ಗುರ್ಲಾಪುರ(6):- ಕಬಡ್ಡಿ ಆಟ ಒಂದು ನಾಣ್ಯದ ಎರಡು ಮುಖವಿದ್ದ ಹಾಗೆ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ ಕ್ರೀಡಾಮನೋಭಾವನೆಯಿಂದ ಆಟವಾಡಬೇಕು ಎಂದು ಕರ್ನಾಟಕ ರಾಜ್ಯ ಯುವ ಸಂಘದ ಒಕ್ಕೂಟದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಗುರ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ನಿಮಿತ್ಯವಾಗಿ ಜೈ ಹನುಮಾನ ಕಬಡ್ಡಿ ಟೀಮ್ ಮತ್ತು ಕನ್ನಡ ಅಭಿಮಾನಿಗಳ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಶಿವನಪ್ಪ ಡಬಳೇಶ್ವರ ಇವರ ಸವಿನೆನಪಿಗಾಗಿ ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅನುಮತಿಯೊಂದಿಗೆ ಅಂತರ್ ರಾಜ್ಯ ಮಟ್ಟದ 58-60 ಕೆ.ಜಿ. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಪಂದ್ಯಾವಳಿಗಳು ಸುಸೂತ್ರವಾಗಿ ಜರುಗಲು ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನ ಉತ್ಸಾಹಿ ಯುವಕರ ಶ್ರಮ ದಿಂದ ಯಶಸ್ವಿಯಾಗುತ್ತವೆ ಎಂದು ಹೇಳಿದರು.
ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ ವಾಯ.ಎಸ್ ಬಿಸನಾಳ್ ಮಾತನಾಡಿ ನಮ್ಮ ದೇಶದ ಮೂಲ ಆಟವೆ ಕಬಡ್ಡಿ ನಮ್ಮ ದೇಶದ ಪುರುಷ ಹಾಗೂ ಮಹಿಳಾ ತಂಡಗಳು ಏಷ್ಯನ್ ಗೇಮ್ಸ್ ನಲ್ಲಿ ಪ್ರಭುತ್ವವನ್ನು ಸಾಧಿಸಿರುವುದನ್ನು ತಾವು ನೋಡಿದ್ದೀರಿ ನೀವು ಸಹ ಕ್ರೀಡಾಮನೋಭಾವನೆಯಿಂದ ಆಟದಲ್ಲಿ ಪಾಲ್ಗೊಳ್ಳಿ ನಿರ್ಣಾಯಕರ ನಿರ್ಣಯಕ್ಕೆ ಬದ್ಧರಾಗಿರಬೇಕು ಅಪರಾಧಿ ಜೀವನದಿಂದ ದೂರವಿದ್ದು ನಿಮ್ಮ ಸುಂದರ ಜೀವನವನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.
ಪರಪ್ಪ ಮುಗುಳಖೋಡ ಮಾತನಾಡಿ ನಮ್ಮೂರಿನ ದೈತ್ಯ ಕಬಡ್ಡಿ ಪ್ರತಿಭೆ ದಿ.ಶಿವನಪ್ಪ ಡವಳೇಶ್ವರ ಇವರಸವಿ ನೆನಪಿಗಾಗಿ ನಡೆಯುವ ಕಬ್ಬಡ್ಡಿ ಮಾಸದ ನೆನಪಾಗಿ ಉಳಿದಿವೆ ನೀವು ಸಹ ಕೆಚ್ಚೆದೆಯಿಂದ ಆಟವಾಡಿ ಹೆತ್ತವರು ಸಂತಸ ಪಡುವ ಹಾಗೆ ದೇಶ ನೆನಪಿಸಿಕೊಳ್ಳುವ ಹಾಗೆ ನಿಮ್ಮ ಚಾಪು ಮೂಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆ ಮೂ ಶಿವರುದ್ರಯ್ಯ ಹಿರೇಮಠ್ ಶಿವಾನಂದ ಹಿರೇಮಠ,ರೇವಪ್ಪ ನೇಮಗೌಡ ರೈತ ಸಂಘದ ಬಾಬುರಾವ್ ಪಾಟೀಲ್, ಸಿದ್ದಪ್ಪ ಕೌಜಲಗಿ, ಮಂಜು ಹುಣಶ್ಯಾಳ,ಕರಿಯಪ್ಪ ಹನಗಂಡಿ, ಆನಂದ್ ಟಪಾಲ್ದಾರ್, ಸಿದ್ದು ಗಡ್ಡೆಕರ್, ಆರ್ ಸಿ ಸತ್ತಿಗೇರಿ, ಅಶೋಕ್ ಗಾಣಿಗೇರ್, ಶಿವಾನಂದ್ ದೇವಾಪರಟ್ಟಿ, ಹಾಗೂ ಜೈ ಹನುಮಾನ ಕಬಡ್ಡಿ ಟೀಮ್ ಮತ್ತು ಕನ್ನಡ ಅಭಿಮಾನಿ ಬಳಗದ ಸರ್ವ ಸದಸ್ಯರು ಅನೇಕರು ಉಪಸ್ಥಿತರಿದ್ದರು. ಪ್ರಥಮ ಬಹುಮಾನ ಬೆಳಗಾವಿ ಜಿಲ್ಲಾ ತಂಡ,ದ್ವಿತೀಯ ಶ್ರೀ ಮಹಾಲಕ್ಷ್ಮಿ ನಾಗನೂರ, ತೃತೀಯ ಜೈ ಹನುಮಾನ್ ಕಬಡ್ಡಿ ಟೀಮ್ ಗುರ್ಲಾಪೂರ, ಚತುರ್ಥ ಮಹಾಲಕ್ಷ್ಮಿ ಕುಲಹಳ್ಳಿ ಈ ತಂಡ ಬಹುಮಾನ ಪಡೆದವು.
ಕಾರ್ಯಕ್ರಮದ ಸ್ವಾಗತ ಮಹದೇವ ಕುಲಗೂಡ.ನಿರೂಪಣೆ ವಂದನಾರ್ಪಣೆ ಕಾಶಿನಾಥ ಅಂಬಿಗೇರ ನೆರವೇರಿಸಿದರು.