Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಯವ್ವ ನಟಿ ಗೀತಪ್ರಿಯ ಈಗ ಅಪರಿಚಿತೆ  ಶ್ರೀನಾಥ್ ಮಗ ರೋಹಿತ್ ಒಟ್ಟಿಗೆ ನಟನೆ 








     ಈ ಮೊದಲು 'ತಾಯವ್ವ' ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಹೆಸರು 'ಅಪರಿಚಿತೆ'.

     ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ  'ಅಪರಿಚಿತ' ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ "ಸಿನಿಮಾ ಪವರ್ ಫುಲ್ ಮೀಡಿಯಾ. ಸಾಮಾಜಿಕ ಸಂದೇಶ ಇರುವ ಇಂತ ಸಿನಿಮಾ ಹೆಚ್ಚಾಗಿ ಬರಬೇಕು. ಆಗ ಜನ ಹಾಗೂ ಇಂಡಸ್ಟ್ರಿ ಚೆನ್ನಾಗಿ ಇರುತ್ತದೆ" ಎಂದು ಶುಭ ಹಾರೈಸಿದರು.

     ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಗೀತಪ್ರಿಯ "ನನಗೆ ಸಾಮಾಜಿಕ ಸಂದೇಶ  ಇರುವಂತಹ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ಇದೂ ಕೂಡಾ ಅದೇ ರೀತಿಯ ಸಿನಿಮಾ. ಹಾಗಾಗಿ ನಾನು ನಟನೆ ಮಾಡುತ್ತಿದ್ದೇನೆ.  ಕರ್ನಾಟಕದಲ್ಲಿಯೇ ಚಿತ್ರೀಕರಣ ನಡೆಯಲಿದೆ. 'ಅಪರಿಚಿತ'  ನೈಜ ಘಟನೆ ಆಧಾರಿತ ಚಿತ್ರವಾಗಿದ್ದು,  ನಾನು ಶಿಕ್ಷಕಿ ಪಾತ್ರ ಮಾಡುತ್ತಿದ್ದೇನೆ" ಎಂದು ಹೇಳಿದರು.

     ಈ ಚಿತ್ರವನ್ನು ವಿಶ್ವನಾಥ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈಗಾಗಲೇ 'ಹನುಮಂತಪ್ಪನ ಎರಡು ಎಕರೆ ಜಾಗ' ಸಿನಿಮಾ ನಿರ್ದೇಶನ ಮಾಡಿದ್ದು ಬಿಡುಗಡೆಗೆ ಸಿದ್ದವಿದೆ. ಅವರು  ಮಾತನಾಡಿ "ಇದು ನೈಜ ಕಥೆ ಆಧಾರಿತ ಸಿನಿಮಾ. ಸಿಂಧೂ ಲೋಕನಾಥ್, ಆರ್.ಜೆ. ನಿಖಿತಾ, ಹಿರಿಯ ನಟ ಶ್ರೀನಾಥ್ ಹಾಗೂ ಶ್ರೀನಾಥ್ ಅವರ ಮಗ ರೋಹಿತ ಕೂಡ ಪ್ರಮುಖ ಪಾತ್ರದಲ್ಲಿ  ನಟಿಸುತ್ತಿದ್ದಾರೆ. ಇದ್ದು ಥ್ರಿಲ್ಲರ್ ಚಿತ್ರ ಆಗಿರುತ್ತದೆ. ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ" ಎಂದರು.

     "ನನ್ನ ಹೆಂಡತಿ ಸೋಶಿಯಲ್ ಮೆಸೇಜ್ ಇರುವಂತ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ಇದೆ. ಅವರ ಮೊದಲ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು. ಹಾಗಾಗಿ ನಾವೇ ಈ ಚಿತ್ರವನ್ನು ಅಮರ ಫಿಲಂಸ್ ಬ್ಯಾನರ್ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ' ಎಂದರು ನಟಿ ಗೀತಪ್ರಿಯ ಅವರ ಪತಿ ಸುರೇಶ್ ಕುಮಾರ್.

     ಹಿರಿಯ ನಟ ಶ್ರೀನಾಥ್ "ಕೊರೋನಾ ನಂತರ ನಾನು ನಟಿಸುತ್ತಿರುವ ಮೊದಲ ಸಿನಿಮಾ ಇದು. ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಲು ಈ ಸಿನಿಮಾ ಮಾಡುತ್ತಿರುವುದು ಖುಷಿ ಆಯ್ತು. ಅದರಲ್ಲೂ ಮುಖ್ಯವಾಗಿ 40 ವರ್ಷದ ನಂತರ ನಾನು , ನನ್ನ ಮಗ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ಹೆಚ್ಚಿನ ಖುಷಿ ಆಗುತ್ತಿದೆ" ಎಂದರು.

      ಶ್ರೀನಾಥ್ ಅವರ ಮಗ ರೋಹಿತ್ "ನಾನು 35 ವರ್ಷ ಆದಮೇಲೆ ಸಿನಿಮಾದಲ್ಲಿ ನಟನೆ ಮಾಡ್ತಾ ಇದ್ದೇನೆ. ಅದರಲ್ಲೂ ಅಪ್ಪನ ಜೊತೆ ನಟಿಸೋದು ಖುಷಿ ಇದೆ. ಪಾತ್ರ ಕೂಡ ತುಂಬಾ ಚೆನ್ನಾಗಿದೆ" ಎಂದು ಹೇಳಿದರು.  ಮತ್ತೋರ್ವ ನಟಿ ಆರ್.ಜೆ. ನಿಖಿತಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ