ರಾಮದುರ್ಗ: ದೃಷ್ಠಿಮಾಂದ್ಯರಿಗೆ ಪ್ರತಿ ತಿಂಗಳು ಉಚಿತ ಕಣ್ಣು ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಿ ದೃಷ್ಠಿ ನೀಡುವ ರಾಮದುರ್ಗ ಲಯನ್ಸ್ ಕ್ಲಬ್ ನ ಕಾರ್ಯ ನಿಜಕ್ಕೂ ಅರ್ಥಪೂರ್ಣ ಸಮಾಜ ಸೇವೆಯಾಗಿದೆ ಎಂದು ಡಾ| ಸಿ.ಜಿ. ಅಗಡಿ ಹೇಳಿದರು.
ಸ್ಥಳೀಯ ಲಯನ್ಸ್ ಕ್ಲಬ್ ಹಾಗೂ ಹುಬ್ಬಳ್ಳಿಯ ಡಾ| ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದ ಮೂಲಕ ರಾಮದುರ್ಗ ಲಯನ್ಸ್ ಕ್ಲಬ್ ಕಳಿಸಿಕೊಟ್ಟ ೩೮ ಜನರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿಕೊಂಡು ಬಂದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಸದಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಈಗಾಗಲೇ ಸಾಕಷ್ಟು ಐ ಕ್ಯಾಂಪಗಳ ಮೂಲಕ ಲಕ್ಷಾಂತರ ಜನರಿಗೆ ದೃಷ್ಠಿ ನೀಡಿದ ತೃಪ್ತಿ ಸಂಸ್ಥೆಯದಾಗಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಸ್.ಎಂ. ಸಕ್ರಿ, ಖಜಾಂಚಿ ಬಿ.ಪಿ. ಅರಳಿಮಟ್ಟಿ ಹಾಗೂ ಪ್ರಭಾಕರ ಕಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.