Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೃತ್ತಿಪರತೆ-ಕರ್ತವ್ಯ ನಿಷ್ಠೆ ನನ್ನನ್ನು ಕೈ ಹಿಡಿದು ನಡೆಸಿವೆ: ಕೆ.ವಿ.ಪ್ರಭಾಕರ್

* ಈ ಸನ್ಮಾನ ಸಮಾಜವಾದದ ಆಲದ ಮರ ಸಿದ್ದರಾಮಯ್ಯ ಅವರಿಗೆ ಅರ್ಪಣೆ

* ನನ್ನ ಪಾಲಿಗೆ ಒದಗಿ ಬಂದದ್ದನ್ನೆಲ್ಲಾ ಒಪ್ಪಿಕೊಳ್ಳುತ್ತಾ ಹೋದೆ

* ಪತ್ರಕರ್ತ ಸಮುದಾಯದ ನೆರಳಲ್ಲೇ ಅರಳಿದವನು ನಾನು: - ಕೆ.ವಿ.ಪ್ರಭಾಕರ್

ಬೆಂಗಳೂರು ಆ 19: ಪತ್ರಕರ್ತನಾಗಿ ಸಮಾಜವನ್ನು ಬಿಡಿ-ಬಿಡಿಯಾಗಿ ನೋಡುತ್ತಿದ್ದ ನಾನು ಸಮಾಜವಾದದ ಆಲದ ಮರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಇಡಿ ಇಡಿಯಾಗಿ ಗ್ರಹಿಸುವುದನ್ನು ಕಲಿತೆ. ಹೀಗಾಗಿ ಇಲ್ಲಿ ನನಗೆ ಸಲ್ಲುವ ಎಲ್ಲಾ ಸನ್ಮಾನ, ಗೌರವಗಳನ್ನು ನಾನು ಆಲದ ಮರಕ್ಕೇ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ "ಪ್ರಭಾಭಿನಂದನಂ" ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹಿಂದುಳಿದ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಬದುಕಿನ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ನನ್ನ ಪಾಲಿಗೆ ಒದಗಿ ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾ, ಬಂದದ್ದೆಲ್ಲವನ್ನೂ ಬಂದ ಹಾಗೆಯೇ ಸ್ವೀಕರಿಸುತ್ತಾ ಮುಂದೆ ಸಾಗಿ ಈಗ ನಿಮ್ಮ ಮುಂದೆ ಧನ್ಯತೆಯಿಂದ ನಿಂತಿದ್ದೇನೆ. ನಾನು ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ ವೃತ್ತಿಪರತೆ ಮತ್ತು ಕರ್ತವ್ಯ ಪ್ರಜ್ಞೆ ಇಲ್ಲಿಯವರೆಗೂ ನನ್ನನ್ನು ಬೆರಳಿಡಿದು ನಡೆಸಿದೆ ಎಂದು ಭಾವಿಸುತ್ತೇನೆ.



ನಾನು ಕನ್ನಡ ಪ್ರಭ ಬಿಟ್ಟು 2013 ರಲ್ಲಿ ಮುಖ್ಯಮಂತ್ರಿಗಳ ನೆರಳಿಗೆ ಬಂದೆ. ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನೆಲ್ಲಾ ಇಲ್ಲಿ ಪ್ರಯೋಗಿಸತ್ತಾ ಹೋದೆ. ಆದರೆ, ಪತ್ರಿಕಾ ಕಚೇರಿಯಲ್ಲಿ ಇದ್ದ ಸಮಯದ ಮಿತಿ ಇಲ್ಲದೆ ಇಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯದ ಪತ್ರಕರ್ತ ಸಮುದಾಯ ನನ್ನ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿಗಳ ಮಾಧ್ಯಮ‌ ಸಂಯೋಜಕ ಆಗಿದ್ದ ಸಂದರ್ಭದಲ್ಲಿ, ಮಾಧ್ಯಮ‌ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕೆಲಸ ಕಲಿಯಲು ಕೊಟ್ಟ ಅವಕಾಶ, ನೀಡಿದ ಪ್ರೋತ್ಸಾಹ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಈ ಆತ್ಮವಿಶ್ವಾಸ ಒಂದು ಸಂಗತಿಯನ್ನು ಹಲವು ಕೋನಗಳಿಂದ ಅರ್ಥ ಮಾಡಿಕೊಳ್ಳುವುದನ್ನು ಕಲಿಸಿತು. ಬಿಡುವಿಲ್ಲದ ಪ್ರಯಾಣ, ನಿದ್ದೆ ಇಲ್ಲದ ರಾತ್ರಿಗಳು, ಮನೆ-ಮಕ್ಕಳಿಗೆ ಸಮಯ ಕೊಡಲು ಸಾಧ್ಯವಿಲ್ಲದಾದಾಗ, ರಾಜಕಾರಣ/ಒಳ ರಾಜಕಾರಣ ಕೆಲವೊಮ್ಮೆ ನನ್ನ ಆತ್ಮವಿಶ್ವಾಸವನ್ನು ಅಲ್ಲಾಡಿಸಿ ಪತ್ರಿಕೆ ಕೆಲಸ ಬಿಟ್ಟು ತಪ್ಪು ಮಾಡಿದ್ನಾ ಅಂತಲೂ ಅನ್ನಿಸಿದ್ದಿದೆ. ಇಂಥಾ ಘಳಿಗೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೇ ದಿನಕ್ಕೆ 16-18 ಗಂಟೆ ಕೆಲಸ ಮಾಡುವಾಗ ಅದರ ಮುಂದೆ ನನ್ನದೇನು ಎಂದುಕೊಂಡು ಮತ್ತೆ ಚಾರ್ಜ್ ಆಗುತ್ತಿದ್ದೆ ಎನ್ನುವುದನ್ನು ಕೆವಿಪಿ ನೆನಪು ಮಾಡಿಕೊಂಡೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಬಳಿಕ ಶಿವಾನಂದ ತಗಡೂರು ಅವರು ಪತ್ರಕರ್ತ ಸಮುದಾಯದ ರಾಶಿ ರಾಶಿ ಸಮಸ್ಯೆಗಳನ್ನು ಪ್ರತೀ ದಿನ ನನ್ನ ಬಳಿಗೆ ತರುತ್ತಿದ್ದರು. ಸರ್ಕಾರದಿಂದ, ಇಲಾಖೆಯಿಂದ ಆಗಬೇಕಾದ ಮತ್ತು ಬಾಕಿ ಇರುವ ಕೆಲಸಗಳ ಬಗ್ಗೆ ಕ್ರಿಯಾಶೀಲ ಒತ್ತಡ ಹೇರುತ್ತಿದ್ದರು. ಅದನ್ನೆಲ್ಲಾ ನಾನು ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮತ್ತು ಕಾರ್ಯದರ್ಶಿಗಳಾದ ಕಾವೇರಿ ಮೇಡಂ ಅವರ ಮುಂದಿಡುತ್ತಿದ್ದೆ. ಇವರಿಬ್ಬರೂ ಅತ್ಯಂತ ಸಹೃದಯತೆಯಿಂದ ಸಹಕಾರ ನೀಡಿದರು. ಆಡಳಿತಾತ್ಮಕ ಮತ್ತು ತಾಂತ್ರಿಕ ಅಡೆತಡೆಗಳನ್ನು ನನ್ನೊಂದಿಗೆ ಚರ್ಚಿಸಿ ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ಒಂದು ತಂಡವಾಗಿ ಕೆಲಸ ಮಾಡಿದೆವು. ಇದರ ಒಟ್ಟು ರಿಣಾಮದಲ್ಲಿ ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್, ಆರೋಗ್ಯ ಸಂಜೀವಿನಿ, ಮಾಸಾಶನದ ಹೆಚ್ಚಳ ಸೇರಿ ಹಲವು ಅನುಕೂಲಗಳು ಪತ್ರಕರ್ತ ಸಮುದಾಯದ ಅಂಗೈ ತಲುಪುವಂತಾಯಿತು. ಹೀಗಾಗಿ ಇವತ್ತಿನ ಈ ಸನ್ಮಾನ ಮತ್ತು ಗೌರವದಲ್ಲಿ ಅವರದ್ದೂ ದೊಡ್ಡ ಪಾಲು ಇದೆ ಧನ್ಯತೆ ಅರ್ಪಿಸಿದರು.

ಹೀಗೆ ನನಗೆ ನೆರಳಾದವರು, ಜೊತೆ ನಿಂತವರ ಪಾಲಿನ ಗೌರವಗಳನ್ನು ಅರ್ಪಿಸಿದ ಬಳಿಕವೂ ಇವತ್ತಿನ ಈ ಸನ್ಮಾನದ ಭಾರ ನನ್ನ ಮೇಲೆ ಸದಾ ಇರುತ್ತದೆ. ಇದು ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪತ್ರಕರ್ತರು ತಮ್ಮ ವೃತ್ತಿಪರ ಅಗತ್ಯಗಳಿಗಾಗಿ ಪ್ರತಿಭಟನೆ ಮಾಡುವ ಅಗತ್ಯವೇ ಬಾರದಂತೆ ನಾನು ಕೆಲಸ ಮಾಡಬೇಕು ಎಂದು ಮಾಧ್ಯಮ ಸಲಹೆಗಾರ ಆದ ದಿನವೇ ನಿರ್ಧರಿಸಿದ್ದೆ.
ಪತ್ರಕರ್ತ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಾ ಈ ಭಾರವನ್ನು ನಾನು ಇಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ಇಲ್ಲಿಯವರೆಗೂ ನಾನು ನಡೆದು ಬಂದಿದ್ದೇನೆ. ನನ್ನ ಮುಂದಿನ ನಡೆಯಲ್ಲೂ ನೀವೆಲ್ಲಾ ನನ್ನ ಜೊತೆಗಿರುತ್ತೀರಿ ಎಂದು ನಂಬಿದ್ದೇನೆ. ಈ ಭರವಸೆಯೊಂದಿಗೆ ನನ್ನ ಧನ್ಯತೆಯ ಮಾತುಗಳನ್ನು ಮುಗಿಸುತ್ತೇನೆ.

ವಿಧಾನಸೌಧದ ನನ್ನ ಕಚೇರಿ ಕೊಠಡಿ ಸಂಖ್ಯೆ 204 ಪತ್ರಕರ್ತರಿಗಾಗಿ ಸದಾ ತೆರೆದಿರುತ್ತದೆ ಎಂದು ವಿವರಿಸಿದರು.

ಹಿರಿಯ ಲೇಖಕ, ಪತ್ರಕರ್ತ ಜಿ.ಎನ್.ಮೋಹನ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರೂ ಸನ್ಮಾನಿತರಾದರು. KUWJ ರಾಜ್ಯ ಮತ್ತು ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

*ತಾಳ್ಮೆ ಕಲಿತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ*

ಪತ್ರಿಕಾ ವೃತ್ತಿಯೇ ನನ್ನ ಪ್ರಪಂಚ. ಪತ್ರಕರ್ತರೇ ನನ್ನ ಒಡನಾಡಿಗಳು. ತಾಳ್ಮೆ, ಸಹನೆಯ ಪಾಸ್ ವರ್ಡ್ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನು ಇವರಿಂದ ಸಹನೆಯನ್ನು ಕಲಿತೆ ಎಂದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*