ಕುಕನೂರು : ಸಚಿವ ರಾಯರಡ್ಡಿಯವರು ನಮ್ಮ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹದಲ್ಲಿ ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿರುವ ಹೇಳಿಕೆಯಲ್ಲಿ ತಪ್ಪೆನಿಲ್ಲಾ, ಸಚಿವ ರಾಯರಡ್ಡಿಯವರು ಮುಸ್ಲಿಂ ಸಮುದಾಯದ ಮದುವೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಮುದಾಯ ಹೊಗಳಿದ್ದಾರೇ ಹೊರತು, ಯಾವುದೇ ಸಮಾಜ, ಸಮುದಾಯಗಳು ಶ್ರೇಷ್ಠವಲ್ಲಾ ಎಂದು ಹೇಳಿಲ್ಲಾ, ಇದನ್ನು ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಕೇಲವೊಂದಿಷ್ಟು ಜನ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ತಿರುಚಲಾಗಿದೆ ಎಂದು ಖಾಸಿಂಸಾಬ ತಳಕಲ್ ಅಭಿಪ್ರಾಯ ಮಂಡಿಸಿದರು.
ಅವರು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸಚಿವ ರಾಯರಡ್ಡಿಯವರ ಹೇಳಿಕೆ ಕುರಿತು ಸ್ಪಷ್ಟಿಕರಣ ನೀಡಿ ಮಾತನಾಡಿ ಸಚಿವ ರಾಯರಡ್ಡಿಯವರು ದೂರ ದೃಷ್ಠಿ ನಾಯಕರಾಗಿದ್ದು, ಇವರು ಕ್ಷೇತ್ರದಲ್ಲಿ ಕೇವಲ ಒಂದೇ ಸಮುದಾಯದ ಅಭಿವೃದ್ದಿ ಮಾಡಿಲ್ಲಾ ಎಲ್ಲಾ ಸಮುದಾಯಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಕೇವಲ ಮುಸ್ಲಿಂ ಸಮುದಾಯವಲ್ಲದೇ ಎಲ್ಲಾ ಸಮಾಜಗಳ ದೇವಸ್ಥಾನ, ಮಹನೀಯರನ್ನೊಳಗೊಂಡ ಮೂರ್ತಿಗಳ ಅಭಿವೃದ್ದಿಗೆ ಮಹತ್ವ ನೀಡಿದ್ದಾರೆ ಎಂದರು.
ಕೇಲವೊಂದಿಷ್ಟು ಜನ ಓಟ್ ಬ್ಯಾಂಕ್ ಗಾಗಿ ಸಮುದಾಯ ಓಲೈಕೆ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ, ಎನ್ನುವುದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದರು.
ಯಾವುದೇ ಸಮುದಾಯಗಳ ಕಾರ್ಯಕ್ರಮಕ್ಕೆ ಯಾರೇ ಹೋದರು, ಆ ಸಮುದಾಯ ಮತ್ತು ಸಮಾಜಗಳನ್ನು ಹೊಗಳಲೇ ಬೇಕು, ಆದರೆ ಇದರಲ್ಲಿ ಯಾವ ಸಮಾಜವನ್ನು ನಿಂದಿಸುವ ಉದ್ದೇಶದಿಂದ ಅವರು ಮಾತನಾಡಿಲ್ಲಾ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ರಫೀಸಾಬ ಹಿರೇಹಾಳ, ರೆಹಮಾನ್ ಸಾಬ ಮಕ್ಕಪ್ಪನವರ್, ರಾಜಾಸಾಬ ಕುದರಿ, ಶಿರಾಜ್ ಕರಮುಡಿ, ರಷೀದ್ ಸಾಬ ಉಮಚಗಿ, ಅಲ್ಲಾವುದ್ದಿನ್ ಯಮ್ಮಿ, ನೂರಬಾಬಾ ಗುಡಿಹಿಂದಲ್, ವಾಹಿದ್ ಪಾಷ ಕಾಯಗಡ್ಡಿ ಸೇರಿದಂತೆ ಇನ್ನಿತರರು ಇದ್ದರು.