ಇಂಡಿ: ಸಾಮಾಜೀಕ ಚಿಂತನೆ ಹೊಂದಿರುವ ದೇವರಾಜ ಅರಸರು, ವೀರೆಂದ್ರ ಪಾಟೀಲ, ಎಸ್.ಬಂಗಾರಪ್ಪನವರು, ಎಮ್ ವೀರಪ್ಪ ಮೋಯಿಲಿ, ಎಸ್.ಎಮ್.ಕೃಷ್ಣಾ ಸೇರಿದಂತೆ ಸಿದ್ದರಾಮಯ್ಯನವರು ಕೂಡಾ ಅನೇಕ ಗ್ಯಾರೆಂಟಿ ಯೊಜನೆಗಳನ್ನು ಜಾರಿಗೆ ತರುವ ಮೂಲಕ ಭಾಗ್ಯವನ್ನು ರಾಜ್ಯಕ್ಕೆ ಕರುಣಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕೂಡಾ ತಮ್ಮದೆಯಾದ ವಿಭಿನ್ನವಾದ ಮುಂದಾಲೋಚನೆ ಇಟ್ಟುಕೊಂಡು ಪ್ರಜಾ ಸೇವೆ ಮೂಲಕ ಆಡಳಿತವನ್ನು ಜನರ ಹತ್ತಿರಕ್ಕೆ ಕೊಂಡ್ಯೊಯುವ ಕಾರ್ಯ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶನಿವಾರರಂದು ನಗರದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲುಕಾ ಆಡಳಿತ ಹಮ್ಮಿಕೊಂಡ ಪ್ರಜಾಸೇವೆ ಆಂದೊಲನಕ್ಕೆ ಚಾಲನೆ ನೀಡಿ ಸಾರ್ವಜನಿಕರ ಅಹವಾಲನ್ನು ಸ್ವಿಕರಿಸಿ ಮಾತನಾಡಿದರು.
ಅಧಿಕಾರಿಗಳಾಗಲಿ ನಾವಗಲಿ ಜನರ ಸೇವೆ ಮಾಡಬೇಕಾಗಿದ್ದು ನಾಗರಿಕ ಸಮುದಾಯದ ನಮ್ಮ ಆಧ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವು ಇಂದು ಅರ್ಜಿ ನೀಡಿದ ೨೫ ದಿನಗಳೊಳಗಾಗಿ ಅದಕ್ಕೆ ಉತ್ತರ ನೀಡಿ ಪರಿಹಾರ ಕಂಡುಕೊಳ್ಳುವ ಉದ್ದೇಶ ಇದಾಗಿದೆ. ಸಾರ್ವಜನಿಕರು ಕಛೇರಿಗಳಿಗೆ ಅಲೇದಾಡಬಾರದು ಎಂಬ ಪರಿಕಲ್ಪನೆಯಾಗಿದೆ. ಅವರ ಸಮಸ್ಯಗಳಿಗೆ ತಕ್ಷಣ ಪರಿಹಾರ ನೀಡಬೇಕು ಉದ್ದೇಶ ವಾಗಿದ್ದು ದೇಶದಲ್ಲಿ ಮೋದಲಾಗಿದೆ. ಅಧಿಕಾರಿಗಳು ಯಾವುದೆ ಕಾರಣಕ್ಕೂ ವಿಳಂಬ ನೀತಿ ಅನುಸರಿಸಬಾರದು ಎಂಬ ಚಿಂತೆನೆ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಕಾನ್‌ಸೇಪ್ಟಾಗಿದೆ ಎಂದರು.
ತಾಲೂಕಿನ ಅಂಜುಟಗಿ ಗ್ರಾಮದ ಗ್ರಾಮ ನಕ್ಷೆ ತಪ್ಪು ಗ್ರಹಿಕೆಯಿಂದಾಗಿ ಸಕಾರದ ಯಾವುದೆ ಪರಿಹಾರ ಸಿಗತಾ ಇಲ್ಲ ಎಂದು ರೈತರೊಬ್ಬರು ಕೇಳಿದ ಪ್ರಶ್ನೆಗೆ ಶಾಸಕರು ಉತ್ತರಿಸಿ ಇಂತಹ ಸಮಸ್ಯಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಅಪರಿಹಾರ ಸೂಚಿಬೇಕು ಎಂದು ತಿಳಿಸಿ ಸಂಬಂದ ಪಟ್ಟ ಅಧಿಕಾರಿಗಳು ವಾರದಲ್ಲಿ ಸಮಸ್ಯ ಪರಿಹರಿಸಬೇಕು ಎಂದು ತಾಕಿತು ಮಾಡಿದರು.
ಬಾಕ್ಸ್: ಆರ್ಥಿಕವಾಗಿ ತೊಂದರೆ ಅನುಭವಿಸುವ ಬಡ ತಾಯಂದಿರಿಗೆ ಗ್ರಹಲಕ್ಷ್ಮಿ ಯೋಜನೆಯಿಂದ ನೀಡುವ ೨ ಸಾವೀರ ಸಹಾಯವಾಗಿದೆ. ಪ್ರತಿ ಮನೆಗೆ ನೀಡುವ ಗ್ರಹ ಜ್ಯೋತಿಯಿಂದ ಉಚಿತ ವಿದ್ಯುತ, ನೀರುದ್ಯೋಗ ಯುವಕರಿಗೆ ನೀಡುವ ಯುವ ನೀಧಿ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣ ನೀಡಿದ್ದರಿಂದ ಅನೇಕ ಮಹಿಳೆಯರು ಸ್ವಾಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಯೋಜನೆಗಳ ಮೂಲಕ ಪ್ರತಿ ಮನೆಗೆ ತಲುಪಿಸುವ ಜನ ಪ್ರಿಯ ಯೋಜನೆ ನೀಡುವ ಕಾರ್ಯವನ್ನು ನಮ್ಮ ರಾಜ್ಯ ಸರ್ಕಾರ ಮಾಡಿದೆ.
ಯಶವಂತರಾಯಗೌಡ ಪಾಟೀಲ ಶಾಸಕರ ಇಂಡಿ.
ಲಚ್ಯಾಣ, ಇಂಡಿ ನಗರ, ಹಿರೇಬೇವನೂರ ಇಂಡಿ ತಾಲೂಕಾ ಕ್ರೀಡಾಂಗಣಕ್ಕೆ ಟ್ರ್ಯಾಕ್ ಮಾಡಿ ಅನೂಕುಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಮಾನಗಳಲ್ಲಿ ಇದನ್ನು ಪರಿಗಣಿಸಲು ಅಧಿಕಾರಿಗಳಿ ತಿಳಿಸಿದರು.
ತಾಲೂಕಿನ ಲಚ್ಯಾಣ, ಹಿರೇಬೇವನೂರ, ಬೂದಿಹಾಳ, ಇಂಡಿ ನಗರದ ವಿವಿಧ ವಾರ್ಡಗಳ ಸಾರ್ವಜನಿಕರು ನೀಡಿದ ಕಂದಾಯ ಇಲಾಖೆ, ರಸ್ತೆ, ನೀರಾವರಿ, ಪಿಂಚಣಿ ಸೇರಿದಂತೆ ತಮ್ಮ ವ್ಯಯಕ್ತಿಕ ಅಹವಾಲಗಳ ಅರ್ಜಿಗಳಿಗೆ ಅಧಿಕಾರಿಗಳಿಂದ ಪರಿಹಾರವನ್ನು ಶಾಸಕರು ಸೂಚಿಸಿದರು. ಇನ್ನೂ ಕೇಲವು ಅರ್ಜಿಗಳಿಗೆ ಪರಿಹಾರ ಸೂಕ್ತವಾದ ಉತ್ತರವನ್ನು ಅಧಿಕಾರಿಗಳಿಂದ ನೀಡಿ ಪರಿಹರಿಸಲು ತಿಳಿಸಿದರು.
ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭಿಮಣ್ಣ ಕವಲಗಿ, ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಾಲೂಕಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ತಾಪಂ ಇಓ ಮಹಾದೇವಪ್ಪ ಏವೂರ, ತಹಸಿಲ್ದಾರ ನಾಘೆಂದ್ರ ಕೋಳಶೆಟ್ಟಿ, ನಗರ ಸಿಪಿಐ ಪ್ರದೀಪ ಬಿಸೆ, ಸಿಪಿಐ ಸುನೀಲ ಪಾಟೀಲ ಇತರರು ಇದ್ದರು.