲ. ಈ ನಡುವೆ ಗ್ಯಾಸ್​​ ದರವನ್ನೂ ಕೇಂದ್ರ ಸರ್ಕಾರ ದಿಢೀರ್​​ ಏರಿಸಿರೋದು ಚಾಲಕರನ್ನು ಸಂಕಷ್ಟ ತಳ್ಳಿದೆ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಚಾಲಕ ಸಂಘಟನೆಗಳ ಆಗ್ರಹದ ಬಗ್ಗೆ ಪ್ರಯಾಣಿಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾಸ್​​ ರೇಟ್​​ ಹೆಚ್ಚಳದ ಕಾರಣಕ್ಕೆ ಆಟೋ ಚಾಲಕರ ಬೇಡಿಕೆಯೇನೋ ಸರಿಯಿದೆ. ಆದರೆ ದರ ಏರಿಕೆ ಮಾಡಿದಲ್ಲಿ ಅದು ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನು ಹಲವರು ಆಟೋ ಎಲ್ಪಿಜಿ ದರ ದುಪ್ಪಟ್ಟಾಗಿರುವ ಕಾರಣ ದರ ಏರಿಕೆ ಆಗಲಿ ಎಂದು ತಿಳಿಸಿದ್ದಾರೆ. ಈ ನಡುವೆ ಸಾರಿಗೆ ಸಚಿವರಿಗೂ ತಮ್ಮ ಬೇಡಿಕೆ ಒಳಗೊಂಡ ಮನವಿಯನ್ನು ನೀಡೋದಾಗಿ ಆಟೋ ಚಾಲಕ ಸಂಘಟನೆಗಳು ತಿಳಿಸಿವೆ. ಅಂತಿಮವಾಗಿ ನಿರ್ಧಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್