LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬೆಂಗಳೂರಿನ 103 ಬಸ್​ ನಿಲ್ದಾಣಗಳ ಸ್ಥಳಾಂತರಕ್ಕೆ ಪ್ಲಾನ್

ಬೆಂಗಳೂರು,ಅಕ್ಟೋಬರ್ 21: ಬೆಂಗಳೂರಿನ ಯಾವುದೇ ದಿಕ್ಕಿಗೆ ಹೋದರೂ ಟ್ರಾಫಿಕ್ ​​ ಕಿರಿಕಿರಿ ಸರ್ವೆಸಾಮಾನ್ಯವಾಗಿದೆ.ಇದಕ್ಕೆ ಹಲವು ಕಾರಣಗಳಿದ್ದು, ಟ್ರಾಫಿಕ್​ ಸಿಗ್ನಲ್​ಗಳ ಬಳಿ ಬಸ್​ ನಿಲ್ದಾಣಗಳಿರುವುದೂ ಪ್ರಮುಖ ಕಾರಣವಾಗಿದೆ. ಹೀಗಾಗಿ ನಗರದ ಎಲ್ಲೆಲ್ಲಿ ಅವೈಜ್ಞಾನಿಕವಾಗಿ, ಅಸಮರ್ಪಕ ಬಸ್​ ನಿಲ್ದಾಣಗಳಿವೆಯೋ ಅವುಗಳನ್ನು ಸ್ಥಳಾಂತರ ಮಾಡಲು ಟ್ರಾಫಿಕ್​ ಪೊಲೀಸರು ಹಾಗೂ ಬಿಎಂಟಿಸಿ ಜಂಟಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧ ಮಾಡಿದೆ.



ಬೆಂಗಳೂರಿನಲ್ಲಿ ಓಡಾಟ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಟ್ರಾಫಿಕ್​ ದಟ್ಟಣೆ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಹದಗೆಟ್ಟಿರುವ ರಸ್ತೆಗಳು, ರಸ್ತೆ ಗುಂಡಿಗಳು, ಅಡ್ಡಾದಿಡ್ಡಿ ಪಾರ್ಕಿಂಗ್​ ಜೊತೆಗೆ ಟ್ರಾಫಿಕ್​ ಸಿಗ್ನಲ್​ಗಳ ಬಳಿಯೇ ಬಸ್​ ನಿಲ್ದಾಣಗಳಿರುವುದೂ ಕೂಡ ಟ್ರಾಫಿಕ್​ ಜಾಮ್​​ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿಯೇ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿರುವ ಬೆಂಗಳೂರು ಸಂಚಾರ ಪೊಲೀಸರು, ಬಿಎಂಟಿಸಿ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ನಡೆಸಿ ಸ್ಥಳಾಂತರ ಮಾಡಬೇಕಾದ 103 ಬಸ್​ ನಿಲ್ದಾಣಗಳ ಪಟ್ಟಿ ಮಾಡಿದ್ದಾರೆ.

ಸಾಮಾನ್ಯವಾಗಿ ಹೆಚ್ಚಿನ ದಟ್ಟಣೆಯ ಸಾಕ್ಷಿಯಾಗುವ ಸಿಗ್ನಲ್​ಗಳಿಗೆ ಸಮೀಪವಿರುವ 103 ಬಸ್​ ನಿಲ್ದಾಣಗಳನ್ನ ಕನಿಷ್ಠ 50 ಮೀಟರ್​​ಗಳಿಂದ 300 ಮೀಟರ್​ಗಳವರೆಗೂ ಸ್ಥಳಾಂತರ ಮಾಡುವ ಅನಿವಾರ್ಯತೆ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು, ಬಿಎಂಟಿಸಿ ಸಮೀಕ್ಷೆಯಲ್ಲಿ ಮನಗಂಡಿದ್ದಾರೆ. ಹೀಗಾಗಿ ಸ್ಥಳಾಂತರ ಮಾಡಿ ಎಂದು ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ, ಎಂ.ಜಿ ರಸ್ತೆ, ಯಲಹಂಕ ಆರ್​ಎಂಜೆಡ್​​, ಈಸ್ಟ್​ ಎಂಡ್​ ಜಂಕ್ಷನ್​, ಐಟಿಪಿಎಲ್​ ಆರ್​ಎಕ್ಸ್​ಡಿಕ್ಸ್​ ಆಸ್ಪತ್ರೆ, ಹೋಫ್​ಫಾರ್ಮ್​​​​ ಜಂಕ್ಷನ್​ ಸೇರಿ 103 ಸ್ಥಳಗಳಲ್ಲಿ ಟ್ರಾಫಿಕ್​ ದಟ್ಟಣೆ ಇಳಿಸುವ ಉದ್ದೇಶವಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್