ಮುದ್ದೇಬಿಹಾಳ: ಪಟ್ಟಣದಲ್ಲಿ ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವವನ್ನು ಶುಕ್ರವಾರ ಈಡಿಗ ಹಾಗೂ ಬಜಂತ್ರಿ ಸಮಾಜದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಆಲಮಟ್ಟಿ ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ ವೃತ್ತವನ್ನು ಅಲಂಕರಿಸಿ, ಈಡಿಗ ಸಮಾಜದ ಹಿರಿಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಹಿ ಹಂಚುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಅದೇ ರೀತಿ ತಂಗಡಗಿ ರಸ್ತೆಯಲ್ಲಿರುವ ನೂಲಿಯ ಚಂದಯ್ಯನವರ ವೃತ್ತದಲ್ಲಿ ಬಜಂತ್ರಿ ಸಮಾಜದ ವತಿಯಿಂದ ಸಕಲ ವಾದ್ಯಮೇಳಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಈಡಿಗ ಸಮಾಜದ ಮುಖ್ಯಸ್ಥ ಎ. ಗಣೇಶ, ಟಿ. ವಿಜಯಭಾಸ್ಕರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ವೈ.ಎಚ್. ವಿಜಯಕರ, ಗುರುಲಿಂಗಪ್ಪಗೌಡ ಬಿರಾದಾರ, ಸಿ.ಜಿ. ವಿಜಯಕರ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಪ್ರಭುರಾಜ ಕಲಬುರ್ಗಿ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ, ರಾಜೇಂದ್ರ ರಾಯಗೊಂಡ, ಪರಶುರಾಮ ಹಡಲಗೇರಿ, ಸಿಕಂದರ ಜಾನ್ವೇಕರ್, ಬಜಂತ್ರಿ ಸಮಾಜದ ತಾಲೂಕಾಧ್ಯಕ್ಷ ನಾಗೇಶ ಬಜಂತ್ರಿ, ಗೋವಿಂದ ಬಜಂತ್ರಿ, ಹಣಮಂತ ಭಂಟನೂರ, ಸಿಂಗಪ್ಪ ಬಜಂತ್ರಿ, ಸಾಬಣ್ಣ ಬಜಂತ್ರಿ (ಮುದ್ದೇಬಿಹಾಳ), ಭೀಮಣ್ಣ ಬಜಂತ್ರಿ, ಹುಲಗಪ್ಪ ಬಜಂತ್ರಿ, ಸಾಬಣ್ಣ ನಾಗಬೇನಾಳ, ಹನಮಂತ ರಕ್ಕಸಗಿ, ಯಂಕಪ್ಪ ಬಜಂತ್ರಿ ಸೇರಿದಂತೆ ರುಡಗಿ ಹಾಗೂ ಚವನಭಾವಿ ಗ್ರಾಮದ ಈಡಿಗ ಸಮಾಜದ ಮುಖಂಡರು ಮತ್ತು ಸಮಾಜದ ಬಾಂಧವರು ಉಪಸ್ಥಿತರಿದ್ದರು.