Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವ ಜನಸಂಖ್ಯಾ-ಡೆಂಗೀ ಮಾಸಾಚರಣೆ ಕಾರ್ಯಕ್ರಮ

ತಾಳಿಕೋಟೆ,   ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ರಾಷ್ಟ್ರೀಯ ಡೇಂಗೀ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 
      ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅನಸುಯಾ ತೇರದಾಳ ಮಾತನಾಡಿ ಜನಸಂಖ್ಯಾ ದಿನಾಚರಣೆ ಉದ್ದೇಶ ಹಾಗೂ ಘೋಷವಾಕ್ಯ ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಅಂತರ ಕಾಪಾಡುವುದರ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ದಿಸುವದೊಂದಿಗೆ ಅನಗತ್ಯ ಗರ್ಭದಾರಣೆ ತಡೆಗಟ್ಟಬಹುದು ಎಂಬುದರ ಕುರಿತು ಪ್ರತಿ ವರ್ಷ ಜುಲೈ ೧೧ ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಯನ್ನು ಆಚರಿಸಲಾಗುವುದು ಎಂದು ತಿಳಿಸಿದ ಅವರು      ಜನಸಂಖ್ಯೆ ಬೆಳವಣಿಗೆಯಿಂದ ಆಗುವ ದುಷ್ಪರಿಣಾಮ ಹಾಗೂ ಜನಸಂಖ್ಯೆ ದಿನಾಚರಣೆ ಉದ್ದೇಶಗಳ ಕುರಿತು ಹಾಗೂ  ಕುಟುಂಬ ಕಲ್ಯಾಣ ಯೋಜನೆಯ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳ ಬಳಕೆ ಬಗ್ಗೆ ತಿಳಿಸಿದರು. ಜನನಗಳ ನಡುವೆ ಅಂತರ ಬಾಲ್ಯ ವಿವಾಹ ಮದುವೆಯ ವಯಸ್ಸು ಹೆಣ್ಣಿಗೆ ೧೮ ವರ್ಷ, ಗಂಡಿಗೆ ೨೧ ವರ್ಷ ಆಗಿರಬೇಕೆಂದು ತಿಳಿಸಿದರು.
     ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಬಿ.ಎಸ್.ಶಿವಯೋಗಿಮಠ ಮಾತನಾಡಿ ಡೆಂಗೀ ನಿಯಂತ್ರಣ ನಮ್ಮೆಲ್ಲರ ಹೊಣೆ ಡೆಂಗೀ ಹರಡುವ ಬಗ್ಗೆ ಮುನ್ನೆಚ್ಚರಿಕೆ ವಹಿಸುವದರ ಬಗ್ಗೆ ತಿಳಿ ಹೇಳಿದರು.
     ಈ ಕಾರ್ಯಕ್ರಮದಲ್ಲಿ ಶ್ರೀಮತಿ ನೂರಜಾನ ಬೋರಗಿ, ಶ್ರೀಮತಿ ಬಿಸ್ಮಿಲ್ಲಾ ಬಿದಕೋಟಿ, ಶ್ರೀಮತಿ ಮಹಾದೇವಿ ಟಕ್ಕಳಕಿ, ಅಬ್ದುಲರಜಾಕ ಕೊಡೇಕಲ್, ಕಾಂಚನಾ ಪಾಟೀಲ, ಹಾಗೂ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಇಂದಿರಾಬಾಯಿ ಕದಂ, ವಿಜಯಲಕ್ಷ್ಮೀ ಲಾಹೋರಕರ, ವಿದ್ಯಾವತಿ ಬೂದಿಹಾಳ, ಜಯಶ್ರೀ ಹಿರೇಮಠ, ಪವಿತ್ರಾ ಹಜೇರಿ, ಪದ್ಮಾ ನಾಡಕರ್ಣಿ, ವಿಶಾಲತಾ ಕೊಡೇಕಲ್ಲ, ಸೌಂದರ್ಯ ನಾಡಕರ್ಣಿ,  ಜಯಬೂನಬಿ ಮಕಾಂದಾರ, ಮೊದಲಾದವರು ಉಪಸ್ಥಿತರಿದ್ದರು.
     ಶ್ರೀಮತಿ ಅನ್ನಪೂರ್ಣ ನಡುವಿನಮನಿ ಸ್ವಾಗತಿಸಿ ವಂದಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST