LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು: ಅಧ್ಯಕ್ಷ ಪರಪ್ಪ ಸವದಿ

ಕೃಷ್ಣಾ  ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು

ಅಥಣಿ :  ಸಕ್ಕರೆ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದ್ದರೂ   ರೈತರ ಕಬ್ಬಿಗೆ  ಪಾರದರ್ಶಕ ತೂಕ ಮತ್ತು ಸಕಾಲಕ್ಕೆ  ಬಿಲ್ಲನ್ನು ನೀಡುತ್ತಾ ಬಂದಿದ್ದೇವೆ.
 ಖಾಸಗಿ ಸಕ್ಕರೆ ಕಾರ್ಖಾನೆಗಳ ಪೈಪೋಟಿಯ ನಡುವೆ  ಸಹಕಾರಿ ತತ್ವದ ಈ  ಕಾರ್ಖಾನೆಯ ಅಳಿವು ಉಳಿವು ತಾಲೂಕಿನ ರೈತರ ಕೈಯಲ್ಲಿದೆ. ಕಬ್ಬು ಬೆಳೆಗಾರರು  ತಮ್ಮ ಕಬ್ಬನ್ನು  ಬೇರೆ ಖಾಸಗಿ ಕಾರ್ಖಾನೆಗಳಿಗೆ ಕಳಿಸದೇ ಕೃಷ್ಣಾ  ಸಹಕಾರಿ ಸಕ್ಕರೆ ಕಾರ್ಖಾನೆಗೆ ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ  ರೈತರಲ್ಲಿ ಕಳಕಳಿಯ ಮನವಿ ಮಾಡಿದರು. 
  ಅವರು ಸೋಮವಾರ  ಕೃಷ್ಣಾ  ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖಾಸಗಿ ಸಕ್ಕರೆ ಕಾರ್ಖಾನೆಗಳು ತೀವ್ರ ಪೈಪೋಟಿಯ ನಡುವೆ ಕಬ್ಬು ಬೆಳೆಗಾರರಿಗೆ  ತೂಕದಲ್ಲಿ ಮೋಸ ಮಾಡುತ್ತಿವೆ. ನಾವು ಪಾರದರ್ಶಕವಾದ ತೂಕವನ್ನು ನೀಡುತ್ತಿದ್ದು, ಕೊಬ್ಬು ಕಳುಹಿಸಿದ 15 ದಿನಗಳಲ್ಲಿ ಎಫ್ ಆರ್ ಪಿ ದರದಂತೆ ರೈತರ ಖಾತೆಗಳಿಗೆ ಬಿಲ್ಲನ್ನು ಜಮಾ ಮಾಡಿದ್ದೇವೆ. ಪಾರದರ್ಶಕ ಮತ್ತು ಪ್ರಾಮಾಣಿಕ ಸೇವೆ ನೀಡುತ್ತಿದ್ದರು ಕೂಡ ತಾಲೂಕಿನ ರೈತರು  ಬೇರೆ ತಾಲೂಕಿನ ಕಾರ್ಖಾನೆಗಳಿಗೆ  ಕಬ್ಬು ಪೂರೈಸುತ್ತಿರುವುದು ಬೇಸರದ ಸಂಗತಿಯಾಗಿದೆ. ನಮ್ಮ ತಾಲೂಕಿನ ರೈತರು ಹೀಗೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ, ದಯಮಾಡಿ ಅರ್ಥಮಾಡಿಕೊಂಡು  ಖಾಸಗಿ ಕಾರ್ಖಾನೆಗಳು  ತೋರಿಸುವ ಆಮಿಷಗಳಿಗೆ ಒಳಗಾಗದೆ  ಸಹಕಾರಿ ತತ್ವದ ಮೇಲೆ ನಡೆಯುತ್ತಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಒಳ್ಳೆಯ ಇಳುವರಿ ಬರುವ ಕಬ್ಬನ್ನ ಪೂರೈಸಬೇಕು. ಏಕೆಂದರೆ ಇದು  ರೈತರು ಕಟ್ಟಿ ಬೆಳೆಸಿದ ಕಾರ್ಖಾನೆಯಾಗಿದೆ. ರೈತರ ಮತ್ತು ಕಬ್ಬು ಬೆಳೆಗಾರ ಹಿತಾಸಕ್ತಿ ಕಾಪಾಡುವುದೇ ಆಡಳಿತ ಮಂಡಳಿಯ ಮುಖ್ಯ ಧ್ಯೇಯವಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಹಂಗಾಮಿನಲ್ಲಿ 5.33 ಲಕ್ಷ ಟನ್ ಕಬ್ಬು ಅರೆದರೂ ಕಾರ್ಖಾನೆಗೆ ನಿರೀಕ್ಷೆ ಪ್ರಮಾಣದಲ್ಲಿ ಆದಾಯ ಬರದೆ ನಷ್ಟವನ್ನು ಅನುಭವಿಸುತ್ತಿದೆ. ಮುಂಬರುವ ಹಂಗಾಮಿನಲ್ಲಿ ಕನಿಷ್ಠ 6.33 ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಿದ್ದೇವೆ. ಈ ಗುರಿ ಸಾಧನೆಗೆ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಳಿಸಬೇಕು. ಒಂದು ಈ ಗುರಿ ಮುಟ್ಟದಿದ್ದರೆ ಕಾರ್ಖಾನೆ ಇನ್ನಷ್ಟು ನಷ್ಟವನ್ನು ಅನುಭವಿಸಲಿದೆ, ಈ ಕಾರ್ಖಾನೆಯ  ಅಳಿವು ಉಳಿವು  ತಾಲೂಕಿನ ರೈತರ ಕೈಯಲ್ಲಿದೆ, ದಯಮಾಡಿ  ತಾಲೂಕಿನ ರೈತರು ತಮ್ಮದೇ ಆದ ಈ  ಕಾರ್ಖಾನೆಗೆ ಕಬ್ಬನ್ನು ಕಳುಹಿಸಬೇಕು ಎಂದು ರೈತರಿಗೆ ಕೈಮಿಗಿದು ಕಳಕಳಿಯಿಂದ ವಿನಂತಿಸಿಕೊಂಡರು.
# ದಿವ್ಯ ಸಾನಿಧ್ಯ ವಹಿಸಿದ್ದ  ಕವಲಗುಡ್ಡ  ಹಣಮಾಪುರ ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು ಮಾತನಾಡಿ  ಈ ಬಾರಿಯೂ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ.
 ಇದು ರೈತರು ಕಟ್ಟಿ ಬೆಳೆಸಿದ ಕಾರ್ಖಾನೆಯಾಗಿದೆ, ಆದರೆ ರೈತರು ಈ ಕಾರ್ಖಾನೆಗೆ ಹೆಚ್ಚಿನ ಕಬ್ಬನ್ನು ಯಾಕೆ ಪೂರೈಸುತ್ತಿಲ್ಲ, ಎಂಬುದನ್ನು ಆಡಳಿತ ಮಂಡಳಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾವು ಕೇವಲ ಸತ್ಯ ಹರಿಶ್ಚಂದ್ರ ಕಥೆ ಹೇಳಿದರೆ ಸಾಲದು, ಚುನಾವಣೆ ಗೆಲ್ಲುವಾಗ ಯಾವ ರೀತಿ ಹಗಲಿರುಳು ಶ್ರಮಿಸುತ್ತಿರೀ.. ಅದೇ ರೀತಿ ಆಡಳಿತ ಮಂಡಳಿ ಸದಸ್ಯರು ಕಬ್ಬು ಬೆಳೆಗಾರರ ಮನೆ  ಮನೆಗೆ ಹೋಗಿ  ಮನವಿ ಮಾಡಿ ಕಬ್ಬನ್ನು ತರಬೇಕು. ಪ್ರಚಲಿತ ದಿನಗಳಲ್ಲಿ ರೈತರಿಗೆ ಏನು ಅವಶ್ಯಕತೆ ಇದೆ, ರೈತರು ಬೆಳೆದ ಕಬ್ಬು ಯಾವ ಸ್ಥಿತಿಯಲ್ಲಿದೆ ಹೋಗಿ ನೋಡಿಕೊಂಡು ಬರಬೇಕು. ರೈತರ  ಅಪೇಕ್ಷೆ ಏನಿದೆ ಕೇಳಿ ತಿಳಿದುಕೊಂಡು ಅವರ ಮನವೊಲಿಸಬೇಕು. ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ  ಕಬ್ಬನ ಪೂರೈಸಿದಾಗ  ಈ ಸಹಕಾರಿ ಕ್ಷೇತ್ರದ ಕಾರ್ಖಾನೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರೂ ಕೂಡ  ಇದು ನಮ್ಮ ಕಾರ್ಖಾನೆ ಎಂಬ ಭಾವನೆಯಿಂದ ಕಬ್ಬನ್ನು ಕಳಿಸಿ ಕಾರ್ಖಾನೆಗೆ ಪ್ರಗತಿಗೆ ಕೈಜೋಡಿಸಬೇಕು ಸಲಹೆ ನೀಡಿದರು. 
 ಅಥಣಿಯ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಹಲ್ಯಾಳ ವಿರಕ್ತ ಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ರೈತ ಮುಖಂಡ  ರಾಜೀವ ನಾಡಗೌಡ ಮಾತನಾಡಿದರು. 
ಈ ಸಂದರ್ಭದಲ್ಲಿ  ಕಾರ್ಖಾನೆಯ ಉಪಾಧ್ಯಕ್ಷ ಎಸ್. ಎ.ವಾಗಮೋಡೆ, ನಿರ್ದೇಶಕರಾದ ಜಿ.ಎಂ.ತೇವರಮನಿ, ಎಸ್.ಡಿ.ನಂದೇಶ್ವರ, ಜಿ.ಎಂ.ಜತ್ತಿ, ಎಸ್.ಜೆ.ಪಾಟಿಲ, ಡಿ.ಎಸ್.ಕುಲಕರ್ಣಿ, ಎಸ್.ಎಸ್.ನಾಯಿಕ, ಎಂ.ಎಂ.ಗೊಟಕಿಂಡಿ, ಎಸ್.ಎಚ್.ನಾಯಿಕ ಆರ್.ಎ .ಪಟ್ಟಣ, ಎಚ್. ಐ .ಜಗದೇವ, ಪಿ.ಸಿ.ಪಾಟೀಲ, ವಿ.ಎಂ.ಪಾಟಿಲ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು. 
ಗೂಳಪ್ಪ ಜತ್ತಿ ಸ್ವಾಗತಿಸಿದರು, ಸುರೇಶ ಠಕ್ಕಣ್ಣವರ ನಿರೂಪಿಸಿದರು.  ಎಸ್ ಬಿ ಗೋಟಖಿoಡಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾದೌಡ ಕಾರ್ಯಕ್ರಮ ಪೂರ್ವಭಾವಿ ಸಭೆ ಶಿಕ್ಷಣದ ಜೊತೆ ಸಂಸ್ಕಾರಮುಖ್ಯ - ವೇ|| ರಾಚಯ್ಯ ಶಾಸ್ತ್ರಿಡಿಜಿಟಲ್‌ ಬೋಧನೆಯಿಂದ ಗುರು-ಶಿಷ್ಯರ ನಡುವೆ ಭೌತಿಕ ಅಂತರ ಕಡಿಮೆರಾಜ್ಯ ಸರ್ಕಾರದ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದಿಂದ ವಿನೂತನ ಭಿಕ್ಷಾಟನೆ ಚಳವಳಿ ೧೫೦ ಹಾಸಿಗೆಗಳ ನೂತನ ಆಸ್ಪತ್ರೆ ಮಂಜೂರು - ಮಾಜಿ ಶಾಸಕ ಆನಂದ ನ್ಯಾಮಗೌಡಮೌಲ್ಯಗಳ ಅರಿವು ಮೂಡಿಸಲು ಸ್ಪರ್ಧೆರಾಜ್ಯ ಸರ್ಕಾರದ ಪ್ರತಿ ಕೆಲಸದಲ್ಲಿ ಕೇಂದ್ರದ ಅನುಧಾನ ಇದೆ :ಸಂಸದ ವಿಶ್ವೇಶ್ವರ ಕಾಗೇರಿ ಪಾರಂಪರಿಕ ನಿಯಮಗಳ ಪಾಲನೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ: ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ: ಆನ್‌ಲೈನ್ ವಹಿವಾಟಿಗೆ ತಾಂತ್ರಿಕ ಪ್ರೋತ್ಸಾಹಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕ್ರಮ