ಬೆಳಗಾವಿ,
ಲೋಕದ ವಿದ್ಯಮಾನಗಳ ಸೂಕ್ಷ್ಮ ಅವಲೋಕನೆ, ಚಿಂತನೆ ಮಾಡುವ ಸಂವೇದನಾಶೀಲರಿಂದ ಮೌಲಿಕ ಕೃತಿಗಳು ಹೊರಬರಲು ಸಾಧ್ಯವೆಂದು ಹಿರಿಯ ಸಾಹಿತಿ ಶಿ.ಗು.ಕುಸುಗಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ರಾ.ಚ. ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಶ್ರೀ ವಿನಾಯಕ ನಂದಿ, ಇವರ ಪ್ರಥಮ ಕನ್ನಡ ಕವನ ಸಂಕಲನ "ಮೌನದೂರಿನ ಮಾತುಗಳು" ಕೃತಿಯನ್ನು ಬೆಳಗಾವಿಯ ರಾಮತೀರ್ಥ ನಗರದ "ಸಾಹಿತ್ಯ" ನಿಲಯಕ್ಕೆ ಆಗಮಿಸಿ ಕುಸುಗಲ್ಲ ಇವರಿಗೆ ಅರ್ಪಿಸಿದರು.
ಗ್ರಾಮೀಣ ಪರಿಸರದ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡ ಈಗಾಗಲೇ "ಡ್ಯಾನ್ಸಿಂಗ್ ಆನ್ ಡೆಡ್ ಲಾಯಾನ್" ಇಂಗ್ಲೀಷ್ ಕವನ ಸಂಕಲವನ್ನು ಪ್ರಕಟಿಸಿ ಭವಿತವ್ಯದ ಭರವಸೆಯ ಕವಿ ಎಂದು ಸಾಬೀತು ಪಡಿಸಿದ ಈ ಯುವ ಪ್ರತಿಭೆಯಿಂದ ಇನ್ನೂ ಹೆಚ್ಚಿನ ಉತ್ತಮ ಕೃತಿಗಳು ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಲೆಂದು ಶುಭ ಹಾರೈಸಿದರು..