LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಬೆಳಗಾವಿ ಜನತೆಗಿದು ಅದೃಷ್ಟವೋ? ದುರದೃಷ್ಟವೋ?

ಹೌದು ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಪಡೆದ ಕುಂದಾನಗರಿ ಕುಂದಣಗಿತ್ತಿ  ನಗರದಲ್ಲಿ ಈಗಾಗಲೇ ಹೊಸ ಕಟ್ಟಡವು ನಗರ ಬಸ್ಸು ನಿಲ್ದಾಣದಿಂದ ಮುಕ್ತ ಸಂಚಾರಕ್ಕೆ ಅಣಿಯಾಗಿ ಹಲವಾರು ದಿನಗಳು  ಗತಿಸಿರುತ್ತದೆ. ತುಂಬಾ ಸುಂದರವಾಗಿ ನಿರ್ಮಿತಗೊಂಡ ಬಸ್ಸ್ ನಿಲ್ದಾಣದಿಂದ ಪ್ರಯಾಣಿಕರು ಹಲವಾರು ತೊಂದರೆ ಅನುಭವಿಸುತ್ತಿರುವುದು ಅಷ್ಟೇ ಸತ್ಯ  ಹಿಂದೆ ಮುಂದೆ ಬೈಯುತ್ತಾ ಸಂಕಟ..ಸಂಕೋಲೆ ಅನುಭವಿಸುತ್ತಾ ನಿಷ್ಠಾವಂತರಂತೆ ಪ್ರಯಾಣ ..ಪ್ರಯಾಸವನೆಲ್ಲ ಅನುಭವಿಸುತ್ತಿದ್ದಾರೆ.

ಕೇಂದ್ರ ಬಸ್ಸ್ ನಿಲ್ದಾಣಕ್ಕೂ ನಗರ ಬಸ್ಸು ನಿಲ್ದಾಣಕ್ಕೂ ಕಣ್ಣಿಗೆ ಕಾಣಲು ಕೇವಲ ಹತ್ತೇ ಹತ್ತು ನಿಮಿಷದ ಕಾಲು ನಡಿಗೆಯ ದಾರಿ ಇರುತ್ತದೆ. ನಡೆದಷ್ಟು ನಡೆದಷ್ಟು ಮನಸು ಕಾಲು ಬಾರ. ಕೈಯಲ್ಲಿ ಐದು ಕೇಜಿ ಲಗೇಜ್ ಬ್ಯಾಗ್ ಇದ್ದರಂತೂ ಸುಸ್ತೋ..ಸುಸ್ತು ಅನುಭವಿಸುವ ಹೀನಾಯ ಸ್ಥಿತಿ ಎದುರಾಗಿದೆ. ಹಿರಿಯ ನಾಗರಿಗರಿಗಂತೂ ಇದು ಹೇಳತೀರದ ಸಮಸ್ಯೆಯಾಗಿದೆ.

 

 

ನಗರ ಬಸ್ಸು ನಿಲ್ದಾಣದಿಂದ ಕೇಂದ್ರ ಬಸ್ಸ್  ನಿಲ್ದಾಣಕ್ಕೆ ರಿಕ್ಷಾ ಮಾಡಿಕೊಂಡು ಹೋಗಲು ಕೇಳಿದರೆ ಮೀಟರ್ ಹಾಕೋಲ್ಲರು ರೂಪಾಯಿ ಅರವತ್ತು , ಐವತ್ತು  ಎಂದು ಬಾಯಿಗೆ ಬಂದಂತೆ ಹೇಳಿ ಹಣ ಕೇಳುವರು.

 

*ಅರ್ಧ ರಾತ್ರಿ ಸಮಯದಲ್ಲಿ ಕೇಂದ್ರ ಬಸ್ಸು ನಿಲ್ದಾಣಕ್ಕೆ ಬಂದು ಇಳಿದು ಮುಂಜಾನೆ ನಗರ ಬಸ್ಸ ಸಂಚಾರ ಆರಂಭದ ದಾರಿ ಕಾಯುತ್ತಾ ಎಲ್ಲಿ ತಂಗಬೇಕು ? ಒಂದೊಂದು ಏರಿಯಾಕ್ಕೆ ಆರು ಗಂಟೆ ,ಏಳು ಗಂಟೆಗೆ, ನಗರ ಬಸ್ಸು ಪ್ರಾರಂಭ ಮಾಡಲಾಗುತ್ತದೆ. ಒಮ್ಮೆ ನಾನೇ ಡಿಸೆಂಬರ್ ತಿಂಗಳ 30 ರಂದು ಬೆಂಗಳೂರಿನಿಂದ ಕೇಂದ್ರ ಬಸ್ಸು ನಿಲ್ದಾಣ ಬೆಳಗಾವಿಗೆ ನಾಲ್ಕು ನಲವತ್ತೈದರ ಸಮಯಕ್ಕೆ ಬಂದು ಇಳಿದೆನು ನಗರ ಬಸ್ಸು ಅರುಗಂಟೆ, ಆರೂವರೆಗೆ ಗಂಟೆಗೆ ಆರಂಭ ಆಗುತ್ತದೆ ಎಂಬುದು ಗೊತ್ತಿದ್ದ ವಿಚಾರ ಆಗಿತ್ತು . ಕೇಂದ್ರ ಬಸ್ಸು ನಿಲ್ದಾಣದಿಂದ ದಾರಿದೀಪದ ಆಸರೆಯಲ್ಲಿ ನಡೆದುಕೊಂಡು ನಗರ ಬಸ್ಸು ನಿಲ್ದಾಣಕ್ಕೆ ಬಂದರೆ  ನಗರ ಬಸ್ಸು ನಿಲ್ದಾಣದ ಗೇಟ್ ಆರೂವರೆ ಗಂಟೆ ಆದರೂ ತೆಗೆದಿಲ್ಲ ಹೊರಗಡೆಯೇ ನಿಂತುಕೊಂಡೆ .ಒಂದು ವಿಧದಲ್ಲಿ ಹೇಳಿದರೆ ಇದು ರಾತ್ರಿ ಸಮಯ ಎನ್ನಬಹುದು. ಮೊದಲೇ ನಗರ ಬಸ್ಸು ನಿಲ್ದಾಣದ ಪರಿಸ್ಥಿತಿ ಹೀಗಿದೆ ಎಂಬುದು ಗೊತ್ತಿದ್ದರೆ ಕೇಂದ್ರ ಬಸ್ಸು ನಿಲ್ದಾಣದಲ್ಲಿಯೇ ತಂಗ ಬಹುದಿತ್ತು. ಪ್ರಥಮವಾಗಿ ಈ ಅನುಭವ ನನ್ನಂತೆ ಇನ್ನೂ ಹಲವರಿಗೆ ಆಗಲೂ ಬಹುದು ಆಗುತ್ತಲೂ ಇರಬಹುದು. ಇದಕ್ಕೆ ಸಧ್ಯ ಪರಿಹಾರವಂತೂ ಇಲ್ಲ ಎಂಬುದು ಅಷ್ಟೇ ಸತ್ಯ.

ಕೇಂದ್ರ ಬಸ್ಸು ನಿಲ್ದಾಣ ಹಾಗೂ ನಗರ ಬಸ್ಸು ನಿಲ್ದಾಣಕ್ಕೆ ಹೋಗುವವರಿಗೆ ಡಿವೈಡರ್ ಕಾರಣದಿಂದ ಓಡಾಡುವುದು ತುಂಬಾನೇ ಕಷ್ಟಕರವಾಗಿದೆ. ಸಾರ್ವಜನಿಕರ ಈ ಸಮಸ್ಯೆಗೆ ಏನಾದರೂ ಪರಿಹಾರ ಬೇಕಲ್ಲವೇ ?


-ಶ್ರೀಮತಿ ರಾಜೇಶ್ವರಿ ಎಸ್ ಹೆಗಡೆ


ಬೆಳಗಾವಿ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್