Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಖರ್ಚು ಕಡಿಮೆ ಮಾಡಿ ಹೆಚ್ಚಿನ ಆದಾಯ ಪಡೆಯಲು ಸಾವಯವ ಕೃಷಿ ಉತ್ತಮ"

ಎಂ.ಕೆ. ಹುಬ್ಬಳ್ಳಿ : ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿ ಹೆಚ್ಚಿನ ಆದಾಯ ಪಡೆಯಲು ಸಾವಯವ ಕೃಷಿ ಉತ್ತಮ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರಜ್ಞ ಆರ್. ಕೆ. ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ಇವರು ಪಟ್ಟಣದ ಖಾನಾಪುರ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರದಂದು  ಬೆಳಗಾವಿ ಜಿಲ್ಲಾ ಪಂಚಾಯತ,  ಕೃಷಿ ಇಲಾಖೆ, ಕಿತ್ತೂರು ರೈತ ಸಂಪರ್ಕ ಕೇಂದ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಯೋಜನೆ ಅಡಿಯಲ್ಲಿ ಹಾಗೂ 2025 - 26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ಸೋಯಾಬಿನ್ ಬೆಳೆಗೆ ಸಮಗ್ರ ನಿರ್ವಹಣೆ ಮತ್ತು ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು  ಸಾವಯವ ಪದ್ಧತಿಯಲ್ಲಿ ಕೀಟಗಳ ಪರಿಣಾಮಕಾರಿ ಬಳಕೆಗಾಗಿ ಜೈವಿಕ ಕೀಟನಾಶಕಗಳ ಬಳಕೆ ಮಾಡಬೇಕು ರಾಸಾಯನಿಕಗಳ ಬಳಸುವಾಗ ಜಾಗೃತಿ ವಹಿಸಿ ಎಂದ ಅವರು ಕಬ್ಬಿನ ಬೆಳೆಯಲ್ಲಿ ಗೊನ್ನೆಹುಳು ನಿರ್ವಹಣೆಗೆ ಮೆಟ್ರೋಜಿಯಂ ಬಳಸಿ, ಮಣ್ಣು ಮತ್ತು ಬೀಜದಿಂದ ಬರುವ ರೋಗಗಳ ನಿರ್ವಹಣೆಗೆ ಟ್ರೈಕೋಡರ್ಮಾ, ಬದನೆ ಕಾಯಿಕೊರಕ ನಿರ್ವಹಣೆಗೆ ಟ್ರಿಕ್ಹೋಗ್ರಾಮ್ ಬಳಸುವಂತೆ ಸಲಹೆ ನೀಡಿದರು.

Advertisement

ಕಿತ್ತೂರು ಕೃಷಿ ಅಧಿಕಾರಿ ಮಂಜುನಾಥ ಕೆಂಚರಹುತ ಮಾತನಾಡಿ ಸೋಯಾಬಿನ ಬೆಳೆಯಲ್ಲಿ ಸಮಗ್ರ ನಿರ್ವಹಣೆ ಮಾಡುವ ಕುರಿತು ನೀಡಿ, 

ಈಗಾಗಲೇ ತಾಲೂಕಿನ ವಿವಿಧಡೆ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ. ಅದೇ ರೀತಿ  ಪಟ್ಟಣದಲ್ಲೂ ನೈಸರ್ಗಿಕ ಕೃಷಿ ಮಾಡಲು ರೈತರು ಮುಂದಾಗಬೇಕು ಎಂದ ಅವರು ಜೀವಾಮೃತ ತಯಾರಿಸುವ ವಿಧಾನ ತಿಳಿಸಿ ಅದರ ಬಳಕೆ ಹಾಗೂ ಅದರ ಪ್ರಯೋಜನದ ಬಗ್ಗೆ ತಿಳಿಸಿ  ಸಾವಯವ ಕೃಷಿ ಮುಂದಿನ ಪೀಳಿಗೆಗೆ ಸಹಾಯಕವಾಗುವುದರೊಂದಿಗೆ ಮಕ್ಕಳ ಆರೋಗ್ಯವು ಉತ್ತಮವಾಗಿರುವುದು ಇದರಿಂದ ಸ್ವಸ್ಥ ಭಾರತ ನಿರ್ಮಾಣ ಮಾಡಲು ಸಾಧ್ಯ. ರಾಸಾಯನಿಕ ಕಡಿಮೆ ಬಳಕೆ,  ಸಾವಯವ ಕೃಷಿ ಮಾಡಲು ರೈತರು ಹೆಚ್ಚು ಆದ್ಯತೆ. ಇದರಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭ ಪಡೆಯಲು ಸಾಧ್ಯವಾಗುವುದು ಎಂದರು

ಈ ವೇಳೆ ಪಟ್ಟಣದ ನಾಗರಿಕರಾದ ಚಿನ್ನಪ್ಪ ಮುತ್ನಾಳ ಮಾತನಾಡಿದರು. 

ಈ ವೇಳೆ ಕೃಷಿ ಅಧಿಕಾರಿಗಳಾದ  ಎಸ್.ಐ. ನಿಂಬಲಗುಂದಿ ಶ್ರೀ ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರಾದ ಜನಾರ್ಧನ ಸೇರಿದಂತೆ ಪಟ್ಟಣದ ಅನೇಕ ಪ್ರಗತಿಪರ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋಮೇಶ್ವರ ಸಂಸ್ಥೆಗೆ ಸುವರ್ಣ ಮಹೋತ್ಸವ ಸಂಭ್ರಮನಟನೆ ಮತ್ತು ವ್ಯಕ್ತಿತ್ವ ಎರಡರಿಂದಲೂ ಜನರ ಹೃದಯಕ್ಕೆ ಹತ್ತಿರವಾದ ವ್ಯಕ್ತಿ ಅಪ್ಪು- ಕೆ ವಿ ಪ್ರಭಾಕರ್ಯಾಳವಾರ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಸುವರ್ಣ ಮಹೋತ್ಸವಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ಸಚಿವ ಸತೀಶ ಜಾರಕಿಹೊಳಿಶಾಲಾ ನಿರ್ವಹಣಾ ಪೋಷಕರ ಸಮಿತಿ ಸಭೆಯಲ್ಲಿ ಡಾ.ಸಂತೋಷ ಎಲ್.ಮಗದುಮ ಅಭಿಪ್ರಾಯವಿವಿದೆಡೆ ಡಿಸಿ ಭೇಟಿ ಎಸ್.ಐ.ಆರ್ ಪ್ರಗತಿ ಪರಿಶೀಲನೆಪ್ರಸ್ತುತ ದಿನದಲ್ಲಿ ಸಂಸ್ಕಾರಯುತ ಶಿಕ್ಷಣ ಅತ್ಯವಶ್ಯಕ 33 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಶಾಸಕ ನಿಖಿಲ ಕತ್ತಿ ಚಾಲನೆ"ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯಾಗಿದೆ"ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಗ