LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಪತ್ರಿಕಾ ವಿತರಕರ ದಿನಾಚರಣೆ: ಅಥಣಿಯಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ  

​ಅಥಣಿ: ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಪ್ರತಿದಿನ ಬೆಳಗಿನ ಜಾವವೇ ಓದುಗರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರ ಸೇವೆ ಅನನ್ಯ ಎಂದು ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಿರಿಯ ಪತ್ರಕರ್ತ  ಅಣ್ಣಾಸಾಬ ತೆಲಸಂಗ  ಹೇಳಿದರು.
​ಸ್ಥಳೀಯ  ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘದ    ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ರಾಕೇಶ ಮೈಗುರ ಮಾತನಾಡಿ ಮಾಧ್ಯಮ ರಂಗದ ಪ್ರಮುಖ ಕೊಂಡಿಯಾಗಿರುವ ವಿತರಕರು, ಸಮಾಜಕ್ಕೆ ಜ್ಞಾನ ಮತ್ತು ಮಾಹಿತಿಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.ಈ ವೇಳೆ ಮುಖ್ಯ ಅತಿಥಿಯಾಗಿ ಕರವೇ ತಾಲೂಕು ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ  ಹಾಗೂ ಪತ್ರಕರ್ತ ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ ಮಾತನಾಡಿದರು. 
​ಈ ವಿಶೇಷ ಕಾರ್ಯಕ್ರಮದಲ್ಲಿ ಅಥಣಿ ಪಟ್ಟಣ  ನಿಷ್ಠಾವಂತ ಪತ್ರಿಕಾ ವಿತರಕರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿವುಕುಮಾರ ಅಪರಾಜ, ಪರಶುರಾಮ ನಂದೇಶ್ವರ, ರಾಜು ಗಾಲಿ, ರಮೇಶ ಬಾದವಾಡಗಿ,ಚಂದ್ರಶೇಖರ ತೆವರಟ್ಟಿ,ಕಲ್ಲಪ್ಪ ಕನಾಳ,ಅಜೀತ ಕಾಂಬಳೆ,ಅಬ್ದುಲಜಬ್ಬಾರ್ ಚಿಂಚಲಿ,ರಾಜು ಕಾವೇರಿ, ಯಾಸಿನ್ ಜಾರೆ ಸೇರಿದಂತೆ ತಾಲೂಕಿನ ವಿವಿಧ ದಿನಪತ್ರಿಕೆಗಳ ವಿತರಕರು, ಮುದ್ರಣ ಮಾಧ್ಯಮದ ಸಿಬ್ಬಂದಿ ಹಾಗೂ ಕಾರ್ಯನಿರತ ಪತ್ರಕರ್ತರು ಉಪಸ್ಥಿತರಿದ್ದು, ವಿತರಕರ ಶ್ರಮವನ್ನು ಸ್ಮರಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಧಿಕಾರಿಗಳು ಜನರ ಕಷ್ಟಗಳಿಗೆ ಧನಾತ್ಮಕವಾಗಿ ಸ್ಪಂದಿಸಬೇಕು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ್ ಟಿ.ಹೆಚ್.ಎಂ."ಕನಕ ನಗರದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ" ಹಳೆಯ ಕೇಬಲ್‌ಗಳು, ಹಾನಿಗೊಳಗಾದ ಕಂಬಗಳಿಂದ ಸಮಸ್ಯೆ; ತ್ವರಿತ ದುರಸ್ತಿಗೆ ಸಾರ್ವಜನಿಕರ ಆಗ್ರಹಬೀಳಗಿ: ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ೬೧ನೇ ಜನ್ಮದಿನಾಚರಣೆ ಮತ್ತು ಜನಸೇವಾ ಕಾರ್ಯಕ್ರಮಗಳುಪತ್ರಿಕಾ ವಿತರಕರ ದಿನಾಚರಣೆ: ಅಥಣಿಯಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ  ಶಿಕ್ಷಣ, ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ ಸಾಧ್ಯ: ರಾಬರ್ಟ್ ದದ್ದಾಪುರಿಶೀಘ್ರದಲ್ಲೇ ಮುದ್ದೇಬಿಹಾಳಕ್ಕೆ ಅತ್ಯಾಧುನಿಕ ಮೇಘಾ ಮಾರುಕಟ್ಟೆ  ವ್ಯಾಪಾರಸ್ಥರಿಗೆ ಲಭ್ಯ: ಶಾಸಕ ಸಿ.ಎಸ್.ನಾಡಗೌಡಇಂದು ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರಸಾದಸಂಗೊಳ್ಳಿ ರಾಯಣ್ಣನ ಶೌರ್ಯ, ದೇಶಪ್ರೇಮ ಯುವಪೀಳಿಗೆಗೆ ಪ್ರೇರಣೆ: ಶಾಸಕ ಯಶವಂತರಾಯಗೌಡ ಪಾಟೀಲಬರ ಘೋಷಿಸದಿದ್ದರೆ ಅಹೋರಾತ್ರಿ ಧರಣಿ, ಉಗ್ರ ಹೋರಾಟದ ಎಚ್ಚರಿಕೆ