Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾರರಿಗೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿಗೆ ಜಿ.ಪಂ ಸಿಇಒ ಚಾಲನೆ

ವಿಜಯನಗರ (ಹೊಸಪೇಟೆ).13: ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ – 2026 ರ ಕುರಿತು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೋಮವಾರ ಜಿಲ್ಲಾ ಪಂಚಾಯತ್ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ ಹಸಿರು ನಿಶಾನೆ ತೊರುವ ಮೂಲಕ ಚಾಲನೆ ನೀಡಿದರು.
ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾ ಪ್ರಭುತ್ವ ವ್ಯವಸ್ದೆಯನ್ನು ಬಲಿಷ್ಠ ಮಾಡುವ ನಿಟ್ಟಿನ್ಲಲಿ, ಸಂವಿಧಾನ ಬದ್ದ ಮೂಲಭೂತ ಹಕ್ಕಾದ ಮತದಾನದ ಹಕ್ಕು ಕೇವಲ ಅರ್ಹರಿಗೆ ದೊರಕಿಸುವ ಉದ್ದೇಶದಿಂದ ಮತದಾರರ ಪಟ್ಟಿಯನ್ನು ಪರೀಷ್ಕರಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಯೊಬ್ಬ ನಾಗರಿಕರಿಗೂ ಯಾವುದೇ ತಾರತಮ್ಯವಿಲ್ಲದೆ ಮತದಾನ ಮಾಡುವ ಹಕ್ಕು ಸಿಗಬೇಕು ಎಂಬ ದೂರದೃಷ್ಟಿಯ ಉದ್ದೇಶದಿಂದ ಭಾರತೀಯ ಚುನಾವಣೆ ಆಯೋಗ ಭಾರತ ಸರ್ಕಾರ ವತಿಯಿಂದ ರಾಜ್ಯದಲ್ಲಿ ಕರ್ನಾಟಕ ವ್ಯವಸ್ದಿತ ಮತದಾರರ ಪಟ್ಟಿ ಪರಿಷ್ಕರಣೆ–2026 ಪ್ರಕ್ರಿಯೆಯನ್ನು ಜೂನ್ 29 ರಿಂದ ಜುಲೈ 30 ರವರಿಗೆ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈಗಾಗಲೇ ಮತಗಟ್ಟೆಯ ಅಧಿಕಾರಿಗಳು 2002 ರ ಮತದಾರರ ಪಟ್ಟಿಯ ಮತದಾರರೊಂದಿಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಅದರಂತೆ ಮತದಾರರ ಪಟ್ಟಿಯಲ್ಲಿ ಈ ಹಿಂದೆ ಇರುವ ಮತದಾರರ ತಮ್ಮ ವಿಳಾಸ, ಹಾಗೂ ಪ್ರಸ್ತತವಿರುವ ಎಲ್ಲಾ ಮಾಹಿತಿಯ ವಿವರಗಳು ಬದಲಾವಣೆಯಾಗಿದ್ದಲ್ಲಿ ಮತ್ತೊಮ್ಮೆ ಪುನರ್ ಪರೀಶಿಲಿಸಿ ಮತದಾರರ ಪಟ್ಟಿಯನ್ನು ದೃಢಪಡಿಸಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಯ ಅಧಿಕಾರಿಗಳು ಗಣತಿ ನಮೂನೆಯನ್ನು ಭರ್ತಿ ಮಾಡಲು ಈಗಾಗಲೇ ಪ್ರತಿ ಮನೆ ಮನೆಗೂ ತೆರಳಿ ಅರ್ಹ ಮತದಾರರಿಗೆ ಗಣತಿ ನಮೂನೆಯನ್ನು ವಿತರಿಸಿರುತ್ತಾರೆ. ಬಿಎಲ್‌ಓಗಳು ವಿತರಿಸಲಾದ ಗಣತಿ ನಮೂನೆಯಲ್ಲಿ ಈ ಹಿಂದೆ ಇರುವ ಮಾಹಿತಿ ಹಾಗೂ ಪ್ರಸ್ತುತ ಇರುವ ಮಾಹಿತಿಯ ಎಲ್ಲಾ ವಿವರಗಳನ್ನು ಭರ್ತಿಮಾಡಿ, ಮತಗಟ್ಟೆಯ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ-2026ರ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಕ್ರೀಯಾಶೀಲರಾಗಿ ಭಾಗವಹಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ, ಮತದಾನದಿಂದ ಯಾವುದೇ ಅರ್ಹ ಮತದಾರರು ಹೊರಗುಳಿಯಬಾರದೆಂದು ಭಾರತೀಯ ಚುನಾವಣಾ ಆಯೋಗ ಜೂನ್ 29 ರಿಂದ ಜುಲೈ 30 ರವರೆಗೆ ಆಯೋಜಿಸಿರುತ್ತದೆ. ಸದರಿ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿ ಕುಟುಂಬದ ಅರ್ಹ ಸದಸ್ಯರು ಭಾಗವಹಿಸಿ ಮತಗಟ್ಟೆಯ ಅಧಿಕಾರಿಗಳು ತಮ್ಮ ಮನೆಗಳಿಗೆ ಬಂದಾಗ ತಪ್ಪದೆ ಎಲ್ಲಾ ಸಂಬAಧಿಸಿದ ದಾಖಲಾತಿ ನೀಡಿ ಸಹಕರಿಸಲು ತಿಳಿಸಿದರು.
ಬೃಹತ್ ಬೈಕ್ ರ‍್ಯಾಲಿ : ಬೈಕ್ ರ‍್ಯಾಲಿಯು ಜಿಲ್ಲಾ ಪಂಚಾಯತ್ ಆವರಣದಿಂದ ಆರಂಭಗೊAಡು ಡ್ಯಾಮ್ ರೋಡ್ ಮೂಲಕ ನಗರದ ಸಾಯಿಬಾಬಾ ವೃತ್ತ, ಬಸವೇಶ್ವರ ವೃತ್ತ, ವಿಜಯನಗರ ಕಾಲೇಜು, ಪುನೀತ್ ರಾಜಕುಮಾರ್ ವೃತ್ತ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಾಲ್ಮೀಕಿ ಸರ್ಕಲ್ ಮೂಲಕ ದೀಪಾಯನ ಶಾಲೆಯವರೆಗೆ ವಿವಿಧ ಘೋಷಣೆಗಳೊಂದಿಗೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತಿ ಸಹಾಯಕ ಯೋಜನೆ ಅಧಿಕಾರಿ ಎಂ.ಉಮೇಶ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಲಂಬಾಷ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST