LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ನಾಲತವಾಡ ಆಸ್ಪತ್ರೆ ಪ್ರಕರಣ: ನನ್ನ ವಿರುದ್ಧ ಷಡ್ಯಂತ್ರ ಎಂದು ಆರೋಪಿಸಿ ವೀರೇಶ ಆಲಕೊಪ್ಪರ ಮಾತ್ರೆ ಸೇವನೆ

ನಾಲತವಾಡ: ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕುಸುಮಾ ಹುಡೇದ ಅವರು ಮಾತ್ರೆ ಸೇವಿಸಿದ ಘಟನೆಗೆ ತಮ್ಮನ್ನು ಹೊಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವಕ ವೀರೇಶ ಆಲಕೊಪ್ಪರ ಬುಧವಾರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕಳೆದ ಕೆಲವು ದಿನಗಳಿಂದ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವಿಚಾರವಾಗಿ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ನಡುವೆಯೇ ಈ ಘಟನೆ ನಡೆದಿದೆ. ಈ ವೇಳೆ ವೀರೇಶ ಆಲಕೊಪ್ಪರ ಮಾತನಾಡಿ, ಕುಸುಮಾ ಹುಡೇದ ಅವರು ಮಾತ್ರೆ ಸೇವಿಸಿದ ಘಟನೆಗೆ ನನ್ನನ್ನು ಕಾರಣವೆಂದು ಬಿಂಬಿಸಲಾಗುತ್ತಿದೆ. ಆದರೆ ಈ ಘಟನೆಗೆ ನನ್ನ ಯಾವುದೇ ಪಾತ್ರವಿಲ್ಲ. ನನ್ನ ಹೋರಾಟವನ್ನು ಹತ್ತಿಕ್ಕಲು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

news_1782919833_0_847.webp

ನಾನು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಕಾನೂನುಬದ್ಧವಾಗಿ ಹೋರಾಟ ನಡೆಸುತ್ತಿದ್ದೇನೆ. ನನ್ನ ಹೋರಾಟದ ಹಿಂದೆ ಯಾವುದೇ ದುರುದ್ದೇಶವಿಲ್ಲ. ಆದರೆ ಹೋರಾಟವನ್ನು ನಿಲ್ಲಿಸಲು ನನ್ನ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ. ನನ್ನ ಸಾವಿಗೆ 61 ಜನರು ಕಾರಣರಾಗುತ್ತಾರೆ. ನನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದ್ದೇನೆ ಎಂದು ಹೇಳಿದರು.

  ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಹೆಸರನ್ನು ನಾನು ಎಲ್ಲಿಯೂ ದುರ್ಬಳಕೆ ಮಾಡಿಕೊಂಡಿಲ್ಲ. ಅವರ ಹೆಸರನ್ನು ಹೇಳಿಕೊಂಡು ಯಾರಿಗೂ ಬೆದರಿಕೆ ಹಾಕಿಲ್ಲ. ನಾನು ಪರಿಶಿಷ್ಟ ಜಾತಿಗೆ ಸೇರಿದ ಯುವಕ ಎಂಬ ಕಾರಣಕ್ಕೆ ನನ್ನ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನನ್ನ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಅಸ್ವಸ್ಥಗೊಂಡ ವೀರೇಶ ಅವರಿಗೆ ಸ್ಥಳೀಯ ವೈದ್ಯರಾದ ಡಾ. ನಾಯಕ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 *ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ರೆಡ್ಡಿಯವರಿಗೆ ಗೌರವ, ಸನ್ಮಾನ,,* 15 ವರ್ಷಗಳ ಬಳಿಕ ಮಾರಿಹಾಳದಲ್ಲಿ ಮಹಾಲಕ್ಷ್ಮಿ ಜಾತ್ರೆ: ಜಾತ್ರೆಯ ಸಿದ್ಧತೆ, ಭಕ್ತರ ಅನುಕೂಲಕ್ಕೆ ಅಗತ್ಯ ವ್ಯವಸ್ಥೆ ಕುರಿತು ಲಕ್ಷ್ಮೀ ಹೆಬ್ಬಾಳಕರ್ ಸಭೆನಾಳೆ ಶ್ರೀ ದ್ಯಾಮವ್ವ, ದುರಗಮ್ಮ ದೇವಿಯರ ಅದ್ದೂರಿ ಮೇರವಣಿಗೆ: ರಾಜು ಖಾನಪ್ಪನವರಮಾಧ್ಯಮ ಮಿತ್ರರು ಕ್ರೀಡೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಕೊಪ್ಪಳ ತಾ.ಪಂ. ಇಒ ಎತ್ತಂಗಡಿಗೆ ಆಗ್ರಹಿಸಿ ಆ. 31ಕ್ಕೆ ಬೃಹತ್ ಪ್ರತಿಭಟನೆಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳಸಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ 13,53,946 ಮತದಾರರ ಕರಡು ಪಟ್ಟಿ ಪ್ರಕಟ30ರಂದು  ಶ್ರೀ ಬಾಳುಮಾಮಾ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿತ್ಯ ನೇಮ ಉಪಾಷಣೆಯಿಂದ ನೆಮ್ಮದಿ ಜೀವನ.....ಪ್ರಭುಜಿ   ಮಹಾರಾಜ.ಮಳೆ ದೇವರು ಕೊಡುತ್ತಾನೆ, ಅದರ ಹಂಚಿಕೆ ಸರ್ಕಾರ ಮಾಡಬೇಕು  : ಮಹಾಂತೇಶ ದೊಡ್ಡಗೌಡರ