LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮುಸ್ಲಿಮರಿಗೆ ರಮಝಾನ್ ತಿಂಗಳ ಬಹಳ ಪವಿತ್ರ ಮಾಸಾಚರಣೆಯಾದೆ - ಪ್ರಸನ್ನಗಡಾದ್





   ಕೊಪ್ಪಳ : ಮುಸ್ಲಿಂ ಸಮಾಜದವರಿಗೆ ರಮಝಾನ್ ತಿಂಗಳ ಬಹಳ ಪವಿತ್ರ ಮಾಸಾಚರಣೆ ಯಾಗಿದೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷ ಪ್ರಸನ್ನ ಗಡಾದ್ ಹೇಳಿದರು.

    ಅವರು ನಗರದ ದಿಡ್ಡಿಕೇರಾ ಬಡಾವಣೆಯಲ್ಲಿ ಮುಸ್ಲಿಮ್ ಪಂಚ್ ಕಮಿಟಿ ಹಾಗೂ ದಿಡ್ಡಿಕೇರಾ ಬಡಾವಣೆಯ ಜುಮ್ಮಾ ಮಸೀದಿ ನಿರ್ವಹಣಾ ಕಮಿಟಿ ಇವರ ಸಹಯೋಗದಲ್ಲಿ ಏರ್ಪಡಿಸಿದ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು,

 ಮುಂದುವರೆದು ಮಾತನಾಡಿ ಈ ತಿಂಗಳಲ್ಲಿ ಪ್ರತಿದಿನ ಉಪವಾಸ ಮಾಡುವುದು. ಐದು ಸಲ ನಮಾಝ್  ಜೊತೆಗೆ ಪ್ರತಿದಿನ ರಾತ್ರಿ ವೇಳೆಯಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಮತ್ತು ವೈಯಕ್ತಿ ಕಪ್ರಾರ್ಥನೆ ಮಾಡುತ್ತೀರಿ. ಜ್ಞಾನ ಮಾಡುತ್ತೀರಿ. ಖುರ್ ಆನ್ ಓದುತ್ತಿರಿ. ಒಳ್ಳೆ ಒಳ್ಳೆ ಗ್ರಂಥಗಳನ್ನು ಓದಿ ತಮಗೆ ಒಳ್ಳೆಯದನ್ನ ದೇವರಲ್ಲಿ ಭಕ್ತಿಪೂರ್ವಕವಾಗಿ ಕೇಳಿಕೊಳ್ಳುತ್ತೀರಿ. ಜೊತೆಗೆ ನಾಡಿಗೂ ಕೂಡ ಒಳ್ಳೆಯದು ಆಗಲಿ ಎಂದು ತಾವು ಬಯಸುತ್ತೀರಿ. ಕೊಪ್ಪಳದಲ್ಲಿ ಹಿಂದೂ ಮುಸ್ಲಿಮ್ ಹಿರಿಯರು ಅಣ್ಣ ತಮ್ಮರಂತೆ ಹಿಂದಿನಿಂದಲೂ ಕೂಡಿ ಬಂದಿರುವುದು ನಾವು ನೀವು ನೋಡಿದ್ದೇವೆ.ಮುಂದೆಯೂಕೂಡ ಇದೇ ರೀತಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳೋಣ. ತಾವು ಉಪವಾಸ ಮಾಡಿ ನಾಡಿಗಾಗಿ ಪ್ರಾರ್ಥನೆ ಮಾಡುತ್ತೀರಿ ತಮಗೂ ಕೂಡ ಅಲ್ಲಾಹನು ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸಲಿ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್ ಹೇಳಿ ರೋಜಾದಾರ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸಿದರು.


  ಇನ್ನೊಬ್ಬ ಮುಖ್ಯ ಅತಿಥಿಗಳಾಗಿದ್ದ ಶ್ರೀ ಗವಿಸಿದ್ಧೇಶ್ವರ ಅರ್ಬನ್ ಕೋ - ಆಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಹಾಗೂ ನಗರ ಸಭೆ ಮಾಜಿ ಸದಸ್ಯ ರಾಜಶೇಖರ ಗೌಡ ಅಡೂರು ಮಾತನಾಡಿ ನಮ್ಮ ಮನೆಯಲ್ಲಿ ನಾವಷ್ಟೇ ಊಟ ಮಾಡಬಾರದು.ಎಲ್ಲಾ ಸಮಾಜದ ಬಡವರನ್ನು ಸೇರಿಸಿಕೊಂಡು ಇಫ್ತಾರ್ ಕೂಟ ಮಾಡುವುದರಿಂದ ಸೌಹಾರ್ದತೆ ಹೆಚ್ಚಾಗುವಂತಹ ಸಂದರ್ಭ ಇದು.ಕೊಪ್ಪಳ ಹಿಂದೂ ಮುಸ್ಲಿಮ್ ಸೌಹಾರ್ದತೆಗೆ ಹೆಸರಾಗಿದೆ. ಎಲ್ಲಾ ಸಮಾಜದ ಎಲ್ಲ ಕಾರ್ಯಕ್ರಮಗಳಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಎಲ್ಲರೂ ಭಾಗವಹಿಸುತ್ತಾರೆ ಎಂದು ಹೇಳಿದರು.

     ದಿಡ್ಡಿಕೇರಾ ಬಡಾವಣೆಯ ಜುಮ್ಮಾ ಮಸೀದಿಯ ಪೇಷ್ ಇಮಾಮ್ ಹಾಫೀಝ್ ಮೊಹಮ್ಮದ್ ಮೋಹಿಯುದ್ದೀನ್ ಬಡೆ ಘರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ರಮಝಾನ್ ತಿಂಗಳವು ತಾಳ್ಮೆಯ ಸಂದೇಶ ಸಾರುತ್ತದೆ. ಇಫ್ತಾರ್ ಕೂಟ ಏರ್ಪಡಿಸುವ ಸಂದರ್ಭದಲ್ಲಿ ನಾವು ಅಷ್ಟೇ ಅಲ್ಲ ನೆರೆಹೊರೆಯವರಾಗಿರುವ ನಮ್ಮ ಕುಟುಂಬದ ಸದಸ್ಯರಂತಿರುವ ಹಿಂದೂ ಸಹೋದರರೊಂದಿಗೆ ಒಳಗೊಂಡು ಊಟ ಮಾಡುವ ಮೂಲಕ ಹಿಂದೂಸ್ಥಾನದಲ್ಲಿ ಎಲ್ಲಾ ಧರ್ಮಗಳ ಜನರು ಮಾನವೀಯತೆಯಿಂದ ಜೀವಿಸುತ್ತಿದ್ದೇವೆ.ಶಾಂತಿ ಸಹಬಾಳ್ವೆ ನಡೆಸುತ್ತಿದ್ದೇವೆ ಎಂಬ ಸಂದೇಶ ಜಗತ್ತಿಗೆ ರವಾನೆ ಮಾಡುವ ಉದ್ದೇಶದಿಂದ ಇಫ್ತಾರ್ ಕೂಟ ಏರ್ಪಡಿಸಲಾಗಿದೆ ಎಂದು ಹೇಳಿದರು.

   ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಮ್. ಪಾಶಾ ಕಾಟನ್ ಮಾತನಾಡಿದರು.

   ವೇದಿಕೆ ಮೇಲೆ ದಿಡ್ಡಿಕೇರಾ ಬಡಾವಣೆಯ ಹಿರಿಯ ಮುಖಂಡರಾದ ಇಬ್ರಾಹಿಮ್ ಸಾಬ್ ಅಡ್ಡವಾಲೆ. ಫುರ್ ಖಾನ್ ಅಹಮದ್ ದಾಗದಾರ್.ಸಿರಾಜ್ ಕೋಲ್ಕಾರ್. ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶ.ಮುನೀರ್ ಸಿದ್ಧಿಕಿ.ಹಿರಿಯ ಮುಖಂಡ ಬಾಷು ಸಾಬ್ ಖತಿಬ್. ಶಿವಕುಮಾರ್ ಪೌಲಿ ಶೆಟ್ಟರ್. ಗಿರಣಿ ಮೈನು.ನಜೀರ್ ಅಹ್ಮದ್ ನಿಶಾನಿ.ಬಾಬುಲಾಲ್ ದಫೆದಾರ್.ಗಫೂರ್ ಗಿರಣಿ. ಶಂಶುದ್ದೀನ್ ಪರದೆ ಘರ್. ರಫಿ ಕೊತ್ವಾಲ್.ಕರೀಮ್ ಎಮ್. ಕುರಿ.ಕೆಇಬಿ. ನಯೀಮ್ ದಾಗದಾರ್. ಮೈನು ಸಾಬ್ ಕುದುರಿ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್. ಮಖಬೂಲ್ ರಾಯಚೂರು. ಗಾಳೆಪ್ಪ ಮುಂಗೋಲಿ.ಸಲಿಮ್ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.

    ಜಾತ್ಯತೀತ ಜನತಾದಳದ ಕ್ರೀಡಾ ವಿಭಾಗದ ಜಿಲ್ಲಾ ಅಧ್ಯಕ್ಷ ಸೈಯ್ಯದ್ ಮಹೆಮೂದ ಹುಸೇನಿ(ಬಲ್ಲೆ) ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್