ಯರಗಟ್ಟಿ: ತಾಲೂಕಿನ ಅಕ್ಕಿಸಾಗರ ಗ್ರಾಮದಲ್ಲಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇ? ಆದ್ಯತೆ ನೀಡುತ್ತಿರುವ ಶಾಸಕ ವಿಶ್ವಾಸ ವೈದ್ಯ ಅವರ ಪ್ರಯತ್ನದ ಫಲವಾಗಿ ಅಕ್ಕಿಸಾಗರ ಗ್ರಾಮದಲ್ಲಿ ಅಂದಾಜು ೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇತುವೆ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ರವರು ಭೂಮಿಪೂಜೆ ನೆರವೇರಿಸಿ ಮಾತಾನಾಡಿ "ಗ್ರಾಮಸ್ಥರು ಹಾಗೂ ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಗ್ರಾಮೀಣ ಸಂಪರ್ಕ ವ್ಯವಸ್ಥೆ ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ. ಸೇತುವೆ ನಿರ್ಮಾಣದಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು, ಕೃಷಿ ಉತ್ಪನ್ನಗಳನ್ನು ಸಾಗಿಸಲು ಹಾಗೂ ಮಾರುಕಟ್ಟೆ ಸೇರಿದಂತೆ ವಿವಿಧ ಅಗತ್ಯ ಕೆಲಸಗಳಿಗೆ ತೆರಳಲು ಹೆಚ್ಚಿನ ಅನುಕೂಲವಾಗಲಿದೆ.
ರೈತರ ಹಿತಕ್ಕೆ ಆದ್ಯತೆ : ಕೃಷಿ ಪ್ರಧಾನ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಹಾಗೂ ಸೇತುವೆ ಸಂಪರ್ಕ ರೈತರ ಪಾಲಿಗೆ ಅತ್ಯಗತ್ಯವಾಗಿದೆ. ಮಳೆಗಾಲ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಂಚಾರಕ್ಕೆ ಎದುರಾಗುವ ತೊಂದರೆ ನಿವಾರಣೆಯಾಗುವುದರ ಜತೆಗೆ, ಕೃಷಿ ಚಟುವಟಿಕೆಗಳಿಗೆ ವೇಗ ದೊರೆಯಲಿದೆ. ಬೆಳೆ, ರಸಗೊಬ್ಬರ, ಕೃಷಿ ಯಂತ್ರೋಪಕರಣಗಳ ಸಾಗಾಟಕ್ಕೂ ಸೇತುವೆ ಅನುಕೂಲವಾಗಲಿದೆ.
ಪಿಕೆಪಿಎಸ್ ಅಧ್ಯಕ್ಷ ಅಶೋಕ ಕುಡಚಿ ಮಾತನಾಡಿ "ಕ್ಷೇತ್ರದ ಗ್ರಾಮೀಣ ಭಾಗಗಳ ಜನರ ಬೇಡಿಕೆಗಳಿಗೆ ಸ್ಪಂದಿಸಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಗ್ರಾಮಗಳ ಸಂಪರ್ಕ ವ್ಯವಸ್ಥೆ ಸುಧಾರಣೆ, ರೈತರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಕಾಮಗಾರಿಗಳು ಹಾಗೂ ಜನರ ದೈನಂದಿನ ಬದುಕಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಅಕ್ಕಿಸಾಗರದಲ್ಲಿ ೩ ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಚಾಲನೆ ದೊರೆತಿರುವುದು ಗ್ರಾಮಸ್ಥರ ಅಭಿವೃದ್ಧಿಯತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಸೇತುವೆ ನಿರ್ಮಾಣ ಪೂರ್ಣಗೊಂಡ ಬಳಿಕ ಅಕ್ಕಿಸಾಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಸುಗಮ ಸಂಪರ್ಕ ದೊರೆಯಲಿದೆ. ರೈತರ ಕೃಷಿ ಉತ್ಪನ್ನಗಳ ಸಾಗಾಟ, ವಿದ್ಯಾರ್ಥಿಗಳ ಸಂಚಾರ, ಸಾರ್ವಜನಿಕರ ಓಡಾಟ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಇದರಿಂದ ನೇರ ಪ್ರಯೋಜನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ವಾಲಿ, ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಗೋಪಾಲ ದಳವಾಯಿ, ಮಲಿಕಸಾಬ ಬಾಗವಾನ, ವೆಂಕಣ್ಣ ಕಳ್ಳಿಗುದ್ದಿ, ಸಂತೋ? ಹಾದಿಮನಿ, ವಿಠ್ಠಲ ದೇವರೆಡ್ಡಿ, ಕಲ್ಲಪ್ಪ ದಾಸಂಗಳಿ, ಮಲ್ಲಪ್ಪ ಗಾನೂರು, ಅಶೋಕ ಸೊಪ್ಪಡ್ಲ, ಪತ್ರೆಪ್ಪ ಹೆಗ್ಗನ್ನವರ, ಶಿವಾಜಿಗೌಡ ಪಾಟೀಲ, ಬಸವರಾಜ ಕೊಟ್ರಶೆಟ್ಟಿ, ಶಿವಾನಂದ ತಪಸಿ, ಲಕ್ಷ್ಮಣ ದಳವಾಯಿ, ಲಕ್ಕಪ್ಪ ಮುರಕುಂಬಿ, ಸುರೇಶ ಇಂಚಲ, ಜಿನ್ನಪ್ಪ ಪೂಜೇರಿ, ಬಾಳಪ್ಪ ಕಂಬಾರ, ನಿರ್ವಾಣಿ ಗೊಲ್ಲಣ್ಣವರ, ಕೃ? ಐದುಡ್ಡಿ, ಗಣಪತಿ ಐದುಡ್ಡಿ, ಕಲ್ಲಪ್ಪ ಗಾಣಗಿ, ಹಣಮಂತ ಪೂಜೇರಿ, ವಿಠ್ಠಲ ತೋರಣಗಟ್ಟಿ, ಸುಭಾಸ ಸಪ್ತಸಾಗರ, ಗುಂಡಪ್ಪ ಪಾರ್ವತಿ, ನಾಗಪ್ಪ ತಪ್ಪಶಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.