LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಭರವಸೆ ಪ್ರೀತ್ಸೋ  ಹೃದಯಕ್ಕೆ ಟ್ರೇಲರ್ ಬಿಡುಗಡೆ 


       ಮನ ಸೆಳೆಯುವ ಶೀರ್ಷಿಕೆ 'ಭರವಸೆ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.

     ಉಚ್ಚ ನ್ಯಾಯಲಯದ ವಕೀಲರು, ಸರ್ಕಾರಿ ಅಧಿಕಾರಿಗಳು, ರಾಜಕೀಯ ಧುರೀಣರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಶೀರ್ಷಿಕೆಗೆ  ’ಪ್ರೀತ್ಸೋ  ಹೃದಯಕ್ಕೆ’ ಎಂಬ ಕ್ಯಾಚಿ ಅಡಿಬರಹ ಇರಲಿದೆ. ಆರ್.ಆರ್.ಮೂವೀ ಮೇಕರ‍್ಸ್ ಅಡಿಯಲ್ಲಿ ಶಿವಮೊಗ್ಗದ ಕಂಟ್ರಾಕ್ಟರ್, ಉದ್ಯಮಿ ನಾಗರಾಜ್ ಅವರು ಪತ್ನಿ ಲಕ್ಷೀನಾಗರಾಜ್ ಹೆಸರಿನಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮುತ್ತು ಗಂಗೂರ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ  ಮಾಡಿದ್ದಾರೆ.

       ತಾರಾಗಣದಲ್ಲಿ ವಿನಾಯರಾಜ್, ಅಹಲ್ಯಸುರೇಶ್, ಹೊನ್ನವಳ್ಳಿಕೃಷ್ಣ, ಶೋಭರಾಜ್, ಮನಮೋಹನ್‌ರೈ, ಕಿಲ್ಲರ್‌ವೆಂಕಟೇಶ್, ಕೆಂಪೆಗೌಡ ಮುಂತಾದವರು ನಟಿಸಿದ್ದಾರೆ.

       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು "ಅನಿವಾರ್ಯ ಕಾರಣದಿಂದ ವರ್ಷಗಳ ಕಾಲ ತಡವಾಗಿದೆ. ಆದರೂ ಅಂದುಕೊಂಡಂತೆ ಚೆನ್ನಾಗಿ ಬಂದಿದೆ. ಪ್ರೀತಿ, ಕ್ರೈಂ ಎಳೆ ಇದ್ದರೂ, ಅಪ್ಪ-ಅಮ್ಮ, ಗೆಳತನದ ಭಾವನಾತ್ಮಕ ಸನ್ನಿವೇಶಗಳು ಟೈಟಲ್‌ಗೆ ತಕ್ಕಂತೆ ತೋರಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಒಂದೊಂದು ಭರವಸೆಯನ್ನು ಇಟ್ಟುಕೊಂಡಿರುತ್ತಾನೆ. ಸೋತೋನು ಗೆಲ್ಲುತ್ತಾನೆ. ಗೆದ್ದವನು ಇನ್ನೆನೋ ಸಾಧಿಸಬೇಕೆಂಬ ಹಪಾಹಪಿ ಇರುತ್ತದೆ. ಅದೇ ರೀತಿ ಹುಡುಗನೊಬ್ಬನ ಜೀವನದಲ್ಲಿ ಭರವಸೆ ಅಂತ ಹೋದಾಗ ತರಾವರಿ ಘಟನೆಗಳು ನಡೆಯುತ್ತದೆ. ಅದಕ್ಕೆ ಕಾರಣವೇನು? ಅಂತಿಮವಾಗಿ ಅದೆಲ್ಲಾವನ್ನು ಭೇದಿಸಿ ಹೇಗೆ ಸಪಲನಾಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮಾಧ್ಯಮದವರು ನಮ್ಮ ಮೇಲೆ ಭರವಸೆ ಇಟ್ಟುಕೊಂಡು ಬೆನ್ನು ತಟ್ಟಬೇಕು" ಎಂದು ಮುತ್ತು ಗಂಗೂರ ಕೋರಿಕೊಂಡರು.

        ನಿರ್ಮಾಪಕ ನಾಗರಾಜ್ ಹೇಳುವಂತೆ "ಬಸವಣ್ಣನ ತತ್ವ ಕಾಯಕವೇ ಕೈಲಾಸ ಚಿತ್ರಕ್ಕೆ ಅನ್ವಯಿಸುತ್ತದೆ. ಹಣ ಹಾಕಲು ಬಂದವನಿಗೆ ನಿರ್ದೇಶಕರು ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿಸಿದ್ದಾರೆ. ಮುಂದೆ ಮಕ್ಕಳ ಸಿನಿಮಾ ’ಪಾಠಶಾಲೆ’ ಗೆಳೆಯ ಸುರೇಶ್ ಕಂಠಿ ಅವರೊಂದಿಗೆ ಸೇರಿಕೊಂಡು ನಿರ್ಮಾಣ ಮಾಡಲಿದ್ದೇನೆ. ಹಣ ವಾಪಸ್ಸು ಬರುತ್ತದೆಂಬ ಭರವಸೆ ಇದೆ" ಎಂದರು.

      ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ಟಾರ್ ಸಿಂಗರ‍್ಸ್‌ಗಳಾದ ರಾಜೇಶ್‌ಕೃಷ್ಣನ್, ವಿಜಯಪ್ರಕಾಶ್, ಶಮಿತಾಮಲ್ನಾಡ್, ಅನುರಾಧಭಟ್, ಸುಪ್ರಿಯಲೋಹಿತ್ ಹಾಡಿರುವುದು ವಿಶೇಷ. ಸಂಗೀತ ಶ್ರೀಹರ್ಷ ಕಾಗೋಡ್, ಛಾಯಾಗ್ರಹಣ ವೀನಸ್ ಮೂರ್ತಿ, ಸಾಹಸ ಸ್ಟಂಟ್ ಸಿದ್ದು, ಸಂಕಲನ ಕುಮಾರ್ ಸಿ.ಹೆಚ್., ಸಾಹಿತ್ಯ ಶ್ರೀತೇಜ-ಅಭಿಜಿತ್ ತೀರ್ಥಹಳ್ಳಿ ಅವರದಾಗಿದೆ. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡಿರುವ ಸಿನಿಮಾವು ಆಗಸ್ಟ್ ತಿಂಗಳಿನಲ್ಲಿ ತೆರೆ ಕಾಣಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್