ರಾಯಬಾಗ,ಜು.೧೩: ತಾಲೂಕಿನ ಹಿಡಕಲ ಗ್ರಾಮದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಬಾಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಾಯಬಾಗ ಇವರ ಸಂಯುಕ್ತ ಆಶ್ರಯದಲ್ಲಿ ಗಾನ ಕೋಗಿಲೆ ಸುಮಧುರ ಹಾಡುಗಳ ಮೂಲಕ ದೇಶದ ಜನರ ಮನ ಗೆದ್ದ ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜಾನಕಿ ಅಮ್ಮನವರಿಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಟಿ.ಎಸ್. ವಂಟಗೂಡಿ, ಕಲ್ಮೇಶ ಸತ್ತಿ, ಯಮನವ್ವ ಪೂಜೇರಿ, ಗೌರವ್ವ ವಂಟಗೂಡಿ ಮೀನಾಕ್ಷಿ ವಂಟಗೂಡಿ, ಹಾಲಸಿದ್ಧ ವಂಟಗೂಡಿ ಇತರರು ಇದ್ದರು.
