Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವಧರ್ಮ ಸಮನ್ವಯದ ಸಂಕೇತ: ಎಂಎಲ್ ಸಿ ಇದ್ರಿಸ್ ನಾಯಿಕವಾಡಿ ಅವರಿಗೆ ಅಥಣಿ ಗಚ್ಚಿನ ಮಠ ಹಾಗೂ ಬೆಳ್ಳಂಕಿ ಶ್ರೀಗಳಿಂದ ಸತ್ಕಾರ*


ಅಥಣಿ/ಮೀರಜ : ಪಕ್ಕದ ಗಡಿಭಾಗದ ಮಹಾರಾಷ್ಟ್ರದ ಮೀರಜನಲ್ಲಿ ರಾಜಕೀಯ ಎಂದರೆ ಕೇವಲ ಅಧಿಕಾರಕ್ಕಷ್ಟೇ ಸೀಮಿತವಾಗಿರದೆ ಸಮಾಜಸೇವೆ ಮತ್ತು ಭಾವೈಕ್ಯತೆ ಹಾಗೂ ಸೌಹಾರ್ದತೆಯ ವೇದಿಕೆಯಾಗಬೇಕು ಎಂಬುದಕ್ಕೆ ಮೀರಜ್‌ನಲ್ಲಿ ನಡೆದ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.

 ಇತ್ತೀಚೆಗೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮೀರಜ್ ತಾಲೂಕಿನ ವಿಧಾನ ಪರಿಷತ್ ಸದಸ್ಯರಾದ ಇದ್ರಿಸ್ ನಾಯಿಕವಾಡಿ ಹಾಗೂ ಅವರ ಪುತ್ರ, ಮಹಾನಗರ ಪಾಲಿಕೆ ನೂತನ ಸದಸ್ಯ ಅಥರ್ ನಾಯಕವಾಡಿ ಅವರ ನಿವಾಸಕ್ಕೆ ಅಥಣಿ ಗಚ್ಚಿನ ಮಠದ ಪ.ಪೂ. ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಬೆಳ್ಳಂಕಿಯ ಶಿವಾಚಾರ್ಯ ಸ್ವಾಮೀಜಿ ಅವರು ಭೇಟಿ ನೀಡಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಿ ಆಶೀರ್ವದಿಸಿದರು.

ಸತ್ಕಾರದ ವೇಳೆ ಮಾತನಾಡಿದ ಶ್ರೀ ಶಿವಬಸವ ಸ್ವಾಮೀಜಿಗಳು, "ಇದ್ರಿಸ್ ನಾಯಿಕವಾಡಿ ಕುಟುಂಬವು ಜಾತಿ-ಮತದ ಭೇದವಿಲ್ಲದೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಇವರ ಗುಣ ಶ್ಲಾಘನೀಯ. ಇವರ ಜನಸೇವೆಯು ಇನ್ನು ಎತ್ತರಕ್ಕೆ ಬೆಳೆಯಲಿ," ಎಂದು ಹಾರೈಸಿದರು.


ಸತ್ಕಾರ ಸ್ವೀಕರಿಸಿ ಮಾತನಾಡಿದ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ ಇದ್ರಿಸ್ ನಾಯಕವಾಡಿ ಅವರು ನಾನು ಸಮಾಜ ಸೇವೆಯ ಮೂಲಕ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ಪ್ರತಿಯೊಂದು ಸಮುದಾಯದ ಜನರು ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಯಾವುದೇ ಭೇದಭಾವ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ನನ್ನ ಗುರಿ. ಜನರ ಈ ಪ್ರೀತಿಯ ಋಣವನ್ನು ತೀರಿಸಲು ನನ್ನ ಜೀವನದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಜೊತೆ ನಿಂತಿರುವ ಪ್ರತಿಯೊಬ್ಬ ಕಾರ್ಯಕರ್ತನೂ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬುದು ನನ್ನ ಆಶಯ."


ನಂತರ ಬೆಳ್ಳಂಕಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪಕ್ಷದ ಭೇದ ಮರೆತು ಹಲವು ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಷ್ಟ್ರವಾದಿ ಪಾರ್ಟಿಯ ಅಥರ್ ಇದ್ರಿಸ್ ನಾಯಕವಾಡಿ, ಪ್ರಮುಖರಾದ ರೇಖಾ ವಿವೇಕ್ ಕಾಂಬಳೆ, ಅಶ್ವಿನಿ ವಿನೋದ್ ಕೋಳಿ, ಶ್ವೇತಪದ್ಮ ವಿವೇಕ ಕಾಂಬಳೆ, ಸೇರಿದಂತೆ ಕಾಂಗ್ರೆಸ್‌ನ ಸಂಜಯ್ ನಾಯಕು ಮೆಂಡೆ, ಬಬಿತಾ ಮೆಂಡೆ, ಬಿಜೆಪಿಯ ಗಣೇಶ ಮಾಳಿ, ಈಶ್ವರ ಜನವಾಡೆ ಉಪಸ್ಥಿತರಿದ್ದರು.

ಜೊತೆಗೆ ರಾಮೊಗೊಂಡ ಕೇಸರಖಾನೆ, ನಿಶಾಕಾಂತ ಪಾಟೀಲ್, ಸಚಿನ ಕೆರಿಪಾಳೆ, ಪ್ರದೀಪ ಕೆರಿಪಾಳೆ, ಶ್ರೀಕಾಂತ ಪವಾರ, ಅಥಣಿ ಪುರಸಭೆ ಸದಸ್ಯ ರಿಯಾಜ್ ಸನದಿ, ಪುರಸಭೆ ಸದಸ್ಯ ಪ್ರಮೋದ ಬೀಳ್ಳೂರ, ನಾವಿದ ಖಾಜಿ, ಇರ್ಷಾದ ಮನಗೂಳಿ, ಅಬ್ದುಲ ಅಜೀಜ್ ಮುಲ್ಲಾ, ಶಮ್ಮು ಕರೋಲಿ, ವಿನಾಯಕ ಬಾಗಡೆ, ಹಾಗೂ ನಗರ ಪಾಲಿಕೆಯ ಅನೇಕ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿ ಭಾವೈಕ್ಯತೆಯ ಸಂದೇಶ ಸಾರಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ