Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಗಾರು ಬೆಳೆ ಸಮೀಕ್ಷೆ: ಖಾಸಗಿ ನಿವಾಸಿಗಳಿಗೆ ತರಬೇತಿ


ಹುನಗುಂದ; ಬೆಳೆ ಸಮೀಕ್ಷೆಯ ಮಹತ್ವ, ರೈತರ ಜಮೀನುಗಳ ನಿಖರ ಮಾಹಿತಿ ಸಂಗ್ರಹಣೆ, ಬೆಳೆ ವಿವರಗಳ ದಾಖಲಾತಿ, ಮೊಬೈಲ್ ಆಪ್ ಬಳಕೆ, ಜಿಪಿಎಸ್ ಆಧಾರಿತ ಸ್ಥಳ ಗುರುತಿಸುವಿಕೆ, ಭೂ ದಾಖಲೆಗಳಿಗೆ ಅನುಗುಣವಾಗಿ ಬೆಳೆ ಮಾಹಿತಿಯನ್ನು ದಾಖಲಿಸುವ ವಿಧಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಖಾಸಗಿ ನಿವಾಸಿಗಳು ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕೆಂದು ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.                                              ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದರು.
ಇಲ್ಲಿನ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಸೋಮವಾರ ಕೃಷಿ ಇಲಾಖೆ ನಡೆಸಿದ ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕೃಷಿ ಇಲಾಖೆಯ ವತಿಯಿಂದ ಖಾಸಗಿ ನಿವಾಸಿಗಳಿಗೆ ಮತ್ತು ಮೇಲ್ವಿಚಾರಕರಿಗೆ ನೀಡುವ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ರೈತರಿಗೆ ಸರ್ಕಾರದ ಬೆಳೆ ವಿಮೆ, ಬೆಳೆ ಪರಿಹಾರ, ವಿವಿಧ ಕೃಷಿ ಯೋಜನೆಗಳ ಅನುಷ್ಠಾನ ಹಾಗೂ ಅಂಕಿಅಂಶಗಳ ಸಿದ್ಧತೆಗೆ ಬೆಳೆ ಸಮೀಕ್ಷೆಯ ಮಾಹಿತಿ ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ತಪ್ಪು ಮಾಹಿತಿಗೆ ಅವಕಾಶ ನೀಡದೇ ನಿಖರವಾಗಿ ಸಮೀಕ್ಷೆ ನಡೆಸಬೇಕೆಂದು ಅವರು ತಿಳಿಸಿದರು. ವಂತೆ ತರಬೇತಿ ಪಡೆದ ಸಿಬ್ಬಂದಿಗೆ ಸೂಚಿಸಲಾಯಿತು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶ್ರೀಮತಿ ಗೌರಮ್ಮ ಸುಂಕದ ಮಾತನಾಡಿ ಸಮೀಕ್ಷೆ ವೇಳೆ ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ಬಿತ್ತಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಸ್ಥಳದಲ್ಲಿಯೇ ಪರಿಶೀಲಿಸಿ ದಾಖಲಿಸಬೇಕು. ಯಾವುದೇ ಅನುಮಾನಗಳು ಕಂಡುಬಂದಲ್ಲಿ ಸಂಬಂಧಿಸಿದ ಕೃಷಿ ಅಧಿಕಾರಿಗಳ ಮಾರ್ಗದರ್ಶನ  ಮತ್ತು ಮಾಹಿತಿ ಪಡೆದು ಅಂತಿಮಗೊಳಿಸುವಂತೆ ತಿಳಿಸಿದರು.  ಈ ವೇಳೆ ಕೃಷಿ ಇಲಾಖೆ ಅಧಿಕಾರಿ ಬಸವರಾಜ ಟಕ್ಕಳಗಿ ಮಾಹಿತಿ ನೀಡುತ್ತ ಬೆಳೆ ಸಮೀಕ್ಷೆಯು ಸರ್ಕಾರದ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಮೂಲಾಧಾರವಾಗಿದೆ. ತರಬೇತಿ ಪಡೆದ ಸಿಬ್ಬಂದಿ ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ರೈತರಿಗೆ ನಿಖರವಾದ ಸೌಲಭ್ಯಗಳು ದೊರೆಯಲಿವೆ. ರೈತರ ಕಿರಿಕಿರಿ ಜಮೀನು ದೂರವಿದೆ ಯಾವುದ ಅನ್ಯ ನೆಪ ಹೇಳದೆ ಬೆಳೆ ಸಮೀಕ್ಷೆ ಕಾರ್‍ಯ ನಡೆಸಬೇಕು. ಸಮೀಕ್ಷೆ ನಡೆಸುವಾಗ ಮಾಜಹಿತಿ ತಿಳಿಯದಿದ್ದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಸಂಪರ್ಕಿಸಿ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ಅವರು ಖಾಸಗಿ ನಿವಾಸಿಗಳಿಗೆ ಸೂಚಿಸಿದರು. ತರಬೇತಿ ಪಡೆದ ಖಾಸಗಿ ನಿವಾಸಿಗಳು ತಮ್ಮ ವೇತನದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ತೀವ್ರಗತಿಯಲ್ಲಿ ವೇತನ ನೀಡುವಂತೆ ಮನವಿ ಮಾಡಿದರು.
ಸಹಾಯಕ ಸಾಂಖ್ಯಿಕ ಅಧಿಕಾರಿಮಹಿಬೂಬ ಇನಾಮದಾರ, ಕಂದಾಯ ಇಲಾಖೆಯ ನಿರೀಕ್ಷಕ ಡಿ.ಎಸ್. ಯತ್ನಟ್ಟಿ ಇದ್ದರು. ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಯಿಂದ ಬೆಳೆ ಸಮೀಕ್ಷೆಗೆ ಆಯ್ಕೆಯಾದ ಖಾಸಗಿ ನಿವಾಸಿಗಳು ಭಾಗವಹಿಸಿ, ಸಮೀಕ್ಷೆ ಕಾರ್ಯದ ಕುರಿತು ತಮ್ಮ ಸಂದೇಹಗಳಿಗೆ ಸ್ಪಷ್ಟನೆ ಪಡೆದುಕೊಂಡರು. 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST