Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶ ಆರ್ಥಿಕವಾಗಿ ಬೆಳೆಯಲು ಸಹಕಾರಿ ಸಂಘಗಳ ಪಾತ್ರ ಮುಖ್ಯ :ಪ್ರಹ್ಲಾದ ಜೋಶಿ 





ಮೂಡಲಗಿ : ದೇಶದ ಆರ್ಥಿಕತೆಯನ್ನು ಸದೃಡ ಮಾಡುವ ಸಂಕಲ್ಪ ಸಹಕಾರಿ ಸಂಘಗಳು ಮಾಡಿವೆ. ಸ್ವಾಸ್ಥಿಕ ಹಣಕಾಸು ವ್ಯವಹಾರ ಮಾಡುವ ಮೂರನೇಯ ಶಕ್ತಿಯಾಗಿ ಭಾರತ ಕಾರ್ಯನಿರ್ಹಹಿಸಲಿದೆ. ನಮ್ಮ ದೇಶ ಬೆಳವಣಿಗೆಯಲ್ಲಿ ಅತಿ ಕಡು ಬಡವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಸಮೀಪದ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


19 ಶತಮಾನ ಇಂಗ್ಲೆಡಿನ ಶತಮಾನ 20ನೇ ಶತಮಾನ ಅಮೇರಿಕದ ಶತಮಾನವಾದರೆ 21ನೇ ಶತಮಾನ ಭಾರತದಾಗಿರುತ್ತದೆ, ಬ್ಯಾಂಕಿಂಗ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಸೊಸಾಯಿಟಿಗಳು ಪ್ರಾರಂಭವಾದವು. ರಾಷ್ಟ್ರೀಕೃತ ಬ್ಯಾಂಕಿನ ಹಿಡಿತದಲ್ಲಿ ಸೊಸಾಯಿಟಿಗಳು ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಮತ್ತಷ್ಟು ಸಹಕಾರಿ ಕ್ಷೇತ್ರಕ್ಕೆ ಬಲ ಬಂದತಾಯಿತು ವಿವಿಧ ರೀತಿಯ ಪ್ರಾಯೋಜಕತ್ವನ್ನು ಸೊಸಾಯಿಟಿಗಳಿಗೆ ನೀಡಲಾಯಿತು. ಹಿಂದೆ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ ಆ ಸಮಯದಲ್ಲ ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ಹೇಳಿದಂತೆ ಅವರು ಒಂದು ರೂಪಾಯಿಯನ್ನು ಫಲಾನುಭವಿಗೆ ಹಾಕಿದರೆ ಅದು ಕೇವಲ 15 ಪೈಸೆ ಮುಟ್ಟತ್ತಿತ್ತು ಸದ್ಯ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಕುವ ಪ್ರತಿ ರೂಪಾಯಿಯು ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗುವದರ ಜೊತೆಗೆ ಆತನ ಮೊಬೈಲಿಗೆ ಸಂದೇಶ ಮುಟ್ಟವಂತಹ ತಂತ್ರಜ್ಞಾನ ದೇಶದಲ್ಲಿದೆ ಎಂದರೆ.

ಅದು ದೇಶದ ಪ್ರಗತಿಯ ದ್ಯೋತಕ ಎಂದ ಅವರು ಸೌರ ವಿದ್ಯುತ್, ಗ್ಯಾಸ ವಿತರಣೆ. ಪಡಿತರ ವಿತರಣೆಯಂತಹ ಯೋಜನೆಗಳಿಂದ ದೇಶದ ಪ್ರಗತಿಯನ್ನು ಸಹಕಾರ ಸಂಸ್ಥೆಗಳ ಮೂಲಕ ಮಾಡಲಾಗುತ್ತಿದೆ. ಗ್ರಾಮೀಣ ಅರ್ಥ ವ್ಯವಸ್ಥೆ ಬಲ ಪಡಿಸಿದಾಗ ದೇಶದ ಪ್ರಗತಿಯಾಗುತ್ತದೆ ಎಂದರು.


 ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಸಂಸದ ಈರಣ್ಣ ಕಡಾಡಿ ಮಾತನಾಡಿ. 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ರೂ.23.50 ಲಕ್ಷ ಶೇರು ಬಂಡವಾಳ, ರೂ.106.55 ಕೋಟಿ ದುಡಿಯುವ ಬಂಡವಾಳ, ರೂ.13.35 ಕೋಟಿ ಗುಂತಾವಣಿಗಳು, ರೂ.96.72 ಕೋಟಿ ಠೇವುಗಳನ್ನು ಹೊಂದಿದ್ದು, ರೂ.2.76 ಕೋಟಿ ನಿವ್ವಳ ಲಾಭವನ್ನು ಗಳಿಕೆ ಮಾಡಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಹೂಡಿಕೆಯ ಅವಕಾಶಗಳನ್ನು ಒದಗಿಸಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸಿ, ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸದ್ಬಳಿಕೆ ಮಾಡುತ್ತಿರುವ ಹೆಗ್ಗಳಿಕೆ ಹೊಂದಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ. ಬೆಂಗಳೂರಿನ.ಕ.ರಾ.ಸೌ. ಸ. ಸಹಕಾರಿ ಸಂಘದ ಅಧ್ಯಕ್ಷ ಜಿ ನಂಜನಗೌಡ ಮಾತನಾಡಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಗಳು ಹಾಗೂ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿಗಳು ಆಶಿರ್ವಚನ ನೀಡಿದರು


    ಸಾನಿಧ್ಯ ವಹಿಸಿದ ಕಾಡಸಿದ್ದೇಶ್ವರ ಮಠ ಕನ್ನೇರಿ ಪೂಜ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿಗಳು,  ಮಾತನಾಡಿ. ಹಣ ಬಹುಮುಖಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂರ್ಖರನ್ನು ಬುದ್ದಿವಂತನಾಗಿಸುತ್ತದೆ. ಗುಣವಂತನ್ನು ಬುದ್ದಿ ಹೀನನಾಗಿಸುತ್ತದೆ. ದುಡ್ಡು ಜೀವನಕ್ಕೆ ಸಾಧನೆ ಹೊರತು ಸಾಧ್ಯವಲ್ಲ. ಹಣಕ್ಕೆ ದೇವರಾಗುವ ಶಕ್ತಿ ಇಲ್ಲ. ಹಣದ ವೈಶಿಷ್ಟ್ಯ ಏನೆಂದರೆ ಅದು ಚಲಾವಣೆಯಾಗುತ್ತಿರಬೇಕು. ಸಹಕಾರ ನಿಯಮವು ಅದೆ ಆಗಿದೆ ಉಳ್ಳವರು ಹಣವನ್ನು ಡಿಪಾಜಿಟ್ ಮಾಡುತ್ತಾರೆ. ಇಲ್ಲದವರು ಸಾಲ ಪಡೆಯುತ್ತಾರೆ. ಸಹಕಾರಿ ರಂಗ ಸರ್ಕಾರಕ್ಕೆ ಪರ್ಯಾಯವಾಗಿ ಕಾರ್ಯನಿರ್ಹಸುತ್ತಿವೆ ಎಂದರು


ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ. ಬೆಳಗಾವಿ ಜಿಲ್ಲಾ ಮದ್ಯವರ್ತಿ ಬ್ಯಾಂಕವು ಮೊದಲು ಸತ್ತ ಹಾವಾಗಿತ್ತು  ನನ್ನ ಕೈಯಲ್ಲಿ ನೀಡಿದಾಗ  ರೂ 544 ಕೋಟಿ ಇದ್ದ ದುಡಿಯುವ ಬಂಡವಾಳದಿಂದ  6800 ಕೋಟಿ ದುಡಿಯುವ ಬಂಡವಾಳ ಮಾಡಲಾಗಿದೆ. 50 ಲಕ್ಷ ಕುಟುಂಬಗಳು ಆ ಬ್ಯಾಂಕಿನ ಆಶ್ರಯಿಸಿವೆ. ಚುನಾವಣೆಗಾಗಿ ಸೊಸಾಯಟಿಗಳಿಗೆ ಹಣ ನೀಡಿದ್ದಾರೆ ಆದರೆ 15 ತಾಲೂಕಿನ ಸೊಸಾಯಿಟಿಗಳ ಸದಸ್ಯರು ನಿಸ್ವಾರ್ಥ ಸೇವೆಯ ಅಭ್ಯರ್ಥಿಯನ್ನು ಗೆಲಿಸಿ. ಅಲ್ಪ ಸುಖಕ್ಕಾಗಿ ಆಶೆ ಪಟ್ಟರೆ ಮುಂದಿನ ದಿನಮಾನಗಳಲ್ಲಿ ಆಸ್ತಿ ಕಳೆದುಕೊಳ್ಳುತ್ತಿರಿ. ಸ್ವಾಭಿಮಾನದಿಂದ ಬದುಕಿದರೆ ಸುವರ್ಣಕರವಾದ ದಿನಗಳು ಬರುತ್ತವೆ ಎಂದರು


ವೇದಿಕೆಯ ಮೇಲೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ನಿಖಿಲ್ ಕತ್ತಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಪಿ. ರಾಜೀವ, ಡಾ ವಿಶ್ವನಾಥ ಪಾಟೀಲ, ಹುಬ್ಬಳಿ ಮಹಾಪೌರ ಜ್ಯೋತಿ ಪಾಟೀಲ. ಮಲ್ಲಣ್ಣ ಯಾದವಾಡ, ರವಿ ಪಾಟೀಲ್. ವಿಜಯ ಮೆಟಗುಡ್, ಎಮ್ ಎಮ್ ಜೀರಲಿ, ಮಾಜಿ ಜಿಪಂ ಬಸಗೌಡ ಪಾಟೀಲ್, ಸಹಕಾರಿ ಅಧ್ಯಕ್ಷ ಬಾಳಪ್ಪ ಬೆಳಕೂಡ, ಬಿ ಬಿ ಹಂದಿಗುಂದ, ರಮೇಶ ಉಟಗಿ, ಜಯಾನಂದ ಮುನವಳ್ಳಿ. ಸಂಘದ ನಿರ್ದೇಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಸಹದೇವ ಹೆಬ್ಬಾಳ, ಶಿವಪ್ಪ ಗೋಸಬಾಳ, ಅಕ್ಕವ್ವ ಹಡಗಿನಾಳ, ಕಾಶವ್ವಾ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ನಿಂಗಪ್ಪ ಮಿಡಕನಟ್ಟಿ, ಪ್ರಧಾನ ವ್ಯವಸ್ಥಾಪಕ (ಪ್ರಭಾರಿ) ಪರಪ್ಪ ಗಿರೆಣ್ಣವರ ಉಪಸ್ಥಿತರಿದ್ದರು.


ಸ್ವಾಗತ ನಿರ್ಧೇಶಕ ಸತೀಶ ಕಡಾಡಿ.ನಿರೂಪಣೆ ಸೋಮಶೇಖರ ಮಗದುಮ್.ಉಪಾಧ್ಯಕ್ಷ ಶ್ರೀಶೈಲ ತುಪ್ಪದ ವಂದಿಸಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ